ಹೃದಯಾಘಾತದಿಂದ ಮಂಜುಳ ವಿಧಿವಶ.
ಶಿಡ್ಲಘಟ್ಟ : ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಾಡಕಛೇರಿ ಹಿರಿಯ ಅಪರೇಟರ್ ಮಂಜುಳ(42 ವರ್ಷ) ಅವರು ಇಂದು ಹೃದಯಾಘಾತದಿಂದ ಹಠಾತ್ ಆಗಿ ನಿಧರಾಗಿದ್ದಾರೆ.
ಇಂದು ಶುಕ್ರವಾರ ಬೆಳಗ್ಗೆ ಸಮಯ ಸುಮಾರು 10:15 ಸಮಯದಲ್ಲಿ ಎಂದಿನಂತೆ ಶಿಡ್ಲಘಟ್ಟ ನಗರದಲ್ಲಿರುವ ತಮ್ಮ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು,ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಇ.ಸಿ.ಜಿ ಪರೀಕ್ಷೆ ಮಾಡುವಷ್ಟರಲ್ಲಿ ಮಂಜುಳ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಬಿ.ಎನ್ ಸ್ವಾಮಿ, ತಾಲ್ಲೂಕು ಕಛೇರಿಯ ಸಿಬ್ಬಂದಿ, ಸಹದ್ಯೋಗಿಗಳು ಆಸ್ಪತ್ರೆಯ ಬಳಿ ತೆರಳಿದರು. ಮೃತ ಮಂಜುಳ ಅವರ ಮೃತ ದೇಹದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಪ್ರಸ್ತುತ ಮಂಜುಳು ಅವರು ಬಶೆಟ್ಟಹಳ್ಳಿ ಹೋಬಳಿಯ ನಾಡಕಛೇರಿಯಲ್ಲಿ ಕಂಪ್ಯೂಟರ್ ಅಪರೇಟರಾಗಿ ಕಾರ್ಯನಿರ್ವಹಿಸುತ್ತಿದ್ದರು. 2007 ರಿಂದ 2024 ರವರೆಗೆ 17 ವರ್ಷಗಳಿಂದ ಸುಧೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಒಂದು- ಗಂಡು, ಒಂದು- ಹೆಣ್ಣು ಇಬ್ಬರು ಮಕ್ಕಳು, ಪತಿ, ಅಪಾರ ಬಂದು- ಬಳಗವನ್ನ ಅಗಲಿದ್ದಾರೆ. ಇನ್ನೂ ಬಾಳಿ ಬದುಕಬೇಕಿದ್ದ ಮಂಜುಳ ಅವರು ಇಷ್ಟು ಬೇಗ ಎಲ್ಲರನ್ನು ಅಗಲಿದ್ದಾರೆ. ಮಗ, ಮಗಳು, ಕುಟುಂಬಸ್ಥರು ದುಖಃಪ್ತರಾಗಿದ್ದಾರೆ