Monday, December 23, 2024
Homeಜಿಲ್ಲೆಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ.

ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ.

ಸರ್ಕಾರದ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು : ಡಿ.ವೈ.ಎಸ್ಪಿ ಶಿವಕುಮಾರ್.

ಗೌರಿಬಿದನೂರು : ನಗರದ ಡಾ. ಹೆಚ್. ಎನ್. ಕಲಾಭವನದಲ್ಲಿ ಡಿವೈಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಗೌರಿ-ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು.

ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು , ಸಾರ್ವಜನಿಕವಾಗಿ ವಿವಿಧ ಸಂಘ ಸಂಸ್ಥೆಗಳು ಗಣೇಶ ಪ್ರತಿಷ್ಠಾಪಿಸುವ ಮುನ್ನ ಪಾಲಿಸಬೇಕಾದ ನಿಯಮ ಹಾಗೂ ನಿಬಂಧನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು, ಮುಖ್ಯವಾಗಿ ಗಣೇಶ ಪ್ರತಿಷ್ಠಾಪಿಸವ ಸ್ಥಳದ ಮಾಹಿತಿ ಹಾಗೂ ಸ್ಥಳದ ಮಾಲೀಕರಿಂದ, ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿರಬೇಕು, ಯಾವುದೇ ಗಣೇಶ ಸಂಘ ಸಂಸ್ಥೆಯವರು, ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಆಚರಿಸಬೇಕು ಎಂದ ಅವರು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು , ಪೊಲೀಸ್ ಇಲಾಖೆಯ ಆದೇಶಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕು ಜೊತೆಗೆ ಗಣೇಶೋತ್ಸವಗಳು ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗುವಂತಾಗಬೇಕು ಎಂದು ತಿಳಿಸಿದರು.

ಗಣೇಶ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿಸರ್ಜನೆ ವೇಳೆ ಕರ್ಕಶ ಸದ್ದು ಮಾಡುವುದು ನಿಶೇದಿಸಲಾಗಿದೆ, ಹಿರಿಯರ , ಆನಾರೋಗ್ಯದಿಂದ ಬಳಲುತ್ತಿರುವ ಸಾರ್ವಜನಿಕರಿಗೆ , ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಬೇಕಿದೆ, ಸಾರ್ವಜನಿಕರಿಗೆ ಯಾವುದೇ ಇತರೆ ಕೋಮಿನವರಿಗೆ ತೊಂದರೆಯಾಗದ ರೀತಿಯಲ್ಲಿ ಗಣೇಶೋತ್ಸವಗಳನ್ನು ಆಚರಿಸುವಂತೆ ತಿಳಿಸಿದ ಅವರು, ಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ಧತಯಿಂದ ಆಚರಿಸುವಂತೆ ತಿಳಿಸಿದರು.

ವೃತ್ತನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಮಾತನಾಡಿ, ಗಣೇಶೋತ್ಸವಗಳು ನಮ್ಮ ಸಂಸ್ಕøತಿ ಸಂಪ್ರದಾಯಗಳನ್ನು ಬಿಂಬಿಸುವ ಉತ್ಸವಗಳಾಗಬೇಕು, ವಿನಾಕಾರಣ ಗೊಂದಲದ ವಾತಾವರಣ ಸೃಷ್ಟಿಯಾಗಬಾರದು, ಪೊಲೀಸ್ ಇಲಾಖೆಯ ನಿಬಂಧನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪ್ರತಿಯೊಂದು ಗಣೇಶ ಪ್ರತಿಷ್ಟಾಪಿಸಿರುವ ಕಡೆಗಳಲ್ಲಿ ಸಿಸಿ ಕ್ಯಾಮರ ಕಡ್ಡಾಯವಾಗಿ ಅಳವಡಿಸಿ ಅದು ನಿಮಗೂ, ನಮಗೂ ಹೆಚ್ಚು ಅನುಕೂಲ , ಯಾವುದೇ ರೀತಿ ಅಹಿತಕರ ಘಟನೆಗಳು ನಡೆದಯಂತೆ ತಡೆಯಬಹುದಾಗಿದೆ ಎಂದು ಹೇಳಿದರು.

ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ  ಸಂಘ ಸಂಸ್ಥೆಯವರಿಗೆ ಈ ಬಾರಿ ಗಣೇಶೋತ್ಸವ ಶಾಂತಿ ಸೌಹಾರ್ಧತೆಯಿಂದ ನಡೆಸಿದವರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು, ನಿಮ್ಮ ಗಣೇಶೋತ್ವಗಳು ಸಮಾಜಮುಖಿಯಾಗಿರಲಿ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ  ಆರಕ್ಷಕ ಉಪನೀರಿಕ್ಷರಾದ   ಗೋಪಾಲ್, ರಮೇಶ್ ಗುಗ್ಗರಿ, ಮೂರ್ತಿ, ಚಂದ್ರಕಲಾ, ಲಲಿತಮ್ಮ ಮತ್ತು ಸಿಬ್ಬಂದ್ದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಭಾಗವಹಿಸಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!