Tuesday, December 24, 2024
Homeಜಿಲ್ಲೆಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪಟೇಲ್ ನಾರಾಯಣಸ್ವಾಮಿ ಆಯ್ಕೆ. 

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪಟೇಲ್ ನಾರಾಯಣಸ್ವಾಮಿ ಆಯ್ಕೆ. 

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪಟೇಲ್ ನಾರಾಯಣಸ್ವಾಮಿ ಅವರು  ಆಯ್ಕೆ ಯಾಗಿದ್ದಾರೆ. ಶನಿವಾರದಂದು ಚಿಕ್ಕಬಳ್ಳಾಪುರದ ನಂದಿ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಅವರು ಪಟೇಲ್ ನಾರಾಯಣಸ್ವಾಮಿ  ಅವರನ್ನು ಆಯ್ಕೆ ಮಾಡಿ ಪದಗ್ರಹಣ ಪ್ರಮಾಣ ಪತ್ರವನ್ನು ವಿತರಿಸಿ  ಅಭಿನಂದನೆಗಳು ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ಪಟೇಲ್ ನಾರಾಯಣಸ್ವಾಮಿ ಅವರು ಕನ್ನಡದ ಶಿಕ್ಷಕ ವೃತ್ತಿಯ ಜೊತೆಗೆ ನಾಡು, ನುಡಿ, ಜಲ ಭಾಷೆ, ಕನ್ನಡದ ಕಾರ್ಯಕ್ರಮಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ  ಚಟುವಟಿಕೆಗಳು, ನಿರೂಪಣೆ, ಹಾಡುಗಾರಿಕೆ,  ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಇವರ ಸೇವೆಯನ್ನು ಗುರುತಿಸಿ, ಪರಿಷತ್ತಿನ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಿ ಪಟೇಲ್ ನಾರಾಯಣಸ್ವಾಮಿ ಅವರನ್ನ ಕನ್ನಡ ಸಾಹಿತ್ಯ ಪರಿಷತ್ತಿನ ದ್ಯೇಯೋದ್ದೇಶಗಳು ಹಾಗೂ ಆಶಯಗಳಿಗೆ ಅನುಗುಣವಾಗಿ ಪರಿಷತ್ತಿನ ಸದಸ್ಯರ ವಿಶ್ವಾಸ ಹಾಗೂ ಸಹಕಾರ ಪಡೆದು ಕರ್ತವ್ಯ ನಿರ್ವಹಿಸುವ ಮೂಲಕ ಪರಿಷತ್ತಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಜವಾಬ್ದಾರಿಯನ್ನು ನೀಡಿ ಕಸಾಪ ಜಿಲ್ಲಾ ಅಧ್ಯಕ್ಷ ಕೋಡಿ ರಂಗಪ್ಪ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾಗಿ ಪದಗ್ರಹಣ ಪಡೆದ ಪಟೇಲ್ ನಾರಾಯಣಸ್ವಾಮಿ ಅವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದೇನೆ. ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಜ್ಯಮಟ್ಟದ ವಿಜ್ಞಾನ ಇನ್ಸ್ ಪೇರ್ ಅವಾರ್ಡ್ ಪ್ರಶಸ್ತಿ, ಸ್ಕೌಟ್ಸ್ ಸೀನಿಯರ್ ಅವಾರ್ಡ್ ಪ್ರಶಸ್ತಿ, ಅನುದಾನಿತ ಶಾಲೆಗಳ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ.  ಎರಡು ವರ್ಷದ ಅವಧಿಗೆ ಅನಂತಕೃಷ್ಣ ಅವರಿಗೆ ಅಧ್ಯಕ್ಷರಾಗಿ ಜವಬ್ದಾರಿ ಕೊಟ್ಟಿದ್ದರು. ಪ್ರಸ್ತುತ ಜಿಲ್ಲಾ ಸಂಘ ಹಾಗೂ ಎಲ್ಲರೂ ನನಗೆ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಟ್ಟಿದ್ದು ಮತ್ತಷ್ಟು ಕನ್ನಡದ ಸೇವೆ ಸಲ್ಲಿಸುವ ಉತ್ಸಾಹ ಮೂಡಿದೆ ನನಗೆ ಅವಕಾಶ ಕಲ್ಪಿಸಿದ ಎಲ್ಲರಿಗೂ    ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದರು.
ಕ.ಸಾ.ಪ ಜಿಲ್ಲಾಧ್ಯಕ್ಷ ಪ್ರೊಪೆಸರ್ ಕೋಡಿರಂಗಪ್ಪ ಅವರು ಮಾತನಾಡಿ ಪಟೇಲ್ ನಾರಾಯಣಸ್ವಾಮಿ ಅವರು ಕೆಲಸ ಮಾಡುವುದು, ಪ್ರಾಪರ್ಟಿ ಮಾಡುವುದು ನೋಡಿದರೆ ನಾವು ಚಿಕ್ಕ ಇರುವೆ ಇದ್ದಾಗೆ ಯಾವುದೇ ಕೆಲಸವಾದರೂ  ತುಂಬಾ ಶ್ರದ್ದೆಯಿಂದ ಕೆಲಸ ಮಾಡುತ್ತಾರೆ. ತುಂಬಾ ಗೌರವ ಪ್ರೀತಿಯಿಂದ ಮಾತನಾಡುತ್ತಾರೆ. ನಾವೆಲ್ಲರೂ ಸೇರಿ ಸಮೂಹದ ಕೆಲಸ ಮಾಡಬೇಕು ಕನ್ನಡದ ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ  ರಾಜ್ಯ ಮಾರ್ಗದರ್ಶ  ಸಮಿತಿ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಹನುಮಂತರಾವ್, ಹಿರಿಯ ಸಾಹಿತಿ ಕಲ್ಪಮಂಜಲಿ, ಗೌರವ ಕಾರ್ಯದರ್ಶಿ ಎಸ್ ಎನ್. ಅಮೃತ್ ಕುಮಾರ್, ಕಾರ್ಯದರ್ಶಿ ಸತೀಶ್, ಜಂಟಿ ಕಾರ್ಯದರ್ಶಿ ಛಲಪತಿ, ಜಂಟಿ ಕಾರ್ಯದರ್ಶಿ ಟಿ ವಿ ಚಂದ್ರಶೇಖರ್, ನಿಕಟಪೂರ್ವ ತಾ ಕಸಾಪ ಅಧ್ಯಕ್ಷ ಅನಂತಕೃಷ್ಣ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹರೀಶ್,  ಶಂಕರ್, ಮಳಮಾಚನಹಳ್ಳಿ  ದೇವರಾಜ್, ಎ.ಎಂ. ತ್ಯಾಗರಾಜು, ಜನಾರ್ಧನ್ , ಕೋಟಹಳ್ಳಿ ಶಿಕ್ಷಕರಾದ ಜಗದೀಶ್, ಕೆಂಪಣ್ಣ,  ಸೇರಿದಂತೆ ಇತರರು ಉಪಸ್ಥಿತರಿದ್ದರು
Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!