ಕರ್ನಾಟಕ ಮಾದಿಗ ದಂಡೋರ ಸಮಿತಿಯ ಶಿಡ್ಲಘಟ್ಟ ತಾಲ್ಲೂಕು ನೂತನ ಪದಾಧಿಕಾರಿಗಳ ಆಯ್ಕೆ.
ಶಿಡ್ಲಘಟ್ಟ: ನಾವೆಲ್ಲರೂ ನಮ್ಮ ಮಕ್ಕಳಿಗೆ ಅಸ್ತಿ ಪಾಸ್ತಿ ಬದಲು ಉತ್ತಮ ವಿದ್ಯಾಭ್ಯಾಸ ಕೊಡಿಸಿವುದರ ಮೂಲಕ ಉತ್ತಮ ವಿದ್ಯಾವಂತರಾನ್ನಾಗಿ ಮಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ಮಾಡಲು ನಾವೆಲ್ಲರೂ ಒಗ್ಗೂಡಿ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಮ್ಮ ಮಾದಿಗ ಸಮುದಾಯದ ಪ್ರತಿಯೊಬ್ಬರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಂಘಟಕಾರಾಗಿ ಬೆಳೆಯಬೇಕು ಹಾಗೂ ಕಡ್ಡಾಯವಾಗಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ತಿಳಿಸಿದರು
ಶಿಡ್ಲಘಟ್ಟ ತಾಲ್ಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ: ತಾಲ್ಲೂಕು ಗೌರವಾಧ್ಯಕ್ಷರಾಗಿ ವಿ.ದೇವಪ್ಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಎಂ.ಜಿ.ಗುರುಮೂರ್ತಿ ,ಉಪಾಧ್ಯಕ್ಷರಾಗಿ ವೆಂಕಟೇಶಪ್ಪ (ಯೇಸುಪ್ರಭು) ಪ್ರಧಾನ ಕಾರ್ಯದರ್ಶಿ ಯಾಗಿ ನಂದಕುಮಾರ್ ,ಖಜಾಂಚಿ ಹನುಮಂತಪುರ ನರಸಿಂಹಪ್ಪ ,ಜಂಟಿ ಕಾರ್ಯದರ್ಶಿಯಾಗಿ ,ಸಿ.ವಿ.ವೆಂಕಟರೋಣಪ್ಪ ,ಕಾರ್ಯದರ್ಶಿಯಾಗಿ ಯಲಗಲಹಳ್ಳಿ ವೆಂಕಟೇಶ್ ,ಕಾರ್ಯಧ್ಯಕ್ಷರಾಗಿ ಎಂ.ಮುನಿರಾಜು ,ತಾಲ್ಲೂಕು ಸಲಹೆಗಾರರಾಗಿ ಕೆ.ವೆಂಕಟರವಣ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎಂ.ಕೃಷ್ಣಪ್ಪ ,ರಾಜ್ಯ ಖಜಾಂಚಿ ಮುನಿರಾಜು , ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಗಂಗಾಧರಪ್ಪ ,ಪ್ರಧಾನ ಕಾರ್ಯದರ್ಶಿ ಎಂ.ಆರ್.ನಾರಾಯಣಸ್ವಾಮಿ ಆಟೋ ಮುನಿ ನರಸಿಂಹಮೂರ್ತಿ ,ನರಸಿಂಹ ,ಅಬ್ಲೂಡು ಶಿವ ,ರಾಜಶೇಖರ ,ಅರುಣ್ ಸೇರಿದಂತೆ ಮುಂತಾದವರು ಹಾಜರಿದ್ದರು.