ಓಬಿಸಿ ಮೋರ್ಚಾ ಸಮಾವೇಶ ಕಾರ್ಯಕ್ರಮದಲ್ಲಿ ಸ್ಪಷ್ಟನೆ.
ಶಿಡ್ಲಘಟ್ಟ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿರುವ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಯಾರೆಂದು ಅಂತಿಮವಾಗಲಿದೆ. ಜೆಡಿಎಸ್ , ಬಿಜೆಪಿ ಎರಡೂ ಒಂದೇ ಯಾರಿಗೇ ಟಿಕೇಟ್ ಕೊಟ್ಟರೂ ಮೋದಿಯವರ ನಾಯಕತ್ವದಲ್ಲಿ ಮತ್ತೊಮ್ಮೆ ಮೋದಿ ಎಂಬ ಸಂಕಲ್ಪದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಯೆಂದು ನನ್ನ ಹೆಸರು ಸಹಾ ಕೇಳಿ ಬಂದಿರುವುದು ನಿಜ. ಪಕ್ಷದಲ್ಲಿ ಹಿರಿಯ ಮುಖಂಡರಿಗೆ ಅವಕಾಶ ಕೊಡುವಂತೆ ನಾನು ಸಹಾ ಪಕ್ಷಕ್ಕೆ ತಿಳಿಸಿದ್ದೇನೆ. ಒಂದು ವೇಳೆ ಹೈಕಮಾಂಡ್ ನನಗೆ ಟಿಕೇಟ್ ಕೊಟ್ಟರೆ ಲೋಕಸಭಾ ಚುನಾವಣೆ ಸ್ಪರ್ದೆಗೆ ತಯಾರಿದ್ದೇನೆ ಎಂದು ಬಿ.ಜೆ.ಪಿ ಮುಖಂಡ ಹಾಗೂ ಲೋಕಸಭಾ ಟಿಕೆಟ್ ಆಕಾಂಕ್ಷಿಯಾದ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು.
ನಗರದ ಮಯೂರದ ವೃತ್ತದ ಬಳಿಯಿರುವ ಬಿಜೆಪಿ ಸೇವಾ ಸೌಧ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ, ಓ.ಬಿ.ಸಿ ಮೋರ್ಚಾ ಸಮಾವೇಶ ಕಾರ್ಯಕ್ರಮಕ್ಕೂ ಮೊದಲು ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಜೆಪಿ ಹಾಗೂ ಜೆಡಿಎಸ್ ಎರಡು ಒಂದೇ ಆಗಿದ್ದು ಎರಡು ಪಕ್ಷಗಳು ಮೋದಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಐದು ಗ್ಯಾರಂಟಿಗಳು ಸರಿಯಾದ ರೀತಿಯಲ್ಲಿ ಚಾಲನೆ ತಂದಿಲ್ಲ ಗ್ಯಾರಂಟಿಗಳು ಯಶಸ್ವಿಯಾಗಿಲ್ಲ. ಆ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿಗಾಗಿ ಚುನಾವಣೆ ಪ್ರಚಾರ ಕೈಗೊಂಡಿದ್ದೇವೆ. ದೇಶದ ಅಸ್ಮಿತೆಯಉಳಿಸಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಜಿಯವರು ಕೊಟ್ಟಿರುವ ಯೋಜನೆಗಳುಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಬೇಕು. 400 ಕ್ಕೂ ಹೆಚ್ಚು ಸ್ಥಾನಗಳನ್ನು ಭಾರತೀಯ ಜನತಾಪಾರ್ಟಿ ತೆಗೆದುಕೊಳ್ಳಬೇಕು ಎಂದರು.
ಓಬಿಸಿ ರಾಜ್ಯ ಅಧ್ಯಕ್ಷರಾದ ರಘು ಕೌಟಿಲ್ಯ ಮಾತನಾಡಿ ದೇಶದಲ್ಲಿ ಅತ್ಯಂತ ಗಟ್ಟಿಯಾಗಿರುವ ಮೋರ್ಚಾ ಒಬಿಸಿ ಮೋರ್ಚಾ ಭಾರತೀಯ ಜನತಾ ಪಾರ್ಟಿ ದೊಡ್ಡ ಆಲದ ಮರವಿದ್ದಂತೆ ಆಲದ ಮರಕ್ಕೆ ಾಯಸ್ಸು ಜಾಸ್ತಿ, ಅದಕ್ಕೆ ಒಂದೆ ಬುಡ ಇರುವುದಿಲ್ಲ. ಸುತ್ತಲೂ ಬೇರುಗಳಿರುತ್ತವೆ., 40 ಕೋಟಿಗೂ ಹೆಚ್ಚು ಸದಸ್ಯತ್ವ ಹೊಂದಿರುವ ಭಾರತೀಯ ಜನತಾ ಪಾರ್ಟಿ, ಮಡಿವಾಳ, ಗಾಣಿಗ, ಒಂದೊಂದು ವರ್ಗವೂ ಸಮಾಜಕ್ಕೆ ಕೊಡುಗೆ ಸೇವೆ ನೀಡಿದೆ. ಯಾಂತ್ರಿಕ ಕಾಲದಲ್ಲಿ ಕುಲಕಸುಬು ಕ್ಷೀಣಿಸುತ್ತಿದೆ ಹಳ್ಳಿಗಳಿಂದ ಯುವಕರು ಕೆಲಸ ಹುಡುಕಿಕೊಮಡು ನಗರ ಪ್ರದೇಶಗಳಿಗೆ ಹೋಗಿರುವ ಯುವಕರನ್ನು ತಮ್ಮ ತಮ್ಮ ಹಳ್ಳಿಗಳಲ್ಲೆ ಉದ್ದಿಮೆಗಳು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಪ್ರಧಾನ ಮಂತ್ರಿಗಳು ಒಬಿಸಿ ಎಲ್ಲಾ ವರ್ಗದ ಶ್ರಮ ಜೀವಿಗಳಿಗೆ ವಿಶ್ವಕರ್ಮ ಯೋಜನೆಯಲ್ಲಿ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ದೇಶದ ಪ್ರಧಾನ ಮಂತ್ರಿ ಮತ್ತೊಮ್ಮೆ ಮೊದಿಯವರೇ ಆಗಬೇಕು ಅದಕ್ಕೆ ನಾವೆಲ್ಲಾರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳು ಗೆಲ್ಲಬೇಕು. ಸ್ಬಚ್ವ ಭಾರತ್ ಮಿಷನ್, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ದೇಶದ ಜನರಿಗೆ ನರೇಂದ್ರ ಮೋದಿ ಅವರು ಕೊಡುಗೆ ನೀಡಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ ಓಬಿಸಿ ಜಿಲ್ಲಾಧ್ಯಕ್ಷ ಆಂಜನೇಯಗೌಡ, ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರ ಗೌಡ, ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.