ಪೊಲೀಸ್ ಇಲಾಖೆಯಿಂದ ಜಾಲ ತಾಣದ ಮೂಲಕ ಜನ ಜಾಗೃತಿ ಅಭಿಯಾನ.
‘ಸಂವಿಧಾನ ಶಕ್ತಿ ನ್ಯೂಸ್ ‘ ಶಿಡ್ಲಘಟ್ಟ : ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲುಗಡೆ (ಪಾರ್ಕಿಂಗ್) ಮಾಡುವಾಗ ಅಡ್ಡಾದಿಡ್ಡಿಯಾಗಿ ಇತರರಿಗೆ ತೊಂದರೆಯಾಗದಂತೆ ನಿಲ್ಲಿಸುವಂತೆ ಪೊಲೀಸ್ ಇಲಾಖೆ, ಜನ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ಶಿಡ್ಲಘಟ್ಟದ ಆರಕ್ಷಕ ವೃತ್ತ ನಿರೀಕ್ಷಕರಾದ ಎಂ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಡಿಐಜಿ ಸಾಹೇಬರು, ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ಸಾಹೇಬರು ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯ ವತಿಯಿಂದ ಸಾಮಾಜಿಕ ಜಾಲತಾಣದ ಮೂಲಕ ಜನ ಜಾಗೃತಿ ಅಭಿಯಾನ ಮೂಡಿಸಲಾಗುತ್ತಿದೆ.
ರಸ್ತೆಯ ಬದಿಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ಕಿರಿಕಿರಿ, ವಾಹನಗಳ ಸಂಚಾರಕ್ಕೆ ಅಡಚಣೆ, ಹಾಗೂ ತೊಂದರೆಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತಿದ್ದು, ಇದನ್ನು ಗಮನಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು ಸಾರ್ವಜನಿಕರಿಗೆ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮೂಲಕ ಜನರಿಗೆ ಅರಿವು ಮೂಡಿಸುವ ವಿನೂತನವಾಗಿ ಕಾರ್ಯ ಆರಂಭಮಾಡಿದೆ.
ಪೊಲೀಸ್ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ರೀತಿಯ ಅನಾಹುತಗಳು ಆಗಬಾರದೆಂಬ ಕಾಳಜಿಯಿಂದ ಜನರಿಗೆ ಅಭಿಯಾನದ ಮೂಲಕ ಅರಿವುಮೂಡಿಸುತ್ತಿದ್ದು, ಇದನ್ನು ಪಾಲಿಸುವುದು ಎಲ್ಲರ ಜವಬ್ದಾರಿವಾಗಿದೆ. ನಮ್ಮೆಲ್ಲರ ಸುರಕ್ಷತೆಗಾಗಿ ನಿಯಮಗಳು ಪಾಲಿಸಿ ಅನುಸರಿಸಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ, ಕಾನೂನು ಚೌಕಟ್ಟಿನಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುವುದಕ್ಕೆ ಹಕ್ಕಿದೆ. ಅದೇ ಕಾನೂನನ್ನು ಗೌರವಿಸುವುದು ಜೊತೆಗೆ ಅದನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಹಾಗೂ ಜವಬ್ದಾರಿಯಾಗಿದೆ ಎಂದು ಹೇಳಿದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್