ಚಿಕ್ಕಬಳ್ಳಾಪುರ,: ತಾಲ್ಲೂಕಿನ ರೈತರು ಕೀಟನಾಶಕಗಳನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುತ್ತಿರುತ್ತಾರೆ. 6 ತಿಂಗಳ ಮುಂಚಿತವಾಗಿ ಕೃಷಿ ಇಲಾಖೆಯ ಸಿಬ್ಬಂದಿಯ ಸಹಕಾರದಿಂದ ತಾಲ್ಲೂಕಿನ ಕೀಟನಾಶಕ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುವ ಕೀಟನಾಶಕಗಳು ಹಾಗೂ ಶಿಫಾರಸ್ಸು ಮಾಡುವ ವಿವರಗಳನ್ನು ಸರ್ವೆ ಮಡಲಾಗಿರುತ್ತದೆ. ಸರ್ವೆವರದಿಯನ್ವಯ ಎಲ್ಲಾ ರೈತರು ಕೀಟನಾಶಕಗಳನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುತ್ತಿರುತ್ತಾರೆ. ವರದಿಯ ಪ್ರಕಾರ ಜಿಲ್ಲೆಯ ರೈತರ ಕೀಟನಾಶಕ ಬಳಕೆ ಪ್ರಮಾಣವು ರಾಷ್ಟ್ರೀಯ ಸೂಚ್ಯಂಕಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿ ಬಳಸುತ್ತಿರುತ್ತಾರೆ. ಈ ವಿಷಯವನ್ನು ಮನಗಂಡು ಕೃಷಿ ಇಲಾಖೆ ಮೊದಲ ಹಂತದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಜ್ಣಾನಿಗಳ ಮೂಲಕ ತರಬೇತಿ ನೀಡಿ ಎಲ್ಲಾ ಬೆಳೆಗಳಿಗೆ ಶಿಫಾರಸ್ಸಿನಂತೆ ಕೀಟನಾಶಕಗಳನ್ನು ವಿತರಿಸಲು ಸೂಚಿಸಲಾಗಿರುತ್ತದೆ. ಮುಂದುವರೆದು ರೈತರಿಗೆ ಕೀಟನಾಶಕಗಳನ್ನು ಶಿಫಾರಸ್ಸಿನಂತೆ ಬಳಸಲು ವಿಶೇಷ ಆಂದೋಲನ ಹಮ್ಮಿಕೊಂಡು ಕೃಷಿ ವಿಜ್ಞಾನಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.ಇದರ ಮೊದಲ ಭಾಗವಾಗಿ ಕಸಬಾ ಹೋಬಳಿಯ ಆವಲಗುರ್ಕಿ ಗ್ರಾಮದಲ್ಲಿ ಶಿಫಾರಸ್ಸಿನಂತೆ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಮುನಿರಾಜು ಸಿ ರವರು ಎಲ್ಲಾ ರೈತರು ಶಿಫಾರಸ್ಸಿಗಿಂತ ಹೆಚ್ಚಾಗಿ ಪೀಡೆನಾಶಕಗಳನ್ನು ಬಳಸುತ್ತಿರುವುದು ಇಲಾಖೆಯ ಸರ್ವೇ ಮೂಲಕ ದೃಡಪಟ್ಟಿರುತ್ತದೆ.ರೈತರು ತುರ್ತಾಗಿ ರೋಗ ಮತ್ತು ಕೀಟಗಳನ್ನು ಹತೋಟಿ ಮಾಡಲು ಶಿಫಾರಸ್ಸಿಗಿಂತ ಹೆಚ್ಚಾಗಿ ಅವೈಜ್ನಾನಿಕ ರೀತಿಯಲ್ಲಿ ಬಳಸುತ್ತಿರುತ್ತಾರೆ. ಇದರಿಂದ ಮಣ್ಣು, ವಾತಾವರಣ ಹಾಗೂ ಆಹಾರ ಪದಾರ್ಥಗಳು ವಿಷಯುಕ್ತವಾಗುತ್ತಿದ್ದು, ಇತ್ತೀಚೆ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗಾಗಿ ವಾತಾವರಣ ಮತ್ತು ಮಣ್ಣು ಆರೋಗ್ಯದಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳುವುದು ಅವಶ್ಯವಿರುವುದರಿಂದ ವಿಜ್ಣಾನಿಗಳ ಶಿಫಾರಸ್ಸಿನಂತೆ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕೀಟನಾಶಕಗಳ ಬಳಕೆ ಮಾಡಲು ವಿನಂತಿಸಿದರು.
ಕೃಷಿ ವಿಜ್ಣಾನ ಕೇಂದ್ರದ ಕೃಷಿ ವಿಜ್ಙಾನಿಗಳಾದ ಡಾ. ಸ್ವಾತಿ ರವರು ತಾಲ್ಲೂಕಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾದ ದ್ರಾಷ್ಕಿ, ದಾಳಿಂಬೆ, ಆಲೂಗಡ್ಡೆ, ಟಮೋಟೋ, ರೋಝ್, ಸೇವಂತಿಗೆ ಬೇಳೆಗಳಲ್ಲಿ ಕಾಣಿಕೊಳ್ಳುವ ಪ್ರಮುಖ ರೋಗ ಮತ್ತು ಕೀಟಗಳ ಹತೋಟಿ ಕ್ರಮಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಪ್ರಮುಖವಾಗಿ ರೈತರು ಕೇವಲ ಕೀಟನಾಶಕಗಳಲ್ಲದೆ ಸಮಗ್ರ ಪೀಡೆನಾಶಕ ಕ್ರಮಗಳನ್ನು ಅನುಸರಿಸಿದರೆ ರೋಗ ಮತ್ತು ಕೀಟಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದು ಎಂದು ತಿಳಿಸಿದರು. ಬಾಯರ್ ಹಾಗೂ ಸುಮಿಟೋಮೋ ಸಂಸ್ಥೆಯ ಪ್ರತಿನಿಧಿಗಳಾದ ಮಾರ್ಟಿನ್ ಹಾಗೂ ಬಸವರಾಜು,ಪುನೀತ್ ರವರುಗಳು ವಿಜ್ಣಾನಿಗಳ ಶಿಫಾರಸ್ಸಿನಂತೆ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕೀಟನಾಶಕಗಳ ಬಳಕೆ ಮಾಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಆವಲಗುರ್ಕಿ ವ್ಯವಸಾಯ ಸೇವಾಸಹಕಾರ ಸಂಘದ ಅದ್ಯಕ್ಷರಾದ ಜಯರಾಮರೆಡ್ಡಿರವರು, ಉಪಾದ್ಯಕ್ಷರಾದ ಬೈರಪ್ಪರವರು, ಸಂಘದ ನಿರ್ದೇಶಕರುಗಳು, ಕೃಷಿ ಅಧಿಕಾರಿ ರಾಮಚಂದ್ರ, ಹಾಗೂ ಸಿಬ್ಬಂದಿ ಶ್ರೀಮತಿ ಅರುಣ, ಗಾಂಧಿ ಕೃಷಿ ವಿಜ್ನಾನ ಕೇಂದ್ರದ ವಿಧ್ಯಾರ್ಥಿಗಳು ಹಾಗೂ ರೈತ ಬಾಂಧವರು ಭಾಗವಹಿಸಿದ್ದರು.