ಶಿಡ್ಲಘಟ್ಟ : ರೇಷ್ಮೆ ಗೂಡಿನ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಇದರಿಂದ ರೇಷ್ಮೆ ಬೆಳೆಗಾರರಿಗೆ ತುಂಬಾ ಕಷ್ಟ ಆಗುತ್ತಿದೆ ಪ್ರತಿ ಕೆಜೆ ಗೂಡಿಗೆ ಕನಿಷ್ಟ 600 ರೂ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರೈತರು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಮಹದೇವಯ್ಯ ಅವರ ಮುಖಾಂತರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ತಾಲ್ಲೂಕಿನ್ಲಿ ಶೇಕಡಾ 80% ರಷ್ಟು ರೈತರು ರೇಷ್ಮೆ ಉದ್ದಿಮೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ ಬಯಲು ಸೀಮೆಯ ಬರಪೀಡಿತ ಜಿಲ್ಲೆಯಾಗಿದೆ. ಯಾವುದೇ ನದಿನಾಳೆಗಳ ಆಶ್ರಯ ಇಲ್ಲದೆ ಸಾಲ ಸೂಲ ಮಾಡಿಕೊಂಡು ಕೊಳವೆ ಬಾವಿ ಕೊರೆಯಿಸಿ ಅದರಿಂದ ಬರುವ ಒಂದಿಂಚು ಅರ್ದ ಇಂಚು ನೀರಿನಲ್ಲಿ ರೇಷ್ಮೆ ಬೆಳೆಯನ್ನು ಬೆಳೆದು ಅದರಿಂದ ತಮ್ಮ ಜೀವನವನ್ನು ಸುದಾರಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಮಾರು 15 ದಿನಗಳಿಂದ ಸರಾಸರಿ ಪ್ರತಿದಿನ ದರ ಇಳಿಕೆಯಾಗಿ ಬರುತ್ತಿದೆ ಪ್ರತಿ ಕೆಜಿ ರೇಷ್ಮೆ ಗೂಡು 500 ರಿಂದ 700 ರವರೆಗೂ ಇದ್ದ ಬೆಲೆ ಧಿಢೀರನೆ 300 ರಿಂದ 350 ಕ್ಕೆ ಇಳಿದಿದೆ ಇದರಿಂದ ರೇಷ್ಮೆ ಬೆಳೆಗಾರರು ಆತಂಕ ಪಡುವಂತಹ ಪರಿಸ್ಥಿತಿ ಎದುರಾಗಿದೆ ರೇಷ್ಮೆ ಉದ್ದಿಮೆಯನ್ನೆ ಬಿಡುವಂತಹ ಸ್ಥಿತಿಗೆ ಉದ್ದಿಮೆ ಬರುತ್ತಿದೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರೈತರ ಬಗ್ಗೆ ಕಾಳಜಿ ವಹಿಸಿ ತ್ವರಿತವಾಗಿ ರೇಷ್ಮೆ ಬೆಳೆಗಾರರು ಹಾಗೂ ಇಲಾಖೆಯ ಅಧಿಕಾರಿಗಳ ಸಭೆ ಕರೆಯಬೇಕು ದರ ಇಳಿಕೆಯಾಗಲು ಕಾರಣವನ್ನು ಪತ್ತೆ ಮಾಡಬೇಕು ಸರ್ಕಾರವು ಪ್ರತಿ ಕೆಜಿ ರೇಷ್ಮೆ ಗೂಡಿಗೆ ಕನಿಷ್ಟ 600 ಬೆಂಬಲ ಬೆಲೆ ನಿಗದಿ ಮಾಡಬೇಕು ದರಕ್ಕಿಂತ ಕಡಿಮೆಯಾದರೆ ರೈತರಿಗೆ ಸರ್ಕಾರ ಸಹಾಯಧನ ರೂಪದಲ್ಲಿ ಪ್ರೋತ್ಸಾಹಧನ ನೀಡಬೇಕೆಂದು ಎಂದು ಒತ್ತಾಯಿಸಿದರು.
“ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕರಾದ ಮಹದೇವಯ್ಯ ಅವರ ಮುಖಾಂತರ ಪ್ರತಿ ಕೆಜೆ ರೇಷ್ಮೆ ಗೂಡಿಗೆ ರೂ. 600 ಬೆಂಬಲ ಬೆಲೆ ನಿಗದಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.”
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಮುನೇಗೌಡ, ಕಾರ್ಯದರ್ಶಿ ನವೀನಚಾರ್ಯ, ಕದಿರೇಗೌಡ, ಆಂಜಿನಪ್ಪ, ಡಿವಿ ನಾರಾಯಣಸ್ವಾಮಿ, ಅರುಣ್, ಬಳುವನಹಳ್ಳಿ ಪ್ರಕಾಶ್, ಮಳಮಾಚನಹಳ್ಳಿ ಜನಾರ್ಧನ್ , ಮಂಜುನಾಥ , ಶ್ರೀರಾಮಪ್ಪ, ದೊಡ್ಡತೇಕಹಳ್ಳಿ ವೆಂಕಟೇಶ್ ಸೇರಿದತೆ ಇತರರು ಉಪಸ್ಥಿತರಿದ್ದರು.