ಶಿಡ್ಲಘಟ್ಟ: ಈಗಿನ ಕಾಲದಲ್ಲಿ ಕೊಟ್ಟ ಹಣ, ವಸ್ತುಗಳೇ ವಾಪಸ್ ಬರುವುದು ಗ್ಯಾರಂಟಿ ಇರೋದಿಲ್ಲ. ಆಕೆ ಊರಿನಿಂದ ಸರ್ಕಾರಿ ಬಸ್ ಹತ್ತಿ ಪಟ್ಟಣಕ್ಕೆ ಬಂದಿದ್ದರು ಆದ್ರೆ ತನ್ನ ಬಳಿ ಹಣ ಇದ್ದ ಪರ್ಸ್ ಕಳೆದುಕೊಂಡು ಅಯ್ಯೋ ದೇವರೇ ಏನು ಹಿಂಗಾಯ್ತಲ್ಲಾ ಅಂತ ಯೋಚನೆ ಮಾಡುತ್ತಾ ಬಸ್ ನಿಲ್ದಾಣದಲ್ಲೆ ಕುಳಿತಿದ್ದ ವೇಳೆಯಲ್ಲಿ ಸ್ಬಲ್ಪ ಸಮಯದಲ್ಲೆ ಆಕೆ ಕಳೆದುಕೊಂಡಿದ್ದ ಪರ್ಸ್ ತನ್ನ ಕೈಗೆ ವಾಪಸ್ ಸೇರಿದೆ ಇಷ್ಟೂಕ್ಕೂ ಈ ಘಟನೆ ನಡೆದಿರೋದು ಎಲ್ಲಿ ಅಂತೀರಾ.?
ಹೌದು ನಗರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಪರ್ಸ್‌ನ್ನು ತನಗೆ ಸಿಕ್ಕ ತಕ್ಷಣ ಅದರಲ್ಲಿದ್ದ ಹಣ ಸಹಿತ ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಕ ಪರರ ಸ್ವತ್ತು ಪಾಷಾಣ ಎಂದು ಮಹಿಳೆ ಕಳೆದುಕೊಂಡಿದ್ದ ಪರ್ಸ್ ಆಕೆಗೆ ಹಿಂದಿರುಗಿಸಿ ಪ್ರಾಮಾಣಕತೆ ಮರೆದು ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದ ರೂಪಾ ಎಂಬುವರು ಗುರುವಾರದಂದು ಶಿಡ್ಲಘಟ್ಟ ನಗರಕ್ಕೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಬಂದಿಳಿದ್ದರು ಇದೇ ಸಮಯದಲ್ಲಿ ತಮ್ಮ ಬಳಿ ಇದ್ದಂತಹ ಪರ್ಸ್ ಮತ್ತು ಅದರಲ್ಲಿದ್ದಂತಹ ಸಾವಿರಾರು ಸಹಿತ ಹಣದ ಪರ್ಸ್‌ನ್ನು ಬಸ್ ನಿಲ್ದಾಣದಲ್ಲಿ ಕಳೆದುಕೊಂಡಿದ್ದರು. ಈ ವೇಳೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ನಿಯಂತ್ರಕ ಚಲಪತಿ ಎಂಬುವವರ ಕೈಗೆ ಪರ್ಸ್ ಸಿಕ್ಕಿದೆ. ತಕ್ಷಣ ಪರ್ಸ್‌ನಲ್ಲಿದ್ದ ಮಹಿಳೆಯ ಆಧಾರ್ ಕಾರ್ಡ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪರ್ಸ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ನಿಲ್ದಾಣದಲ್ಲೆ ಚಲಪತಿ ಅವರು ಪರ್ಸ್‌ನ್ನು ಹಿಂದಿರುಗಿಸಿದ್ದಾರೆ. ಇಂತಹ ವ್ಯಕ್ತಿತ್ವ ವ್ಯಕ್ತಿಗಳು ಸಿಗುವುದಂತೂ ಅಪರೂಪವೆಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆ.ಎಸ್.ಆರ್‌ಟಿಸಿ ಘಟಕ ವ್ಯವಸ್ಥಾಪಕ ಜೆ.ಗಂಗಾಧರ್ ಸಮಕ್ಷಮದಲ್ಲೆ ಮಹಿಳೆಯು ಕಳೆದುಕೊಂಡಿದ್ದ ನಗದು, ಆಧಾರ್ ಕಾರ್ಡ್, ಎಟಿಎಂ, ಪಾನ್ ಕಾರ್ಡ್ ಇದ್ದ ಪರ್ಸ್ ವಾಪಸ್ ಹಿಂದಿರುಗಿಸಿದ್ದಾರೆ. ಇವರ ಕಾರ್ಯಕ್ಕೆ ಪರ್ಸ್ ಕಳೆದುಕೊಂಡಿದ್ದ ಮಹಿಳೆ ರೂಪ ಕೃತಜ್ಞತೆಗಳು ಸಲ್ಲಿಸಿದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ