ಸೇವೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಜನ ಮನ್ನಣೆ. ಯಾವುದೇ ಕೆಲಸಕ್ಕೂ ಹಣ ಮುಟ್ಟಲ್ಲ. ಯಾರ ಒತ್ತಡಕ್ಕೆ ಜಗ್ಗಲ್ಲ, ನ್ಯಾಯವಾಗಿದ್ದರಂತೂ ಕೆಲಸ ಪಕ್ಕಾ.!
ಶಿಡ್ಲಘಟ್ಟ : ಸರ್ಕಾರಿ ಕಛೇರಿ ಎಂದರೆ ಅಲ್ಲಿ ಲಂಚ ಕೊಡಬೇಕು ಹಣ ಕೊಟ್ಟರೆ ಬೇಗ ಕೆಲಸ ಆಗುತ್ತೆ. ಕೊಡದಿದ್ದರೆ ಯಾವುದೋ ಒಂದು ನೆಪ ಹೊಡ್ಡಿ ಸತಾಯಿಸುತ್ತಾರೆಂಬ ಮಾತುಗಳು ಸಹಜ. ಇದರ ಅನುಭವ ಬಹಳಷ್ಟು ಜನರಿಗೆ ಆಗಿರುತ್ತೆ. ಕಡತದಲ್ಲಿ ದಾಖಲೆಗಳ ಕೊರತೆ ಇದೆಯೆಂಬ ಸಬೂಬುಗಳು ಹೇಳುತ್ತಾ ರೈತರು, ಬಡವರು, ಸಾರ್ವಜನಿಕರನ್ನ ಅಲೆದಾಡಿಸುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಇಲ್ಲೊಬ್ಬ ಅಧಿಕಾರಿಯ ನಡೆ ವಿಶೇಷ, ವಿಭಿನ್ನ ಜನ ಮೆಚ್ಚುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಮೀನಿನ ಖಾತೆ, ಪಹಣಿ, ಸಾಗುವಳಿ ಚೀಟಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಇನ್ಯಾವುದೇ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸಕ್ಕೂ ಹಣ ಮುಟ್ಟಲ್ಲ. ಯಾರ ಒತ್ತಡಕ್ಕೂ ಜಗ್ಗಲ್ಲ. ನ್ಯಾಯವಾಗಿದ್ದರೆ ಕೆಲಸ ಅಂತೂ ಪಕ್ಕಾ ಆಗುತ್ತೆ. ಇಂತಹ ಕಾಲಘಟ್ಟದಲ್ಲಿ ಇಂತಹ ಅಧಿಕಾರಿಗಳು ಸಿಗುವುದು ಅಪರೂಪದಲ್ಲಿ ಅಪರೂಪ ಅಲ್ವೇ. ಇಷ್ಟಕ್ಕೂಯಾರೂ,ಎಲ್ಲಿ ಅಧಿಕಾರಿಯೆಂದು ತಿಳಿದುಕೊಳ್ಳುವ ಕುತೂಹಲ ಇದೆಯಾ ಈ ಸ್ಟೋರಿ ಓದಿ.!
ಸರ್ಕಾರಿ ಕೆಲಸ ದೇವರ ಕೆಲಸ ಜನ ಸೇವೆಯೇ ಜನಾರ್ಧನ ಸೇವೆಯೆಂದು ಅತ್ಯಂತ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಾರ್ವಜನಿಕ ವಲಯದಲ್ಲಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ.
ಹೌದು ನ್ಯಾಯ ಸಮ್ಮತ ಸಿದ್ದಾಂತದ ಮೇರೆಗೆ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಿ ಎಲ್ಲರ ನಿಬ್ಬೆರಗಾಗುವಂತೆ ಇತರೆ ಅಧಿಕಾರಿಗಳಿಗೆ ಮಾದರಿಯಾಗಿ ತಾಲ್ಲೂಕು ದಂಡಾಧಿಕಾರಿಗಳಾಗಿ ಸೇವೆ ನೀಡುತ್ತಿದ್ದಾರೆ.
ಇಷ್ಟೂಕ್ಕೂ ಇಂತಹ ಕಾಲದಲ್ಲಿ ಯಾರಪ್ಪ ಅಷ್ಟೊಂದು ಪ್ರಾಮಾಣಿಕವಾಗಿ ತಮ್ಮ ಚೌಕಟ್ಟಿನಲ್ಲಿ ಜನರ ಕೆಲಸಗಳಿಗೆ ಸ್ಪಂಧಿಸುವ ಮೂಲಕ ಕೆಲಸ ಮಾಡುತ್ತಿರುವ ಅಧಿಕಾರಿ ಅಂದುಕೊಂಡ್ರಾ ಅವರೇ ಸರಳ ವ್ಯಕ್ತಿತ್ವದ ಸಹೃದಯಿ ಜನ ಮೆಚ್ಚಿದ ಅಧಿಕಾರಿ ರೇಷ್ಮೆ ನಾಡು ಶಿಡ್ಲಘಟ್ಟ ತಾಲ್ಲೂಕಿನ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರೇ ದಕ್ಷ, ಪ್ರಾಮಾಣಿಕತೆಗೆ ಖ್ಯಾತಿಗಳಿಸಿದ್ದಾರೆ.
ಹೌದು ನಾವು ಹೇಳೊಕ್ಕೆ ಹೊರಟಿರೋದು ಯಾವುದೋ ಕಾಲ್ಪಿನಿಕ ಸಿನಿಮಾದಲ್ಲಿ ನಡೆದ ಸ್ಟೋರಿಯಲ್ಲ. ಇದು ನಿಜ ಜೀವನದಲ್ಲಿ ಕಣ್ಣ ಮುಂದೆ ಪ್ರಸ್ತುತ ಕಾಲಘಟ್ಟದಲ್ಲಿ ಈಗಿನ ವ್ಯವಸ್ಥೆಯಲ್ಲಿ ನಡೆಯುತ್ತಿರುವ ನೈಜ ಅಧಿಕಾರಿಯ ಸ್ಟೋರಿ.
ಸಾರ್ವಜನಿಕರು, ರೈತರು, ಯಾವುದೇ ಕೆಲಸಕ್ಕೂ ಒಂದು ಪೈಸೆ ಹಣ ಕೊಡಂಗಿಲ್ಲ. ಜಮೀನು ಖಾತೆ, ಪಹಣಿ, ಕಂದಾಯ ಇಲಾಖೆಯ ತಮ್ಮ ಅಧೀನದಲ್ಲಿ ಬರುವ ಯಾವುದೇ ಕೆಲಸಕ್ಕೂ ಯಾರಿಂದಲೂ ನಯಾ ಪೈಸೆ ಹಣ ಕೇಳಿರುವ ತೆಗೆದುಕೊಂಡಿರುವ ಉದಾಹರಣೆಯೇ ಇಲ್ಲ. ಕಛೇರಿಯಲ್ಲಿ ಇ – ಆಫೀಸ್ ಅಳವಡಿಸಿಕೊಂಡು ಪ್ರತಿಯೊಂದು ಅರ್ಜಿ ನಿಗಧಿತ ಅವಧಿಯಲ್ಲಿ ಮುಕ್ತಾಯವಾಗುವ ನಿಟ್ಟಿನಲ್ಲಿ ಜವಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯವೈಖರಿಗೆ ಲೋಕಾಯುಕ್ತ ಅಧಿಕಾರಿಗಳಿಂದಲೇ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಪ್ರಾಮಾಣಿಕ ಅಧಿಕಾರಿಗಳು ತಾಲ್ಲೂಕಿಗೆ ಮಾತ್ರವಲ್ಲ. ರಾಜ್ಯಕ್ಕೆ ತುಂಬಾ ಅತ್ಯಗತ್ಯ. ಉತ್ತಮ ಅಧಿಕಾರಿಗಳಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು, ವ್ಯವಸ್ಥೆ ಬದಲಾವಣೆಯಾಗಲಿದೆ ಬಡವರು, ರೈತರು, ಸಾರ್ವಜನಿಕರು, ವರ್ಷಾನುಗಟ್ಟಲೆ ತಮ್ಮ ಕೆಲಸಗಳಿಗೆ ಕಛೇರಿಗಳಿಗೆ ಅಲೆದಾಡುವದೂ ತಪ್ಪುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಜನ ಸಾಮಾನ್ಯರ ಮಾತಾಗಿದೆ.
ಪ್ರಥಮಬಾರಿಗೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎನ್ ಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ್ದರು ಅಂದು ಅವರು ಹೇಳಿದ್ದು ಹಣ ಮಾಡಬೇಕಾದರೆ ಬೇರೆ ಬೇರೆ ಕ್ಷೇತ್ರಗಳಿವೆ, ಒಳ್ಳೆಯ ವ್ಯಾಪಾರ ಮಾಡಬಹುದು. ಸಾರ್ವಜನಿಕ ಹುದ್ದೆಯಲ್ಲಿ ಸರ್ಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅಗತ್ಯವಿರುವುದಿಲ್ಲ. ಜನ ಸೇವೆ ಮಾಡಬೇಕೆಂಬ ಅಂಬಲದಿಂದ ಕೆ.ಎ.ಎಸ್ ಮಾಡಿ ಬಂದಿದ್ದೇನೆ. ಸಾದ್ಯವಾದಷ್ಟು ಪ್ರಾಮಾಣಿಕವಾಗಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ಮಾತುಗಳು ಆಡಿದ್ದರು. ಹೇಳಿರುವ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಸರಳ ವ್ಯಕ್ತಿತ್ವದ ಅಧಿಕಾರಿ ಬಿ.ಎನ್ ಸ್ವಾಮಿ.
ಸರ್ಕಾರಿ ಕಛೇರಿ ಎಂದರೆ ಕಿಟಕಿ, ಬಾಗಿಲು, ಬೆಂಚ್ ಗಳು ಸಹಾ ಸುಂಕ ಕೇಳ್ತಾವೆ ಅಂತಹದರಲ್ಲಿ ಬಡವರು, ಜನ ಸಾಮಾನ್ಯರು, ಯಾರೇ ಹೋದರೂ ಮೊದಲು ಅವರಿಗೆ ಸ್ಪಂಧಿಸಿ ಅವರ ಕೆಲಸ ಅಥವಾ ಸಮಸ್ಯೆ ಕೇಳಿ ಅದಕ್ಕೆ ಸ್ಥಳದಲ್ಲೆ ಸಿಬ್ಬಂದಿಗೆ ಖಡಕ್ ಆಗಿ ಸೂಚನೆ ನೀಡಿ ಖುದ್ದು ನಿಂತು ಕೆಲಸ ಮಾಡಿಸಿಕೊಟ್ಟು ಜನ ಮನ್ನಣೆಗೆ ಪಾತ್ರರಾಗಿದ್ದಾರೆ.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಅಂತಹ ದಕ್ಷ ಅಧಿಕಾರಿಗಳು ಇತರೆ ಅಧಿಕಾರಿಗಳಿಗೆ ಮಾದರಿಯಾಬೇಕು. ಸಾಮಾಜದಲ್ಲಿ ಉತ್ತಮ ಹೆಸರು, ಕೀರ್ತಿ ಗಳಿಸಿ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಮೂಡಿಸುವಂತಹ ರೀತಿಯಲ್ಲಿ ದೊಡ್ಡ ದೊಡ್ಡ ಹುದ್ದೆ ಸ್ಥಾನದಲ್ಲಿರುವ ಅಧಿಕಾರಿಗಳಿಂದ ಆಗಬೇಕು ಎಂಬುವುದೇ ನಮ್ಮ ” ಸಂವಿಧಾನ ಶಕ್ತಿ” ಪತ್ರಿಕೆಯ ಆಶಯವಾಗಿದೆ.
ವಿಶೇಷ ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ