Monday, December 23, 2024
Homeದೇಶಸೈಬ‌ರ್ ಕ್ರೈಂ ತೊಲಗಿಸಿ ಪ್ರಧಾನಿ ನರೇಂದ್ರ ಮೋದಿ ಕರೆ.

ಸೈಬ‌ರ್ ಕ್ರೈಂ ತೊಲಗಿಸಿ ಪ್ರಧಾನಿ ನರೇಂದ್ರ ಮೋದಿ ಕರೆ.

ಮನ್‌ ಕೀ ಬಾತ್‌ನಲ್ಲಿ ವಿಜಯಪುರದ ಸೈಬರ್ ಕೇಸ್ ಉಲ್ಲೇಖ.

ನವದೆಹಲಿ: ಸೈಬರ್ ವಂಚಕನೋರ್ವ ವಿಜಯಪುರ ಸಂತೋಷ್ ಚೌಧರಿಗೆ ಕರೆ ಮಾಡಿ ಹಣಕ್ಕೆ ಬ್ಯಾಕ್‌ಮೇಲಿ ಮಾಡಿದ್ದ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದಾಹರಣೆ ಮೂಲಕ ಉಲ್ಲೇಖಿಸಿ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ವಿಡಿಯೋ ಕಾಲ್ ಮೂಲಕ ಪೊಲೀಸ್ ತನಿಖೆ ನೆಪ ಅಥವಾ ಡಿಜಿಟಲ್ ಅರೆಸ್ಟ್ ಮಾಡುವ ವಂಚನೆಯ ಬಗ್ಗೆ ಮೋದಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ದೇಶದಲ್ಲೇ ಸುದ್ದಿ ಮಾಡಿದ್ದ ರಾಜ್ಯದ ವಿಜಯಪುರದ ಸಂತೋಷ್ ಚೌಧರಿ ಪ್ರಕರಣವನ್ನು ಉದಾಹರಣೆಗೆ ತೆಗೆದುಕೊಂಡಿದ್ದಾರೆ. ಸೈಬರ್ ವಂಚನೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್, ಸಿಬಿಐ, ಇಡಿ ನೆಪದಲ್ಲಿ ಕರೆ ಮಾಡುತ್ತಾರೆ. ಇದಕ್ಕೆ ಡಿಜಿಟಲ್ ಅರೆಸ್ಟ್ ಎನ್ನುತ್ತಾರೆ. ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಮಾಡಲಾಗುತ್ತಿದೆ. ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕಿ ಬಹಳಷ್ಟು ಕಾನ್ಸಿಡೆನ್ಸ್ ಮೂಲಕ ಮಾತನಾಡುವ ವಂಚಕರು ಭಯದ ವಾತಾವರಣ ನಿರ್ಮಾಣ ಮಾಡಿ, ನಿಮ್ಮನ್ನು ಹೆದರಿಸುತ್ತಾರೆ. ಸಮಯದ ಒತ್ತಡ ಹಾಕಿ ಬಂಧನದ ಆತಂಕ ನಿರ್ಮಿಸುತ್ತಾರೆ ಎಂದು ಹೇಳಿದರು. ಡಿಜಿಟಲ್ ಅರೆಸ್ಟ್ ವಂಚನೆಗೆ ಎಲ್ಲ ವಯಸ್ಸಿನ ಜನರು ಬಲಿಯಾಗುತ್ತಿದ್ದಾರೆ.

ತಮ್ಮ ದುಡಿಮೆ ಹಣವನ್ನು ಕಳೆದುಕೊಳುತ್ತಿದ್ದಾರೆ. ಇಂತಹ ಕಾಲ್ ಬಂದರೆ ಆತಂಕಗೊಳ್ಳದೇ ನಿಮ್ಮ ಯಾವುದೇ ಮಾಹಿತಿ ನೀಡಬೇಡಿ ಎಂದು ದೇಶದ ಜನರಿಗೆ ತಿಳಿಸಿದರು.

ಸೈಬರ್ ಅಪರಾಧಗಳು ಸಮಾಜದ ಎಲ್ಲ ವರ್ಗದವರನ್ನು ಸಂಕಷ್ಟಕ್ಕೀಡು ಮಾಡಿವೆ. ತನಿಖಾ ಸಂಸ್ಥೆಗಳು ಡಿಜಿಟಲ್ ವಂಚನೆ ವಿರುದ್ಧ ಹೋರಾಟ ನಡೆಸುತ್ತಿವೆ. ಆದರೆ, ಈ ಮೋಸದ ಜಾಲದಿಂದ ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಜಾಗೃತರಾಗಿರಬೇಕು. ಯಾವುದೇ ತನಿಖಾ ಸಂಸ್ಥೆಗಳು ವಿಚಾರಣೆಗಾಗಿ ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ಸಂಪರ್ಕಿಸುವುದಿಲ್ಲ ಎಂದು ತಿಳಿಸಿದರು.

ಸೈಬರ್ ವಂಚನೆ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲು-ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಎರಡನೆಯದಾಗಿ- ಭಯದ ವಾತಾವರಣ ಸೃಷ್ಟಿಸಲು ಪೊಲೀಸ್ ಅಧಿಕಾರಿಯ ವೇಷ, ನಕಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆಯನ್ನು ತೋರಿಸುವ ಮೂಲಕ ಹೆದರಿಸುತ್ತಾರೆ. ಮೂರನೆಯದಾಗಿ- ಮಾನಸಿಕ ಒತ್ತಡ ಹಾಕಿ ನಿಮ್ಮನ್ನು ವಂಚನೆಗೆ ಗುರಿ ಮಾಡುತ್ತಾರೆ ಎಂದು ಪ್ರಧಾನಿ ವಿವರಿಸಿದರು.

ತಾಳ್ಮೆಯಿಂದ ವಿದ್ಯಮಾನವನ್ನು ಗಮನಿಸಿ, ಬುದ್ದಿವಂತಿಕೆಯಿಂದ ಅಂಥವರನ್ನು ನಿರ್ವಹಿಸಬೇಕು. ಅವರ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಕು ಮತ್ತು ಸ್ಟೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ, ರಾಷ್ಟ್ರೀಯ ಸೈಬರ್ ಸಹಾಯವಾಣಿಯಾದ 1930 ಡಯಲ್ ಮಾಡಲು ಅಥವಾ ಸೈಬರ್ ಪೋರ್ಟಲ್, ಪೊಲೀಸರಿಗೆ ದೂರು ನೀಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ದಶಕದ ಸಂಭ್ರಮ : ಮನ್ ಕಿ ಬಾತ್ 10 ವರ್ಷಗಳನ್ನು ಪೂರೈಸಿದೆ. ಈ ಕಾರ್ಯಕ್ರಮವನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶು, ಪರ್ಷಿಯನ್ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಹಾಗೂ 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆಲ್ ಇಂಡಿಯಾ ರೇಡಿಯೋದ 500ಕ್ಕೂ ಹೆಚ್ಚು ಕೇಂದ್ರಗಳಿಂದಲೂ ಪ್ರಸಾರ ಮಾಡಲಾಗುತ್ತದೆ.

ಮೇಡ್ ಬೈ ಇಂಡಿಯನ್ಸ್ : ಇದಲ್ಲದೇ, ಆತ್ಮನಿರ್ಭರ ಭಾರತದ ಬಗ್ಗೆಯೂ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ನಾವೀನ್ಯತೆಯ ಜಾಗತಿಕ ಶಕ್ತಿ ಕೇಂದ್ರವಾಗಿ ನಮ್ಮ ದೇಶವನ್ನು ರೂಪಿಸುವ ಅಗತ್ಯವಿದೆ. ಹೀಗಾಗಿ ಮೇಕ್ ಇನ್ ಇಂಡಿಯಾ. ಮೇಡ್ ಬೈ ಇಂಡಿಯನ್ಸ್ ಅಭಿಯಾನ ಮಹತ್ವದ್ದಾಗಿದೆ ಎಂದರು. ಅನಿಮೇಷನ್ ಕ್ಷೇತ್ರದಲ್ಲಿ ಭಾರತೀಯ ಪ್ರತಿಭೆಗಳು ಮಿಂಚುತ್ತಿದ್ದಾರೆ. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಈ ಕ್ಷೇತ್ರದಲ್ಲಿ ಮೇಡ್ ಬೈ ಇಂಡಿಯಾ ಹೆಚ್ಚು ಪ್ರಕಾಶಿಸುತ್ತಿದೆ. ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪಟ್ಟು ಮುಂತಾದ ಭಾರತೀಯ ಅನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಈ ಸೃಜನಶೀಲತೆಯನ್ನು ಜಗತ್ತೇ ಇಷ್ಟಪಡುತ್ತಿದೆ ಎಂದು ಹೇಳಿದರು.

ನಿರೀಕ್ಷಿಸಿ, ಯೋಚಿಸಿ, ಕ್ರಮ ತೆಗೆದುಕೊಳ್ಳಿ : ಡಿಜಿಟಲ್ ಭದ್ರತೆಯ ಮೂರು ಹಂತಗಳನ್ನು ನಿಮಗೆ ಹೇಳುತ್ತೇನೆ. ನಿರೀಕ್ಷಿಸಿ, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ಉಲ್ಲೇಖಿಸಿದ್ದಾರೆ.

ಹಂತ 1: ನಿಮಗೆ ಕರೆ ಬಂದ ತಕ್ಷಣ ನಿರೀಕ್ಷಿಸಿ, ಗಾಬರಿಯಾಗಬೇಡಿ, ಶಾಂತವಾಗಿರಿ. ಯಾವುದೇ ಆತುರದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಸಾಧ್ಯವಾದರೆ ಸ್ಟೀನ್‌ಶಾಟ್ ತೆಗೆದುಕೊಳ್ಳಿ ಮತ್ತು ರೆಕಾರ್ಡಿಂಗ್ ಮಾಡಿ.

ಹಂತ 2: ಯೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ದೂರವಾಣಿ ಮೂಲಕ ಇಂತಹ ಬೆದರಿಕೆಗಳನ್ನು

ನೀಡುವುದಿಲ್ಲ, ಎಡಿಯೋ ಕಾಲ್‌ ನಲ್ಲಿ ವಿಚಾರಿಸುವುದಿಲ್ಲ ಅಥವಾ ಅಂತಹ ಹಣವನ್ನು ಕೇಳುವುದಿಲ್ಲ, ನಿಮಗೆ ಭಯವಾಗಿದ್ದರೆ ಏನೋ ತಪ್ಪಾಗಿದೆ ಎಂದು ಅರ್ಥ ಮಾಡಿಕೊಳ್ಳಿ.

ಹಂತ 3: ಕ್ರಮ ತೆಗೆದುಕೊಳ್ಳಿ, ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಅನ್ನು ಡಯಲ್ ಮಾಡಿ. ಕುಟುಂಬ ಮತ್ತು 2 ಪೊಲೀಸರಿಗೆ ಮಾಹಿತಿ ನೀಡಿ, ಸಾಕ್ಷ್ಯವನ್ನು ಸುರಕ್ಷಿತವಾಗಿ ಇರಿಸಿ ಎಂದು ಸೂಚಿಸಿದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!