ಶಿಡ್ಲಘಟ್ಟ : ಗಂಡ- ಹೆಂಡತಿ ಜಗಳ ಎಂದರೆ ಉಂಡು, ಮಲಗೋವರೆಗೆ ಎಂಬ ಮಾತಿದೆ. ಸಂಸಾರ ಎಂಬವುದು ಸಾಗರದಂತೆ, ಜೀವನದಲ್ಲಿ ಗಂಡ- ಹೆಂಡತಿ ನಡುವೆ ಸಣ್ಣ ಪುಟ್ಟ ಜಗಳ ಬರುವುದು ಸಹಜ, ಇಬ್ಬರೂ ಅನೋನ್ಯವಾಗಿದ್ದರೆ ಜೀವನ ಚೆನ್ನಾಗಿರುತ್ತದೆ. ಗಂಡ ಹೆಂಡತಿ ಹೊಂದಾಣಿಕೆಯಿಂದ ಜೀವನ ಮಾಡಬೇಕು ಹೊರೆತು ಅನಗತ್ಯ ವಿಚಾರವಾಗಿ ಪದೇ ಪದೇ ಪೊಲೀಸ್ ಠಾಣೆ ಮೆಟ್ಟಿಲು ಏರುವುದು ಒಳ್ಳೆಯದಲ್ಲ ಎಂದು ಠಾಣಾಧಿಕಾರಿ ರವೀಂದ್ರ ಅವರು ಕೌಟುಂಬಿಕ ವಿಚಾರವಾಗಿ ದೂರು ಸಲ್ಲಿಸಿಕೊಂಡು ಠಾಣೆಗೆ ಬಂದಿದ್ದ ಗಂಡ- ಹೆಂಡತಿಗೆ ಬುದ್ದಿವಾದ ಹೇಳಿ ಇಬ್ಬರನ್ನೂ ಜೊತೆ ಮಾಡಿ ಕಳುಹಿಸಿದ ಪ್ರಸಂಗ ನಡೆಯಿತು.
ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಗಿರೀಶ್ ಮತ್ತು ವೇದ ಎಂಬುವವರ ನಡುವೆ ಅಗಾಗ್ಗ ಕೌಟುಂಬಿಕವಾಗಿ ವಿನಾಕಾರಣ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಂಡು ದೂರು – ಪ್ರತಿದೂರುಗಳು ಸಲ್ಲಿಸಿಕೊಳ್ಳುತ್ತಿದ್ದರು, ಹಲವು ಬಾರಿ ಇವರ ಇಬ್ಬರಿಗೂ ಹಿರಿಯರು, ಪಂಚಾಯಿದಾರರು, ಸಂಬಂಧಿಕರು ಬುದ್ದಿವಾದ ಹೇಳಿದ್ದರೂ ಸಹಾ ಯಾವುದಕ್ಕೂ ಬೆಲೆ ಕೊಡದೆ ಪದೇ ಪದೇ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದರು. ಪೊಲೀಸ್ ಠಾಣೆಯಲ್ಲೂ 4-5 ಬಾರಿ ಇಬ್ಬರಿಗೂ ತಿಳುವಳಿಕೆ ನೀಡಲಾಗಿತ್ತು. ಆದರೆ ಇವರು ಒಂದೆರಡು ವಾರದಲ್ಲಿ ಪುನಃ ಒಂದಲ್ಲ ಒಂದು ಕಾರಣಕ್ಕೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದರು. ಪೊಲೀಸರಿಗೆ ಬೇಸರ ಹಾಗೂ ತಲೆನೋವು ಉಂಟು ಮಾಡಿದ್ದ ಪ್ರಕರಣ ಇದಾಗಿತ್ತು.
ಇತ್ತಿಚೇಗೆ ಹೆಂಡತಿ – ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೊರಟುಹೋಗಿದ್ದಾಳೆ, ನನಗೆ ನನ್ನ ಹೆಂಡತಿಯನ್ನು ಕಳುಹಿಸಿಕೊಡಿ ಎಂದು ಗಂಡ ಗಿರೀಶ್ ಪೊಲೀಸ್ ಠಾಣೆಗೆ ತನ್ನ ಹೆಂಡತಿ ವೇದ ಮೇಲೆ ದೂರು ನೀಡಿದ್ದ, ಇವರದ್ದು ಯಾವಾಗಲೂ ಇದೇ ಕಥೆ ಎಂದು ಪೊಲೀಸರು ತೆಲೆ ಕೆಡಿಸಿಕೊಂಡಿರಲಿಲ್ಲ, ಶುಕ್ರವಾರ ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ರವೀಂದ್ರ ಅವರು ವೇದ ಮತ್ತು ಗಿರೀಶ್ ಇಬ್ಬರನ್ನೂ ಠಾಣೆಗೆ ಕರೆಯಿಸಿ ಹಿರಿಯರ ಸಮ್ಮುಖದಲ್ಲಿ ಪ್ರಕರಣವನ್ನ ಸೂಕ್ಷ್ಮತೆಯಿಂದ ಗಮನಿಸಿ ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿದರು. ಗಂಡ – ಹೆಂಡತಿ ಇಬ್ಬರೂ ಅನೋನ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡಿಕೊಂಡು ಹೋಗಬೇಕು. ಪದೇ ಪದೇ ಪೊಲೀಸ್ ಠಾಣೆಗೆ ಒಬ್ಬರ ಮೇಲೊಬ್ಬರು ದೂರುಗಳು ಕೊಟ್ಟುಕೊಂಡು ಪದೇ ಪದೇ ಪೊಲೀಸ್ ಠಾಣೆಗೆ ಬರುವುದು ಇಬ್ಬರಿಗೂ ಒಳ್ಳೆಯದ್ದಲ್ಲ. ಇನ್ನು ಮುಂದೆಯಾದರೆ ಒಟ್ಟಿಗೆ ಜೀವನ ಮಾಡಿಕೊಂಡು ಹೋಗುವಂತೆ ಬುದ್ದವಾದ ಹೇಳಿದರು.
ಕೊನೆಗೆ ಹಳೆಯದ್ದೆಲ್ಲಾ ತಲೆಯಿಂದ ತೆಗೆದು ಮುಂದೆ ಜೀವನ ಹೇಗೆ ಕಟ್ಟಿಕೊಳ್ಳಬೇಕು ಎಂಬುವುದು ಅಲೋಚನೆ ಮಾಡಿಕೊಂಡು ಬದುಕುವಂತಾಗಬೇಕು ಎಂದು ತಿಳಿವಳಿಕೆ ನೀಡಿದರು. ಪರಸ್ಪರವಾಗಿ ಇಬ್ಬರೂ ಸಿಹಿಯನ್ನ ತಿನಿಸಿಕೊಳ್ಳುವಂತೆ ಸೂಚಿಸಿ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇಲ್ಲದಂತೆ ನಡೆದುಕೊಂಡು ಹೋಗಬೇಕು. ಮತ್ತೆ ಪದೇ ಪದೇ ಪೊಲೀಸ್ ಠಾಣೆಗೆ ವಿನಾಕಾರಣ ಬರಬಾರದು ಎಂದು ಎಚ್ಚರಿಸಿದರು.
ಅಂತೂ ದಂಪತಿಯನ್ನು ಒಂದು ಮಾಡಿ ಉತ್ತಮ ರೀತಿಯಲ್ಲಿ ಜೀವನ ನಡೆಸಿಕೊಂಡು ಹೋಗುವಂತೆ ತಿಳಿಸಿ ಇಬ್ಬರಿಗೂ ಸಂಸಾರದ ಪಾಠ ಹೇಳಿದ್ದು, ಇನ್ನು ಮುಂದೆಯಾದರೂ ಇವರು ಒಟ್ಟಿಗೆ ಜೀವನ ಮಾಡಲಿ ಎಂಬುವುದು ಕುಟುಂಬಸ್ಥರು, ಪಂಚಾಯಿತಿದಾರರ ಆಶಯವಾಗಿದೆ.