ಶಿಡ್ಲಘಟ್ಟ : ತಾಲೂಕಿನ ಜಿ ಕುರುಬರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಾಗಿ ಶ್ರೀನಿವಾಸಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಬೆಂಬಲಿತ ನೂತನ ನಿರ್ದೇಶಕರುಗಳಾದ ವೆಂಕಟೇಶಪ್ಪ, ವೆಂಕಟ ಕೃಷ್ಣಪ್ಪ, ವೆಂಕಟ ಲಕ್ಷ್ಮಮ್ಮ, ಶಿವಣ್ಣ, ಮಂಜುನಾಥ್ ರವರು ಶಾಸಕರಾದ ಬಿ ಎನ್ ರವಿಕುಮಾರ್ ಅವರನ್ನ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಅಭಿನಂದನೆಗಳು ಸಲ್ಲಿಸಿದರು ಈ ಸಂದರ್ಭದಲದಲಿ ಸಿಹಿ ಹಂಚಲಾಯಿತು.
ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ಸಹಕಾರ ಸಂಘವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ರೈತರಿಗೆ ನೆರವಾಗುವಂತ ರೀತಿಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು
ಸಂದರ್ಭದಲ್ಲಿ ಗ್ರಾಮದ ಜೆಡಿಎಸ್ ಮುಖಂಡರುಗಳಾದ ಬೈರಾ ರೆಡ್ಡಿ, ದೇವರಾಜ್, ಚಲಪತಿ, ದೇವಪ್ಪ ವೆಂಕಟೇಶಪ್ಪ, ಶಿವಕುಮಾರ್, ಬಾವರೆಡ್ಡಿ, ಬಚರೆಡ್ಡಿ ಟಿವಿ ಮುನಿಯಪ್ಪ , ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.