ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಬೈಕ್ ರ್ಯಾಲಿ
ಶಿಡ್ಲಘಟ್ಟ : ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಾವು ಚುನಾವಣೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಸಕ್ರಿಯವಾಗಿ ನಡೆಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಯೂರುತ್ತದೆ ಆ ಒಂದು ದೃಷ್ಟಿಯಿಂದ ಚುನಾವಣೆ ಸಕ್ರಿಯವಾಗಿ ನಡೆಯಬೇಕಾದರೆ 18 ವರ್ಷ ಮೇಲ್ಪಟ್ಟ ಎಲ್ಲಾ ಮತದಾರರು ಶೇಕಡಾ 100 ರಷ್ಟು ಮತ ಚಲಾವಣೆ ಮಾಡಬೇಕು ಯಾವುದೇ ಆಮಿಷಗಳಿಗೆ ಒಳಗಾಗಬಾರದು ಮತ್ತು ಮತದಾನದ ಅರಿವನ್ನು ಎಲ್ಲರಿಗೂ ತಲುಪಿಸಬೇಕಾಗುತ್ತದೆ ಎಂದು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ತಾಲೂಕು ಸ್ವೀಪ್ ಸಮಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಜಾಗೃತಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದರು.
ಯಾರು ಮತದಾನದಿಂದ ವಂಚಿತರಾಗಬಾರದು ತಪ್ಪದೇ ಕಡ್ಡಾಯವಾಗಿ ಎಲ್ಲರೂ ತಮ್ಮ ತಮ್ಮ ಕುಟುಂಬಗಳ ಜೊತೆ ಸೇರಿ ಮತ ಚಲಾವಣೆ ಮಾಡಿ, ಆ ದಿನ ನಾವು ದೇಶಸೇವೆ ಮಾಡುವ ದಿನವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಆರ್ ನಾರಾಯಣಸ್ವಾಮಿ, ಎನ್‌ಪಿಎಸ್ ತಾಲೂಕು ಅಧ್ಯಕ್ಷ ಗಜೇಂದ್ರ, ನರಸಿಂಹರಾಜು, ಸುಂದರಾಚಾರಿ, ಸುದರ್ಶನ್, ರೆಹಮಾನ್, ಅಶ್ವಥ್ ಮುಂತಾದ ಶಿಕ್ಷಕರು ಹಾಜರಿದ್ದರು.