ಶಿಡ್ಲಘಟ್ಟ: ಶ್ರೀರಾಮನು ಜನಸಿದ ದಿನವನ್ನು ಹಳ್ಳಿಯಿಂದ ಹಿಡಿದು ದೇಶದಲ್ಲೆಡೆ ಇಂದು ಶ್ರೀರಾಮಚಂದ್ರನ ನಾಮ ಸ್ಮರಿಸಿ ಹಿಂದೂಗಳು ಶ್ರೀರಾಮನವಮಿಯ ಹಬ್ಬವನ್ನು ಸಂಪ್ರದಾಯದಂತೆ ಆಚರಿಸುತ್ತಾರೆ. ಶ್ರೀರಾಮನವಮಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ಕೋಟಹಳ್ಳಿ ಗ್ರಾಮದ ಅಶ್ವಥಪ್ಪ ರವರ ತೋಟದಲ್ಲಿ ಪೂರ್ವಿಕರ ಕಾಲದಿಂದಲೂ ನೆಲೆಸಿರುವ ಶ್ರೀ. ಬಯಲು ಆಂಜನೇಯಸ್ವಾಮಿ ಕಲ್ಲಿನ ಕೆತ್ತನೆಯ ಮೂರ್ತಿಗೆ ಕುಟುಂಬಸ್ಥರು ಹಾಗೂ ಶ್ರೀ ಬಯಲು ಆಂಜನೇಯಸ್ವಾಮಿ ದೇವಾಲಯ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
ಶಿಥೀಲವಾಗಿದ್ದ ದೇವಾಲಯಕ್ಕೆ ಇತ್ತಿಚೇಗೆ ನೂತನವಾಗಿ ದೇವಾಲಯದ ಕಟ್ಟಡ ನವೀಕರಣಗೊಳಿಸಿ ತಳಿರು ತೋರಣಗಳು ಕಟ್ಟಿ ಬಗೆ ಬಗೆಯ ಹೂವುಗಳಿಂದ ದೇವರಿಗೆ ಅಲಂಕರಿಸಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಇನ್ನೂ ಪಾನಕ, ಮಜ್ಜಿಗೆ ಹೆಸರು ಬೇಳೆ, ದೇವರಿಗೆ ಅರ್ಪಿಸಿದ ನಂತರ ಹಂಚಲಾಯಿತು.
ಶ್ರೀ. ಬಯಲು ಆಂಜನೇಯಸ್ವಾಮಿ ದೇವಾಲಯ ಸೇವಾಭಿವೃದ್ದಿ ಟ್ರಸ್ಟಿನ ಸದಸ್ಯರಾದ ನವೀನ್ ಕುಮಾರ್ ಅವರು ಮಾತನಾಡಿ ನಮ್ಮ ಪೂರ್ವಿಕರ ಕಾಲದಿಂದಲೂ ನೆಲೆಸಿರುವ ಆಂಜನೇಯಸ್ವಾಮಿಗೆ ಶ್ರದ್ದಾ ಭಕ್ತಿಯಿಂದ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಮಳೆ, ಗಾಳಿಗೆ ದೇವಾಲಯ ತುಂಬಾ ಶಿಥೀಲವಾಗಿತ್ತು. ಅದನ್ನು ಇತ್ತಿಚೇಗ ಹೊಸದಾಗಿ ನವೀಕರಣ ಮಾಡಿರುತ್ತೇವೆ. ಶ್ರೀರಾಮನವಮಿ ಪ್ರಯುಕ್ತ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ದೇವಾಲಯವನ್ನು ಜೀರ್ಣೋದ್ದಾರ ಮಾಡಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಪಡಿಸಿ ದೇವರ ಹೆಸರಿನಲ್ಲಿ ಶ್ರೀರಾಮನವಮಿಯ ಹಬ್ಬದ ದಿನಂದು ಭಜನೆ, ದೀಪಾಲಂಕಾರ ಇನ್ನಿತರೆ ಕಾರ್ಯಕ್ರಮಗಳು ಮಾಡಲಾಗುವುದು ಇದಕ್ಕೆ ಆಂಜನೇಯಸ್ವಾಮಿ ನಮಗೆ ಶಕ್ತಿ ನೀಡಬೇಕು. ಪ್ರತಿ ವರ್ಷವೂ ಮಜ್ಜಿಗೆ ಪಾನಕ, ಹೆಸರು ಬೇಳೆ ವಿತರಿಸಲಾಗುವುದು. ತಲೆ ಮಾರುಗಳಿಂದ ಕುಟುಂಬದ ಹಿರಿಯರು ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಮುಂದುವರೆಸುಕೊಂಡು ಹೋಗುತ್ತೇವೆ. ನಂಬಿಕೆ, ಶ್ರದ್ದೆ ಆಸಕ್ತಿಯಿಂದ ದೇವರ ಸೇವೆ ಮಾಡಿದರೆ ಒಳ್ಳೆಯದಾಗುತ್ತದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರತ್ನಮ್ಮ, ಸದಸ್ಯರಾದ ರಾಗಿಣಿ, ನವೀನ್ ಕುಮಾರ್, ಪುಟಾಣಿ – ಭುವನ್ ತೇಜ್, ಅನಿಲ್ ಕುಮಾರ್, ನಾಗಮಣಿ ಇತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.