ಶಿಡ್ಲಘಟ್ಟ : ತಾಲ್ಲೂಕಿನ ಬಿಜೆಪಿಯ ನಿಕಟಪೂರ್ವ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಕಂಬದಹಳ್ಳಿ ಸುರೇಂದ್ರ ಗೌಡ ಅವರ 56 ನೇ ವರ್ಷದ ಜನ್ಮ ದಿನದ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು – ಹಂಪಲು ವಿತರಿಸಲಾಯಿತು.
ತಾಲ್ಲೂಕು ಬಿಜೆಪಿ ಘಟಕದಿಂದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು- ಹಂಪಲು, ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನ ಆಚರಿಸಿದರು.
ನಂತರ ನಗರದ ಮಯೂರ ವೃತ್ತದ ಬಳಿಯಿರುವ ಬಿಜೆಪಿ ಸೇವಾ ಸೌಧ ಕಛೇರಿಯಲ್ಲಿ ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಿಹಿಯನ್ನ ಹಂಚಲಾಯಿತು. ಇದೇ ಸಂದರ್ಭದಲ್ಲಿ ಸುರೇಂದ್ರ ಗೌಡ ಅವರಿಗೆ ತಲೆಗೆ ಮೈಸೂರು ಪೇಟ ತೊಟ್ಟು, ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸುವ ಮೂಲಕ ಶುಭಾಶಯಗಳ ಕೋರಿದರು.
ಪತ್ರಿಕೆಯೊಂದಿಗೆ ಸುರೇಂದ್ರಗೌಡ ಅವರು ಪ್ರತಿ ವರ್ಷ ಹುಟ್ಟು ಹಬ್ಬದಂದು ಅಂದ ಮಕ್ಕಳ ಶಾಲೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇನೆ. ಹುಟ್ಟು ಹಬ್ಬವನ್ನ ಹಾಡಂಬರದಿಂದ ಆಚರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಕೈಲಾಗುವಷ್ಟರ ಮಟ್ಟಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ತೃಪ್ತಿ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ತಾಲ್ಲೂಕು ಮಂಡಲ ಕಾರ್ಯದರ್ಶಿ ರಜನಿಕಾಂತ್ ಬಾಬು, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಚಾತುರ್ಯ, ನಾಗೇಶ್, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.