ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮ. ಜಾತಿ ಧರ್ಮ, ಅಂತಸ್ತು ನೋಡದೇ ಮತದಾನ ಮಾಡಲು ಕರೆ.
ಶಿಡ್ಲಘಟ್ಟ : 2024ರ ಲೋಕಸಭೆ ಚುನಾವಣೆ ಹಿನ್ನೆಲೆ ತಾಲ್ಲೂಕು ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ತಾಲ್ಲೂಕಿನ ಎಲ್ಲಾ ಪತ್ರಕರ್ತರು ಪ್ರಪ್ರಥಮ ಬಾರಿಗೆ ಚುನಾವಣಾ ಮತದಾನ ಜಾಗೃತಿ ಅಭಿಯಾನವನ್ನು ನಡೆಸಿದರು. ನಗರದ ತಾಲ್ಲೂಕು ಪಂಚಾಯಿತಿ ಆವರಣದಿಂದ ಪ್ರಾರಂಭವಾಗಿ ಟಿ ಬಿ ರಸ್ತೆಯ ಮಾರ್ಗವಾಗಿ ಕಾಲ್ನಡಿಗೆ ಮೂಲಕ ಬಸ್ ನಿಲ್ದಾಣದವರೆಗೆ ಮೆರವಣಿಗೆ ಜಾಥಾ ನಡೆಸಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿರಿಗೆ ಮತದಾನ ಕುರಿತು ಅರಿವು ಮೂಡಿಸಲಾಯಿತು.
ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಯಾನದಲ್ಲಿ ಭಾಗವಹಿಸಿ ಸಾಥ್ ನೀಡಿದರು. ಪ್ರಜಾಪ್ರಭುತ್ವದ ಯಶಸ್ವಿಗಾಗಿ ತಪ್ಪದೇ ಮತಚಲಾಯಿಸಿ, ಚುನಾವಣಾ ಪರ್ವ, ದೇಶದ ಗರ್ವ ಎಂದು ಘೋಷಣೆಗಳು ಕೂಗಿದರು. ಚುನಾವಣಾ ಜಾಗೃತಿ ಕುರಿತು ಅಧ್ಬುತ ಸಾಲುಗಳು ಮುದ್ರಿಸಿರುವ ಬಿಳಿ ಟೀ ಶರ್ಟ್ ಧರಿಸಿ, ತಲೆಗೆ ಟೋಪಿ ಹಾಕಿಕೊಂಡು ಬಿಸಿಲನ್ನು ಲೆಕ್ಕಿಸಿದೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲಾಯಿತು.
ಪತ್ರಕರ್ತ ಕೋಟಹಳ್ಳಿ ಅನಿಲ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ ಜನರಿಗೆ ಚುನಾವಣೆ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ತಾಲ್ಲೂಕಿನ ಎಲ್ಲಾ ಪತ್ರಕರ್ತರು ಸೇರಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ರಾಜಕಾರಣದಲ್ಲಿ ದೊಡ್ಡ ಶಕ್ತಿಯಿದೆ ಐಎಎಸ್ ಮತ್ತು ಐ ಪಿಎಸ್ ಹುದ್ದೆಗಳಲ್ಲಿರುವ ದೊಡ್ಡ ದೊಡ್ಡ ಅಧಿಕಾರಿಗಳು ಸಹ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ರಾಜಕೀಯಕ್ಕೆ ಬರುತ್ತಿದ್ದಾರೆ. ಚುನಾವಣೆ, ರಾಜಕಾರಣದಲ್ಲಿ ದೊಡ್ಡ ಶಕ್ತಿಯಿದೆ. ಇದನ್ನು ಜನರು ಅರಿತುಕೊಳ್ಳಬೇಕಾಗುತ್ತದೆ. ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಅವರು 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಯಾವುದೇ ಜಾತಿ, ಧರ್ಮ, ಅಂತಸ್ತು ನೋಡದೇ ಉತ್ತಮ ವ್ಯಕ್ತಿಗಳನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ದೇಶದ ಉತ್ತಮ ಆಡಳಿತ ಅಭಿವೃದ್ದಿಗಾಗಿ ಪ್ರಜಾಪ್ರಭುತ್ವದ ಯಶಸ್ವಿಗಾಗಿ ಪ್ರತಿಯೊಬ್ಬರು ಮತವನ್ನು ಚಲಾಯಿಸುವ ಮೂಲಕ ದೇಶದ ಅಭಿವೃದ್ದಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ನಂತರ ಹಿರಿಯ ಪತ್ರಕರ್ತ ವೀರಾಪುರ ಮಂಜುನಾಥ ಮಾತನಾಡಿ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು, ಆರೋಗ್ಯ ಇಲಾಖೆಯ ದೇವರಾಜ್, ಸಿಡಿಪಿಓ ನೌತಾಜ್, ಅಕ್ಷರ ದಾಸೋಹ ಇಲಾಖೆಯ ಆಂಜನೇಯ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಆರ್ ರವಿ ನಗರ ಠಾಣೆ ಪಿ.ಎಸ್ ಐ ವೇಣುಗೋಪಾಲ್, ಹಾಗೂ ಪತ್ರಕರ್ತರಾದ, ಸಿವಿ ಲಕ್ಷ್ಮಣ ರಾಜು, ಮುನೇಗೌಡ, ರೂಪಸಿ ರಮೇಶ್, ಕರಗಪ್ಪ, ಜಗದೀಶ್ ಬಾಬು, ಮಲ್ಲಿಕಾರ್ಜುನ, ಛಾಯಾ ರಮೇಶ್, ವೀರಾಪುರ ಮಂಜುನಾಥ, ಕೋಟಹಳ್ಳಿ ಅನಿಲ್ ಕುಮಾರ್, ಗೊರಮಡಗು ಲೊಕೇಶ್, ರಾಮದಾಸು, ಅರುಣ್ ಸಿಂಗ್, ನರಸಿಂಹಗೌಡ, ನವೀನ್ ಕುಮಾರ್, ಗೋವರ್ಧನ್, ಮಾನಸ್, ರಾಜೇಶ್, ಮಿಥುನ್ ಕುಮಾರ್, ಬಚ್ಚಹಳ್ಳಿ ಲೋಕೇಶ್, ಮಂಜುನಾಥ, ಶಿವಕುಮಾರ್, ಗುರುಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.