Tuesday, December 24, 2024
Homeಜಿಲ್ಲೆಪರಿಶಿಷ್ಟ ಜಾತಿಯ ಒಳಮೀಸಲಾತಿ ಶೀಘ್ರದಲ್ಲೆ ಜಾರಿ : ಕೆ.ಎಚ್ ಮುನಿಯಪ್ಪ.

ಪರಿಶಿಷ್ಟ ಜಾತಿಯ ಒಳಮೀಸಲಾತಿ ಶೀಘ್ರದಲ್ಲೆ ಜಾರಿ : ಕೆ.ಎಚ್ ಮುನಿಯಪ್ಪ.

ಎತ್ತಿನ ಹೊಳೆ ನೀರು ಜಿಲ್ಲೆಗಳಿಗೆ ಬಂದೆ ಬರುತ್ತೆ.

ಶಿಡ್ಲಘಟ್ಟ : ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆಯ ಸುಮಾರು 16 ಟಿಎಂಸಿ ನೀರನ್ನು ಬಿಡುಗಡೆ ಮಾಡಲಿದ್ದೇವೆ. ಪ್ರಸ್ತುತ ನಮ್ಮ ಬಳಿ 22 ಟಿಎಂಸಿ ನೀರು ಶೇಖರಣೆ ಇದ್ದು. ಈ ಮೂರು ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಯೋಜನೆ ರೂಪಿಸಲಾಗಿದೆ. ಈ ನೀರನ್ನು ಸಂಸ್ಕರಿಸಿ ಮೊದಲು ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಆ ನಂತರ ಕೆರೆಗಳಿಗೆ ನೀರು ಬಿಡಲು ಯೋಜನೆ ತಯಾರಿದೆ. ಎತ್ತಿನ ಹೊಳೆ ನೀರು ಬಂದೇ ಬರುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಗಂಗಮ್ಮ ದೇವಾಲಯ ಮತ್ತು ಶ್ರೀ ಉಮಾ ಮಹೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ತಮ್ಮ ಬಾಲ್ಯದ ನೆನಪು ಗಳನ್ನು ಹಂಚಿಕೊಂಡು ಮಾತನಾಡಿದ ಅವರು ಈಗಾಗಲೇ ಸುಪ್ರೀಂಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಶೀಘ್ರದಲ್ಲೇ ಜಾರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರ ಜೊತೆ ಹಾಗೂ ಸಮುದಾಯದ ಶಾಸಕರೊಂದಿಗೆ ಸುದೀರ್ಘ ಚರ್ಚೆ ಮಾಡಲಾಗಿದೆ. ಅದರಂತೆ ಸಿ ಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಶೀಘ್ರವೇ ಜಾರಿ ಮಾಡುವ ಭರವಸೆ ಇದೆ ಎಂದರು.

ಶಾಸಕ ಬಿ.ಎನ್.ರವಿಕುಮಾರ್ ಅವರು ತಾಲ್ಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಹದಗಟ್ಟಿರುವ ರಸ್ತೆಗಳ ಅಭಿವೃದ್ಧಿ ಮತ್ತು ನಾವು ವಿದ್ಯಾಭ್ಯಾಸ ಮಾಡಿದ ಇದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಶಾಲಾ ಅಭಿವೃದ್ಧಿಗೆ ಸುಮಾರು 56 ಲಕ್ಷ ಅಂದಾಜು ವೆಚ್ಚ ತಗುಲಬಹುದು ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಇದಕ್ಕೆ ತಾವು ಸಿ.ಎಸ್.ಆರ್ ಪಿ ನಿಧಿಯಿಂದ ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿದ್ದೇನೆ ತಿಳಿಸಿದರು.

ತಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಹಂತ ಹಂತವಾಗಿ ತಾಲ್ಲೂಕಿನ ಅಭಿವೃದ್ಧಿಗೆ ನಾನು ಕೈ ಜೊಡಿಸುತ್ತೇನೆಂದು ಕೆ.ಎಚ್ ಮುನಿಯಪ್ಪ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್,
ಜೆ.ವಿ ಸದಾಶಿವ, ಆರ್.ಕೆ.ರಾಮಕೃಷ್ಣಪ್ಪ,
ಕೆ. ಎಂ. ಜಗದೀಶ್, ಸತೀಶ್ , ಕಂಬದ ಹಳ್ಳಿ ಕೆ.ಎಂ.ರವಿಕುಮಾರ್, ಅಶ್ವಥಪ್ಪ, ನರಸಿಂಹ (ಎನ್ ಟಿ ಆರ್), ಐಎನ್ ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮುನೀಂದ್ರ, ಭಕ್ತರಹಳ್ಳಿ ಬಿ.ಇ.ವಿಶ್ವನಾಥ್ ಸೇರಿದಂತೆ ಇತರರು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!