ಶಿಡ್ಲಘಟ್ಟ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ(ರಿ) ತಾಲ್ಲೂಕು ಅಧ್ಯಕ್ಷರಾಗಿ ತಾಲ್ಲೂಕಿನ ಜೆ ವೆಂಕಟಾಪುರದ ಪ್ರಸನ್ನ ಕುಮಾರ್ ಎಂ ಅವರು ನೇಮಕವಾಗಿದ್ದಾರೆ. ಇನ್ನೂ ಉಪಾಧ್ಯಕ್ಷರಾಗಿ ಎ.ಸ್ವಾಮಿ, ಗೌರವಾಧ್ಯಕ್ಷರು ರಾಮಚಂದ್ರ.ಆರ್, ಪ್ರಧಾನಕಾರ್ಯದರ್ಶಿ ವೆಂಕಟೇಶಪ್ಪ ಎನ್, ಖಜಾಂಚಿಯಾಗಿ ವಿಜಯ್ ಕುಮಾರ್ ಆರ್ ಇವರನ್ನ ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಸುರೇಶ್ ಅವರು ನೇಮಕಾತಿ ಆದೇಶ ಪತ್ರವನ್ನು ವಿತರಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ತಾಲ್ಲೂಕು ಕೇಂದ್ರದಲ್ಲಿ ಸಂಘದ ಕಛೇರಿಗೆ ಜಾಗ ಮಾಡಿಕೊಡಬೇಕು ಜೊತೆಗೆ ಪತ್ರಕರ್ತರಿಗೆ ನಿವೇಶನಗಳು ಹಾಗೂ ಸರ್ಕಾರದ ಸೌಲಭ್ಯಗಳು ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಮನವಿ ಪತ್ರವನ್ನ ಸಲ್ಲಿಸಿದ್ದೇವೆ ಎಂದು ಪತ್ರಿಕೆಗೆ ತಾಲ್ಲೂಕು ಕ.ಕಾ.ಪ.ಧ್ವನಿ ಸಂಘದ ಅಧ್ಯಕ್ಷರಾದ ಎಂ. ಪ್ರಸನ್ನ ಕುಮಾರ್ ತಿಳಿಸಿದರು.
(ಗೌರವಾಧ್ಯಕ್ಷರು – ರಾಮಚಂದ್ರ)
(ಉಪಾಧ್ಯಕ್ಷರು – ಎನ್. ಸ್ವಾಮಿ)
(ಪ್ರಧಾನಕಾರ್ಯದರ್ಶಿ – ವೆಂಕಟೇಶಪ್ಪ)
(ಖಜಾಂಚಿ- ವಿಜಯ್ ಕುಮಾರ್ ಆರ್)
ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ.
ಈ ಹಿಂದೆ ಪತ್ರಕರ್ತರಾದ ಕೋಟಹಳ್ಳಿ ಅನಿಲ್ ಕುಮಾರ್ ಅವರು ಈ ಸಂಘದ ಅಧ್ಯಕ್ಷರಾಗಿರುತ್ತಾರೆ. ಬಳಿಕ ಅವರೇ ಸಂಘಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿರುತ್ತಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘದಲ್ಲಿ ಅವರು ಯಾವುದೇ ಹುದ್ದೆಯನ್ನಾಗಲೀ ಅಥವಾ ಸದಸ್ಯತ್ವವನ್ನು ಹೊಂದಿರುವುದಿಲ್ಲವೆಂದು ಸ್ಪಷ್ಟಪಡಿಸಿದರು.