‘ಸಂವಿಧಾನ ಶಕ್ತಿ ನ್ಯೂಸ್ ‘ ಶಿಡ್ಲಘಟ್ಟ : ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ತಡ ರಾತ್ರಿ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸರಿ ಸುಮಾರು 16 ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.
ಹಂಡಿಗನಾಳ ಗ್ರಾಮದ ವಾಸಿ ಲಕ್ಷ್ಮೀನಾರಾಯಣಪ್ಪ ಬಿನ್ ನಾರಾಯಣಪ್ಪ ಎಂಬುವವರಿಗೆ ಸೇರಿದ ಕುರಿಗಳ ಮೇಲೆ ಸೋಮವಾರ ತಡರಾತ್ರಿ ಬೀದಿ ನಾಯಿಗಳು ದಂಡು ದಾಳಿ ನಡೆಸಿದ್ದು, ನಾಯಿಗಳ ದಾಳಿಯಿಂದ ಸರಿ ಸುಮಾರು 16 ಕುರಿಗಳು ಬಲಿಯಾಗಿವೆ. ಇದರಿಂದ ರೈತ ಕಂಗಲಾಗಿದ್ದಾನೆ.
ಹಂಡಿಗನಾಳ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಾರ್ವಜನಿಕರ ಹಾಗೂ ಜಾನುವಾರುಗಳ ಹಿತ ದೃಷ್ಟಿಯಿಂದ ಬೀದಿ ನಾಯಿಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಕಲ್ಯಾಣ ಮಂಪಟದ ಬಳಿ ಬೀದಿ ನಾಯಿಗಳ ದಂಡೇ ಇರುತ್ತವೆ. ಮಹಿಳೆಯರು, ಮಕ್ಕಳು, ವಯಸ್ಸಾದ ವೃದ್ದರು ಒಂಟಿಯಾಗಿ ಓಡಾಡಲು ಭಯವಾಗುತ್ತದೆ. ಬೀದಿ ನಾಯಿಗಳು ಒಂಟಿಯಾಗಿ ಓಡಾಡುವವರ ಮೇಲೆಯೂ ದಾಳಿಗೆ ಮುಂದಾಗುತ್ತವೆಂದು ಸ್ಥಳೀಯರು ತಿಳಿಸಿದ್ದಾರೆ.
ಕುರಿಗಳು ಕಳೆದುಕೊಂಡಿರುವ ರೈತನಿಗೆ ಪಶು ಇಲಾಖೆಯಿಂದ ಪರಿಹಾರ ನೀಡುವ ಕೆಲಸ ಅಧಿಕಾರಿಗಳು ಮಾಡಬೇಕಾಗಿದೆ.
ಇಂದು ಘಟನಾ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿಗಳಾದ ಬಿ.ಎನ್ ಸ್ವಾಮಿ ಅವರು ಬೇಟಿ ನೀಡಿ ಪರಿಶೀಲಿಸಲಿದ್ದು, ಜೊತೆಗೆ ರೈತನಿಗೆ ಸೂಕ್ತ ಪರಿಹಾರದ ಭರವಸೆ ನೀಡುವ ಸಾಧ್ಯತೆಗಳಿವೆ ಎಂದು ಪತ್ರಿಕೆಗೆ ಮೂಲಗಳಿಂದ ತಿಳಿದು ಬಂದಿದೆ.