Thursday, January 16, 2025
Homeಜಿಲ್ಲೆನಾಡಿಗೆ ವಿಶ್ವ ಕವಿ ಕುವೆಂಪು ಅವರ ಕೊಡುಗೆ ಅಪಾರ: ಬಿ.ಇ.ಓ. ನರೇಂದ್ರ ಕುಮಾರ್ ಅಭಿಮತ.  

ನಾಡಿಗೆ ವಿಶ್ವ ಕವಿ ಕುವೆಂಪು ಅವರ ಕೊಡುಗೆ ಅಪಾರ: ಬಿ.ಇ.ಓ. ನರೇಂದ್ರ ಕುಮಾರ್ ಅಭಿಮತ.  

ಕಸಾಪ ದಿಂದ ವಿಶ್ವ ಕವಿ ಕುವೆಂಪು ಜನ್ಮ ದಿನಾಚರಣೆ. ಹೋಬಳಿ ಘಟಕದ ನೂತನ ಅಧ್ಯಕ್ಷರ ನೇಮಕ.

ʼಸಂವಿಧಾನ ಶಕ್ತಿ ನ್ಯೂಸ್‌ʼ ಶಿಡ್ಲಘಟ್ಟ : ಕನ್ನಡ, ನಾಡು, ನುಡಿ, ಭಾಷೆ, ಸಂಸ್ಕೃತಿಗೆ ವಿಶ್ವ ಕವಿ ಕುವೆಂಪು ಅವರ ಕೊಡುಗೆ ಅಪಾರವಾದದ್ದು, ಕನ್ನಡದ ಪುಸ್ತಕಗಳನ್ನು ಓದುವ ಅವ್ಯಾಸವನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು. ಮಕ್ಕಳಿಗೆ ನಮ್ಮ ಭಾಷೆ, ನಮ್ಮ ರಾಜ್ಯ, ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ವಾತಾವರಣ ಮನೆ ಮತ್ತು ಶಾಲೆಯಿಂದಲೇ ಕಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ನರೇಂದ್ರ ಕುಮಾರ್  ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಸರ್ಕಾರಿ ಪ್ರೌಢಶಾಲೆ (ಕೆಪಿಎಸ್) ಶಾಲೆಯಲ್ಲಿ ಕಸಾಪ  ವತಿಯಿಂದ ಆಯೋಜಿಸಿದ್ದ ವಿಶ್ವಮಾನ ಕುವೆಂಪು ಜನ್ಮ ದಿನಾಚರಣೆ  ಹಾಗೂ ಕಸಾಪ ಬಶೆಟ್ಟಹಳ್ಳಿ ಹೋಬಳಿ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷರಾದ ಪಟೇಲ್ ನಾರಾಯಣಸ್ವಾಮಿ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಸಾಪ ನಡೆ, ಶಾಲೆಗಳ ಕಡೆ ಎಂಬ ಅಭಿಯಾನ ನಡೆಸುತ್ತಿದ್ದು, ನಮ್ಮ ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ಭಾಷೆ, ನಾಡಿಗೆ ಅನೇಕ ಮಹನೀಯರು ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ಆದರ್ಶಗಳು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.  ಜೊತೆಗೆ ಕನ್ನಡದ  ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಹೋಬಳಿ ಘಟಕದ  ಕಸಾಪ ಅಧ್ಯಕ್ಷರಾಗಿ ತಿಮ್ಮನಾಯಕನಹಳ್ಳಿ ಶ್ರೀರಾಮರೆಡ್ಡಿ ಸಿ. ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪೋಷಕರಾದ ಹೆಚ್ ಎನ್ ಬಚ್ಚೇಗೌಡ,            ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಟಿ.ವಿ ಚಂದ್ರಶೇಖರ್, ಮುನಿನಾರಾಯಣಪ್ಪ, ಕಸಾಪ ಮಾಜಿ ಅಧ್ಯಕ್ಷ ವಿ ಕೃಷ್ಣ, ಎನ್.ಪಿ.ಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗಜೇಂದ್ರ, ತಾಲ್ಲೂಕು ಕೋಶಾಧ್ಯಕ್ಷರಾದ ಎಂ. ದೇವರಾಜು,  ಹೆಚ್.ಎಂ. ನಾರಾಯಣಸ್ವಾಮಿ, ಎನ್.ಎಸ್ ಸುಂದರ್, ಶ್ರೀರಾಮರೆಡ್ಡಿ, ನಾಗೇಶ್, ಚಿಕ್ಕವೆಂಕಟರಾಯಪ್ಪ, ಸಂತೋಷ್, ದಾಸಣ್ಣ, ಬಶೆಟ್ಟಹಳ್ಳಿ ಗ್ರಾ.ಪಂ. ಸದಸ್ಯ ಮಂಜುನಾಥ, ಕಲಾವಿದ ಸಿ.ಎನ್ ಮುನಿರಾಜು,  ಮುಖ್ಯ ಶಿಕ್ಷಕರಾದ ಜಯಲಕ್ಷ್ಮೀ ಸಿ.ಎಸ್  ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೋನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!