ಶಿಡ್ಲಘಟ್ಟ : ಅತೀ ವೇಗವಾಗಿ ವಾಹನಗಳು ಚಲಾಯಿಸುವುದು ಬೆಳಗಿನ ಜಾವ ನಿದ್ರೆ ಮಂಪರಿನಲ್ಲಿ ವಾಹನಗಳು ಚಲಾಯಿಸಬಾರದು ಇದರಿಂದ ಅಪಘಾತಗಳು ಸಂಭವಿಸಿ ನಿಮ್ಮನ್ನೆ ನಂಬಿಕೊಂಡಿರುವ ಕುಟುಂಬವು ಬೀದಿ ಪಾಲು ಮಾಡುವಂತಾಗುತ್ತದೆ. ದೇವರು ಕೊಟ್ಟಿರುವ ಜೀವ ಜೋಪಾನವಾಗಿ ನೋಡಿಕೊಳ್ಳಬೇಕು ಅಪಘಾತಕ್ಕೆ ಅವಸರವೇ ಕಾರಣ ಹಾಗಾಗಿ ಪ್ರತಿಯೊಬ್ಬ ವಾಹನ ಸವಾರರು ಸಂಚಾರಿ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎಂ. ವೇಣುಗೋಪಾಲ್ ಖಡಕ್ ಸೂಚನೆ ನೀಡಿದರು.
ನಗರದ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ಟ್ರಕ್ , ಕಾರು ಮತ್ತು ಇತರೆ ವಾಹನಗಳ ಚಾಲಕರ ಸಭೆಯನ್ನು ಕರೆದು ಕಟ್ಟುನಿಟ್ಟಿನ ತಿಳುವಳಿಕೆ ನೀಡಿ ಮಾತನಾಡಿದ ಅವರು ವಾಹನಗಳು ಚಾಲನೆ ಮಾಡುವುದಕ್ಕಿಂತ ಮೊದಲು ತಮ್ಮ ವಾಹನಗಳ ಆರ್.ಸಿ. ಡ್ರೈವಿಂಗ್ ಲೈಸೆನ್ಸ್, ದಾಖಲೆಗಳು ಮತ್ತು ವಿಮೆ ಇನ್ನಿತರೆ ದಾಖಲೆಗಳು ಕಡ್ಡಾಯವಾಗಿ ತಮ್ಮ ಬಳಿ ಇರಬೇಕು. ಜೊತೆಗೆ ವಾಹನಗಳು ಚಾಲನೆ ಮಾಡುವ ಸಂದರ್ಭದಲ್ಲಿ ನಿರ್ಲಕ್ಷಿಸದೇ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಸಿಬೇಕು ನಿಮ್ಮ ಸುರಕ್ಷೆತೆಗಾಗಿ ರಸ್ತೆ ಮತ್ತು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಇನ್ನೂ ಕ್ಯಾಬ್ ಚಾಲಕರು ಸಮವಸ್ತ್ರಗಳನ್ನು ಧರಿಸಬೇಕು ಎಂದು ತಿಳಿಸಿದರು.
ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಎಲ್ಲಂದರಲ್ಲೆ ನಿಲ್ಲಿಸಬಾರದು. ಇದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಟಿ.ವೆಂಕಟರಮಣ ಪೊಲೀಸ್ ಸಿಬ್ಬಂದಿ ಅಶ್ವಥ್, ಕೃಷ್ಣ ,ಅಂಬರೀಶ್ , ಶಶಿಕುಮಾರ್ , ಠಾಣೆ ಬರಹಗಾರರಾದ ಶಿವಕುಮಾರ್ ಸೇರಿದಂತೆ ತಾಲ್ಲೂಕಿನ ಟ್ರಕ್ ಮತ್ತು ಕಾರು ಹಾಗೂ ಇತರೆ ವಾಹನಗಳ ಚಾಲಕರು ಹಾಜರಿದ್ದರು.