ಸೀಕಲ್ ರಾಮಚಂದ್ರ ಗೌಡರ ಟ್ರೈ ಲೈಪ್ ಆಸ್ಪತ್ರೆ ಉದ್ಘಾಟಿಸಿದ : ಸಚಿವ ಕೃಷ್ಣ ಬೈರೇಗೌಡ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ.
ಬೆಂಗಳೂರು: ಬೆಂಗಳೂರಿನ ಕಲ್ಯಾಣ ನಗರದ 7 ನೇ ರಸ್ತೆಯಲ್ಲಿರುವ ಟ್ರೈ ಲೈಪ್ ಹಾಸ್ಪಿಟಲ್ OPD ವಿಭಾಗದ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ 200 ಬೆಡ್ ವ್ಯವಸ್ಥೆಯಿರುವ ಆಸ್ಪತ್ರೆಯನ್ನು ರಾಜ್ಯದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣಬೈರೇಗೌಡ ಹಾಗೂ ಮಾಜಿ ಸಚಿವರಾದ ಜಿ.ಟಿ ದೇವೇಗೌಡ ಅವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ತುಂಬಿದ ಕೊಡ ತುಳಕಲ್ಲ ಎಂಬ ಮಾತು ಅಕ್ಷರಶಃ ಸತ್ಯ ಸರಳ ವ್ಯಕ್ತಿತ್ವ ಜನಸ್ನೇಹಿ ಕೋಟ್ಯಾಂತರ ರೂಗಳ ವಹಿವಾಟು, ವ್ಯವಹಾರ ಹೊಂದಿರುವ ಖ್ಯಾತ ಉದ್ಯಮಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರೈ ಲೈಪ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಿಗೆ ತ್ವರಿತವಾಗಿ ಉತ್ತಮ ಆರೋಗ್ಯ ಸೇವೆ ನೀಡುವ ಸಂಕಲ್ಪದೊಂದಿಗೆ ಹೊಸ ಕಟ್ಟಡದಲ್ಲಿ ವೈದ್ಯಕೀಯ ಜಗತ್ತಿನ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಪ್ರಾರಂಭವಾಗಿದೆ.
ಟ್ರೈ ಲೈಪ್ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಖ್ಯಾತ ಉದ್ಯಮಿಗಳಾದ ಸೀಕಲ್ ರಾಮಚಂದ್ರಗೌಡ ಅವರು ಮಾತನಾಡಿ ಸುಮಾರು 10-12 ವರ್ಷ ಗಳ ಹಿಂದೆ ಸಣ್ಣ ಕ್ಲಿನಿಕ್ ಆಗಿ ಪ್ರಾರಂಭವಾಗಿದ್ದ ಆಸ್ಪತ್ರೆ ದೊಡ್ಡ ಮಟ್ಟ ಬೆಳೆದಿದೆ. ದೊಡ್ಡ ಮಟ್ಟಕ್ಕೆ ಸೇವೆ ಸಲ್ಲಿಸಲು ನಾವು ಮುಂದಾಗಿ 200 ಬೆಡ್ ವ್ಯವಸ್ಥೆಯಿದೆ. ಪ್ರಸ್ತುತ ಇರುವ ಆಸ್ಪತ್ರೆಯಲ್ಲಿ ಒಳರೋಗಿ ಮತ್ತು ಹೊರರೋಗಿ ವಿಭಾಗದಲ್ಲಿ ಹೆಚ್ಚು ಜನ ಬರುತ್ತಿದ್ದರಿಂದ ಹೊರ ರೋಗಿಗಳಿಗೆ ಪ್ರತ್ಯೇಕ ವಿಭಾಗವಾಗಿ ಮಾಡಲಾಗಿದೆ OPD ವಿಭಾಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 75 ಡಾಕ್ಟರ್ ಲಭ್ಯವಿದ್ದು ಕರ್ತವ್ಯ ನಿರ್ವಹಿಸಲಿದ್ದಾರೆ. ಒಳರೋಗಿಗಳು ಪ್ರತಿನಿತ್ಯ 500 ಹೊರರೋಗಿಗಳು ಸುಮಾರು 1000 ಜನ ಬರುತ್ತಿದ್ದಾರೆ. ಆಸ್ಪತ್ರೆಯನ್ನ ವಿಸ್ತರಿಸಿದ್ದೇವೆ ಮುಂದಿನ ದಿನಗಳಲ್ಲಿ 500 ರಿಂದ 1000 ಬೆಡ್ ವ್ಯವಸ್ಥೆ ಮಾಡಲಾಗುವುದು ಜೊತೆಗೆ ಜಿಲ್ಲಾ ಮಟ್ಟದಲ್ಲೂ ಆಸ್ಪತ್ರೆಯನ್ನ ವಿಸ್ತರಿಸುವುದಾಗಿ ತಿಳಿಸಿದರು.
ಟ್ರೈಲೈಫ್ ಸಂಸ್ಥೆಯು ಸರಿ ಸುಮಾರು 1500 ಕೋಟಿ ಹೂಡಿಕೆ ಮೊತ್ತದಲ್ಲಿ ಪ್ರಾರಂಭಗೊಂಡಿದೆ. ಸೀಕಲ್ ರಾಮಚಂದ್ರಗೌಡ ಹಾಗೂ ಡಾ ಶಫೀಕ್,ಡಾ ಪ್ರಶಾಂತ್ ಸಹಭಾಗಿತ್ವದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲೇ ನುರಿತ ವೈದ್ಯರು ಉತ್ತಮ ಚಿಕಿತ್ಸೆಯನ್ನ ನೀಡಲಾಗುತ್ತಿದೆ.
ಟ್ರೈ ಲೈಪ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿ. ಟಿ ದೇವೇಗೌಡ ಸೇರಿದಂತೆ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಆಸ್ಪತ್ರೆ ಲೋಕಾರ್ಪಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜಣ್ಣ, ಸೀಕಲ್ ಆನಂದ್ ಗೌಡ, ಟ್ರೈ ಲೈಪ್ ಸಂಸ್ಥೆಯ ಪ್ರಮುಖರು ಸೇರಿದಂತೆ ಉದ್ಯಮಿಗಳು, ಶಿಡ್ಲಘಟ್ಟದ ಕ್ಷೇತ್ರದ ಮುಖಂಡರು, ಶಿಡ್ಲಘಟ್ಟದ ಪತ್ರಕರ್ತರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ