ಶಿಡ್ಲಘಟ್ಟ : ಆರೋಗ್ಯವೇ ಮಹಾಭಾಗ್ಯ ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ತಾಲ್ಲೂಕು ಆರೋಗ್ಯ ಇಲಾಖೆಯ ಇಲಾಖೆಯಿಂದ ಇಂದು ಅಧಿಕಾರಿಗಳ ತಂಡ ತಂಬಾಕು ನಿಷೇದ ಕಾರ್ಯಕ್ರಮದಡಿ ತಂಬಾಕು, ಗುಟ್ಕಾ ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ 20 ಪ್ರಕರಣಗಳಿಗೆ ಸೆಕ್ಷನ್ 4 ಅಡಿಯಲ್ಲಿ 650 ರೂಗಳು ಮತ್ತು ಸೆಕ್ಷನ್ 6ಎ ಅಡಿಯಲ್ಲಿ 750 ಒಟ್ಟು 1400 ರೂಪಾಯಿಗಳ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ದೇವರಾಜು ಪತ್ರಿಕೆಗೆ ತಿಳಿಸಿದರು.
ನಗರದಲ್ಲಿ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡವನ್ನು ವಿಧಿಸಲಾಯಿತು. ಜೊತೆಗೆ ತಂಬಾಕು ಉತ್ಪನ್ನಗಳು ಸೇವನೆ ಮಾಡುವುದರಿಮದ ಮನುಷ್ಯನ ಆರೋಗ್ಯದ ಕೆಟ್ಟ ಪರಿಣಾಮ ಬೀರುತ್ತದೆ. ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ನಗರ ಪ್ರದೇಶದಲ್ಲಿ ಕೆಲವು ಹೋಟೆಲ್ ಗಳಲ್ಲಿ ಸ್ವಚ್ಚತೆ ಮರಿಚೀಕೆಯಾಗಿದೆ. ಆರೋಗ್ಯ ಇಲಾಖೆಯ ನಿಯಮಗಳು ಗಾಳಿಗೆ ತೂರಿ ತಮಗೆ ಇಷ್ಟಬಂದಂತೆ ಆಹಾರವನ್ನು ತಯಾರಿಸಿ ಜನರಿಗೆ ಉಣ ಬಡಿಸುತ್ತಿದ್ದಾರೆ. ಸ್ವಚ್ಚತೆ ನಿರ್ವಹಣೆ ಮಾಡದೇ ಆಹಾರವನ್ನು ತಯಾರಿಸಿ ಜನರಿಗೆ ನೀಡುವುದರಿಂದ ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಜೊತೆಗೆ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿದ್ದು ಮುಂಜಾಗ್ರತವಾಗಿ ಇದರ ಬಗ್ಗೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಕೇವಲ ಪೊಟೋಗಳಿಗೆ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತವಾಗಬಾರದೆಂದು ಸಾರ್ವಜನಿಕ ವಲಯದಲ್ಲಿ ಜನ ಸಾಮಾನ್ಯರ ಅಭಿಪ್ರಾಯವಾಗಿದೆ. ಈ ಬಗ್ಗೆ ನಗರಸಭೆ ಮತ್ತು ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.
ಈ ದಾಳಿಯಲ್ಲಿ ಜಿಲ್ಲಾ ತಂಬಾಕು ಘಟಕದಿಂದ ರಾಘವೇಂದ್ರ, ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ಸುನಿಲ್, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.