Sunday, December 22, 2024
Homeಜಿಲ್ಲೆತೆರದ ಕೊಳವೆ ಬಾವಿಗೆ ಬಿದ್ದಿದ್ದ ಮಗು ರಕ್ಷಣೆ.‌ ಸಾವು ಗೆದ್ದ ಸಾತ್ವಿಕ್

ತೆರದ ಕೊಳವೆ ಬಾವಿಗೆ ಬಿದ್ದಿದ್ದ ಮಗು ರಕ್ಷಣೆ.‌ ಸಾವು ಗೆದ್ದ ಸಾತ್ವಿಕ್

ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಿಸಿದೆ!

ವಿಜಯಪುರ : ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷ ಮಗುವನ್ನ ಸತತ 20 ಗಂಟೆಗಳ‌ ಕಾರ್ಯಾಚರಣೆಯ ಬಳಿಕ ಜೀವಂತವಾಗಿ ಹೊರಬಂದಿದೆ. ಕೊಳವೆ ಬಾವಿಯಲ್ಲಿ ತಲೆ ಕೆಳಗಾಗಿ ಬಿದ್ದು 20-30 ಆಳದಲ್ಲಿ ಸಿಲುಕೊಂಡಿದ್ದ ಮಗುವಿಗೆ ನಿರಂತರವಾಗಿ ಆಕ್ಸಿಜನ್ ಪೂರೈಸಿ ಮಗುವನ್ನ ಎನ್.ಡಿ‌.ಆರ್.ಎಫ್. ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕದಳ ರಕ್ಷಣಾ ಸಿಬ್ಬಂದಿ ಜೆಸಿಬಿ, ಇಟಾಜಿ, ಯಂತ್ರಗಳ ಬಳಕೆಯಿಂದ ನಿರಂತರವಾಗಿ ರಕ್ಷಣೆ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಇಂಡಿ ತಾಲ್ಲೂಕಿನ ಲಾಚಣ್ಯದಲ್ಲಿ ಕೊಳವೆ ಬಾವಿಗೆ ಬಿದ್ದ ಮಗು ಪವಾಡದಂತೆ ಜೀವಂತವಾಗಿ ಹೊರಬಂದಿದ್ದು, ಸದ್ಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.ಮಗುವಿನ  ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾರ್ಟ್ ಬೀಟ್ ನಾರ್ಮಲ್‌ ಆಗಿದೆ. ತಲೆ‌ ಕೆಳಗಾಗಿದ್ದರಿಂದ ಸಿಟಿ ಸ್ಕ್ಯಾನ್ ಮಾಡಬೇಕು ಎಂದು ತಿಳಿಸಿದ್ದಾರೆ. ನಿನ್ನೆಯಿಂದ ಹಗಲು ರಾತ್ರಿ ಸಿಬ್ಬಂದಿ‌ ಸಾಹಸ ಮಾಡಿ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಿದ್ದಾರೆ. ತಂದೆ – ತಾಯಿ‌ ಜೊತೆಗೆ ಜಮೀನ ಬಳಿ ಹೋಗಿದ್ದ  ಸಂದರ್ಭದಲ್ಲಿ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿತ್ತು.

ಮಗು ಕೊಳವೆ ಬಾವಿಗೆ ಬಿದ್ದ ಸುದ್ದಿ ಮಾದ್ಯಮಗಳ‌ ಮೂಲಕ ತಿಳಿಯುತ್ತಿದ್ದಂತೆ ನಾಡಿ ಕೋಟ್ಯಾಂತರ ಜನ ಮಗು ಜೀವಂತವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸಿದ್ದು ಎಲ್ಲರ ಪ್ರಾರ್ಥನೆ‌ ಫಲಿಸಿದೆ. 20 ಗಂಟೆಗೆ ಜೀವನ್ಮರಣ ಹೋರಾಟ ಮಾಡಿ ಸಾತ್ವಿಕ್ ಸಾವು ಗೆದ್ದ ಬಂದಿದ್ದಾನೆ.‌

ಇನ್ನಾದರೂ ಜನರು ತೆರೆದ ಕೊಳವೆ ಬಾವಿಗಳು ಮುಚ್ಚಿ ಈ ರೀತಿಯ ಘಟನೆಗಳು ಆಗದಂತೆ  ಎಚ್ಚರಿಕೆ ವಹಿಸಬೇಕಿದೆ.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!