ಬೆಂಗಳೂರು: ನಾಗರೀಕರ ಆಸ್ತಿ-ಪಾಸ್ತಿ ಕಾನೂನು ಸುವ್ಯವಸ್ಥೆ ರಕ್ಷಣೆ ನೀಡುವ ಪೊಲೀಸ್ ಎಂದರೆ ಭರವಸೆ. ದುಷ್ಟರಿಂದ ಸಮಾಜವನ್ನು ರಕ್ಷಣೆ ಮಾಡುವ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಗಳಿಸಿರುವ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಅಧಿಕಾರಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಅವರಿಗೆ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದೆ. ಪೊಲೀಸ್ ಇಲಾಖೆಯಲ್ಲಿ ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರದೂರು ದುಮ್ಮಾನಗಳಿಗೆ ಸ್ಪಂಧಿಸಿ ಕೆಲಸ ಮಾಡುತ್ತಾ ಜನಪ್ರಿಯತೆ ಗಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಜನಸಿದ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ವಿದ್ಯಾಬ್ಯಾಸವನ್ನು ಮುಗಿಸಿಕೊಂಡು. ವಿಜ್ಞಾನ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಪಡೆದು. ತಮ್ಮ ವಿದ್ಯಾರ್ಥಿ ಜೀವನದಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಆಸಕ್ತಿ ಕಾಳಜಿ ಹೊಂದಿದ್ದರು. ಮೊದಲ ಪ್ರಯತ್ನದಲ್ಲೇ 2017 ನೇ ಸಾಲಿನಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಆಯ್ಕೆಯಾಗಿ ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ವಿಭಾಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವಹಿಸಿದ್ದಾರೆ. ಚಾಮರಾಜನಗರ ನಗರದ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯವೇ ದೇವರು ನಂಬಿ ಬದ್ದತೆಯಿಂದ ಸೇವೆ ಸಲ್ಲಿಸಿದ್ದಾರೆ. ಹಿಂದೆ ಚಾಮರಾಜನಗರ ಜಿಲ್ಲೆಯ ಉಪ ವಿಭಾಗದಲ್ಲಿ ಬೆಂಕಿಯಂತೆ ಉರಿದ ಕೋಮು ಗಲಭೆಯನ್ನು ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ತಡೆದು ಸೈ ಎನಿಸಿಕೊಂಡಿದ್ದರು.
ಕೊರೋನಾ ಮಾರಕ ಕಾಯಿಲೆ ಅತಿಕ್ರಮಿಸಿದ ಪರಿಸ್ಥಿತಿಯಲ್ಲಿ ಇಡೀ ದೇಶವೆ ಲಾಕ್ ಡೌನ್ ಆಗಿತ್ತು. ಆ ಲಾಕ್ ಡೌನ್ ನಲ್ಲೂ ನಾಗರೀಕರ ಹಿತದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಬೆಂಗಳೂರು ನಗರ ಪೋಲಿಸ್ ವ್ಯಾಪ್ತಿಯ ಮಾರುತಹಳ್ಳಿ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಸ್ನಾತಕೋತ್ತರ ಪದವಿಯ ಇಂಪ್ಯಾಕ್ಷ ಆಪ್ ಲ್ಯಾಂಗವೇಜ್ ಪಾಲಿಸಿ ಆಂಡ್ ಪ್ಲಾನಿಂಗ್ ಇನ್ ಇಂಡಿಯಾ ಇನ್ ದಿ ಗ್ಲೋಬಲೈನ್ಸ್ ಕಾಂಟೆಕ್ಸ್ ಎ.ಸ್ಟಡಿ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರಧಾನ ಪಡೆದಿದ್ದಾರೆ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ರಾಜೇಂದ್ರ ನಾಯಕ ಮಾರ್ಗದರ್ಶನ ನೀಡಿದ್ದು. ಪ್ರಿಯದರ್ಶಿನಿ ಅವರು ಪಿಎಚ್ ಡಿ ಪದವಿ ಪಡೆದಿದ್ದಾರೆ.