ಶಿಡ್ಲಘಟ್ಟ: ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಅವರು ಭೂ ಪರಿವರ್ತನೆಯ ಜಮೀನಿನ ಲೇಔಟ್ ಪ್ಲಾನ್ ಅನುಮೋದನೆಗಾಗಿ ನಂಜೇಗೌಡ ಎಂಬುವವರಿಂದ 2 ಲಕ್ಷ ಬೇಡಿಕೆ ಇಟ್ಟು ಇಂದು ಕಛೇರಿಯಲ್ಲಿ 1.5 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಡಿ ವೈಎಸ್ಪಿ ವಿರೇಂದ್ರ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುನಿರಾಜು ಅವರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿ ಗ್ರಾಮದ 39 ಗುಂಟೆ ಭೂ ಪರಿವರ್ತನೆ ಜಮೀನಿಗೆ ಪ್ಲಾನ್ ಮಾಡಿಕೊಡಲು ನಂಜೇಗೌಡ ಎಂಬ ವ್ಯಕ್ತಿಯ ಬಳಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಅದರಂತೆ ಮಾತುಕತೆ ನಡೆದು ಮಂಗಳವಾರ 1.5 ಲಕ್ಷ ಹಣ ನೀಡುವಾಗ ಅಧಿಕಾರಿ ಲೋಕಾ ಬಲೆ ಸಿಕ್ಕಿಬಿದ್ದಿದ್ದಾರೆ.
2024 ರ ಸಂಸದೀಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇ.ಓ ಮುನಿರಾಜು ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖವಾದ ಪಾತ್ರವಹಿಸಿದ್ದರು. ವಿಶೇಷವಾಗಿ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಎಲ್ಲಾ ಪತ್ರಕರ್ತರನ್ನೂ ಒಗ್ಗೂಡಿಸಿ ಪತ್ರಕರ್ತರಿಂದಲೂ ಸಹ ಜಾಗೃತಿ ಅಭಿಯಾನ ನಡೆಸಿದರು.
ಸರ್ಕಾರಿ ಹುದ್ದೆಯಲ್ಲಿರುವ ಯಾವುದೇ ಸರ್ಕಾರಿ ಅಧಿಕಾರಿ ಲಂಚ ಪಡೆಯುವುದು ಕಾನೂನು ಪ್ರಕಾರ ಅಪರಾಧ. ಅದೇ ರೀತಿ ಸರ್ಕಾರಿ ಅಧಿಕಾರಿಗೆ ಲಂಚದ ಆಮೀಷ ಹೊಡ್ಡುವುದು ನಾವು ಇಂತಿಷ್ಟು ಹಣ ಕೊಡುತ್ತೇವೆಂದು ಆಸೆ ಹುಟ್ಟಿಸುವುದು ಸಹಾ ಅಪರಾಧವಾಗುತ್ತದೆ. ತಾಲ್ಲೂಕಿನಲ್ಲಿ ಉತ್ತಮ ಹೆಸರುಗಳಿದ್ದ ಅಧಿಕಾರಿಯನ್ನು ಟಾರ್ಗೆಟ್ ಮಾಡಿದ್ದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲೆ ಕೇಳಿ ಬರುತ್ತಿದ್ದು. ಇದಕ್ಕೆ ಪೂರಕವಾಗಿ ಹೊಸಪೇಟೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಮತ್ತು ತಾಲ್ಲೂಕಿನಲ್ಲಿ ಕೆಲವು ಕಾಣದ ಕೈಗಳ ಕೈವಾಡದಿಂದ ಲೋಕಾಯುಕ್ತ ಖೆಡ್ಡಾಗೆ ಅಧಿಕಾರಿಯನ್ನು ಕೆಡುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ನಗರ ಪ್ರದೇಶ, ರೈಲ್ವೆ ಸ್ಟೇಷನ್, ಗೂಡುಮಾರುಕಟ್ಟೆ, ಬಸ್ ನಿಲ್ದಾಣ, ಕಾಲೇಜುಗಳಲ್ಲಿ ಎಲ್ಲಾ ಕಡೆಗಳಲ್ಲಿ ಮತದಾನದ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದರು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮತದಾನದಲ್ಲಿ ಶೇಕಡಾ 81.13 ರಷ್ಟು ಮತದಾನವಾಗಿ ಎರಡನೇ ಸ್ಥಾನ ಪಡೆಯಲು ಶ್ರಮವಹಿಸಿದ್ದರು.
ಲೋಕಾಯುಕ್ತ ದಾಳಿಯಲ್ಲಿ ಡಿ ವೈ ಎಸ್ಪಿ ವಿರೇಂದ್ರ ಕುಮಾರ್, ಇನ್ಸ್ ಪೆಕ್ಟರ್ ಶಿವಪ್ರಸಾದ್, ಇನ್ಸ್ ಪೆಕ್ಟರ್ ಮೋಹನ್, ಸಿಬ್ಬಂದಿ – ಸಂತೋಷ್, ಸತೀಶ್, ನಾಗರಾಜ್, ಲಿಂಗರಾಜ್, ಗುರು, ಚೌಡರೆಡ್ಡಿ, ಪ್ರಕಾಶ್, ಇತರರು ದಾಳಿಯಲ್ಲಿ ಭಾಗವಹಿಸಿದ್ದರು.