ಶಿಡ್ಲಘಟ್ಟ: ತಾಲ್ಲೂಕು ಉಪ ನೋಂದಣಾಧಿಕಾರಿಯಾಗಿ ನಿಯೋಜನೆ ಮೇರೆಗೆ ರೇಣುಕಾ ಪ್ರಸಾದ್ ಎನ್.ಆರ್ ಅವರು ಸೋಮವಾರದಂದು ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಾಯಿತ್ರಿ ಅವರು ವರ್ಗಾವಣೆಗೊಂಡ ನಂತರ ಹಲವು ತಿಂಗಳುಗಳಿಂದ ಪ್ರಥಮ ದರ್ಜೆ ಸಹಾಯಕಿ ಕಮಲಾಕ್ಷಿ ಅವರು ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದಿನಿಂದ ತಾಲ್ಲೂಕು ಹಿರಿಯ ಉಪ ನೋಂದಣಾಧಿಕಾರಿಯಾಗಿ ನಿಯೋಜನೆ ಮೇರೆಗೆ ರೇಣುಕಾ ಪ್ರಸಾದ್ ಎನ್.ಆರ್ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಇಂದು ಕಛೇರಿಯಲ್ಲಿ ಉದಯಕಾಲ ಪತ್ರಿಕೆಯೊಂದಿಗೆ ಮಾತನಾಡಿದ ಕಾವೇರಿ 2.0 ತಂತ್ರಾಶ ಅನುಷ್ಠಾನವಾದಾಗಿನಿಂದ ದಸ್ತಾವೇಜುಗಳು ತ್ವರಿತವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಇ.ಸಿ. ದಸ್ತಾವೇಜು ನಕಲು, ಎಲ್ಲವೂ ಅಂತರ್ಜಾಲ ಕಾವೇರಿ ತಂತ್ರಾಶದಲ್ಲೆ ಪಡೆಯಬಹುದು. ಇದರಿಂದ ನಾಗರೀಕರಿಗೆ ತುಂಬಾ ಅನುಕೂಲವಾಗಿದೆ. ಯಾವುದೇ ರೀತಿಯ ಅವ್ಯವಹಾರ, ಲೋಪದೋಷಗಳು ನಡೆಯಲು ಅವಕಾಶಗಳು ಇರುವುದಿಲ್ಲ. ಅಧಿಕಾರಿಗಳು ಸಹಾ ಸುರಕ್ಷತೆಯಿಂದ ಕೆಲಸ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದೆ ಚನ್ನಪಟ್ಟಣ ಮತ್ತು ಹೊಸಕೋಟೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ಶಿಡ್ಲಘಟ್ಟದ ಉಪ ನೋಂದಣಾಧಿಕಾರಿಯಾಗಿ ನಿಯೋಜನೆ ಮೇರೆಗೆ ಅಧಿಕಾರ ವಹಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.