ಗೌರಿಬಿದನೂರು: ನಗರದ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್ ಎಂ ರವಿನಾರಾಯಣ ರೆಡ್ಡಿ ಸಲಹೆ ನೀಡಿದರು
ನಗರದ ಬಜಾರ್ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಭಾವಿ ಕಟ್ಟೆ ಮಿತ್ರ ಬಳಗ, ಸಮೃದ್ಧಿ ಭಾರತ್ ಸೇವಾ ಟ್ರಸ್ಟ್ ಗೌರಿಬಿದನೂರು ಹಾಗೂ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗರಸಭೆ ಸದಸ್ಯರಾದ ಮಾರ್ಕೆಟ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು ಹುಟ್ಟು ಹಬ್ಬ ಶುಭಾಶಯಗಳನ್ನು ಕೋರಿ ಮಾತನಾಡಿ ಶಿಬಿರದ ನೇತೃತ್ವ ಹಾಗೂ ಆಯೋಜನೆ ಮಾಡಿದ ನಗರಸಭೆ ಸದಸ್ಯರು ಹಾಗೂ ನಗರ ಬಿಜೆಪಿ ಘಟಕದ ಅಧ್ಯಕ್ಷರಾರ ಮಾರ್ಕೆಟ್ ಮೋಹನ್ ವಹಿಸಿಕೊಂಡಿರುವುದು ಸಂತಸದ ವಿಷಯ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು
ನಗರಸಭೆ ಸದಸ್ಯರು ಹಾಗೂ ನಗರ ಬಿಜೆಪಿ ಅಧ್ಯಕ್ಷರು ಮತ್ತು ಆಯೋಜಕರಾದ ಮಾರ್ಕೆಟ್ ಮೋಹನ್ ರವರು ಮಾತನಾಡಿ ಈ ಹಿಂದಿನ ದಿನಗಳಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು,ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ ಜಿ ವೇಣುಗೋಪಾಲ್ ರೆಡ್ದಿ , ಕರವೇ ಸಂಘಟನೆಯ ಅಧ್ಯಕ್ಷ ಜಿ ಎಲ್ ಅಶ್ವತ್ಥನಾರಾಯಣ, ಕಾರ್ಯದರ್ಶಿ ಪ್ರಭು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ನಾಗರಾಜ್, ಪ್ರಶಾಂತ್, ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ವಿನಯ್, ಡಾ.ವಿಶ್ವಾಸ್ , ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪ್ರದೀಪ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು , ನಗರ ಪ್ರಧಾನ ಕಾರ್ಯದರ್ಶಿ ವೇಣು ಮಾದವ್, ಜಯಣ್ಣ, ನಗರ ಘಟಕದ ಉಪಾಧ್ಯಕ್ಷರಾದ ರಾಘು, ವೆಂಕಟಾದ್ರಿ , ನಿವೃತ್ತಿ ಪೊಲೀಸ್ ಅಧಿಕಾರಿ ನರಸಿಂಹಮೂರ್ತಿ, ಶುಗರ್ ಫ್ಯಾಕ್ಟರಿ ರಮೇಶ್, ಯುವ ಮೋರ್ಚಾ ಅಜಯ್ , ಮಣೆಕಂಠ, ಈಶ್ವರ್, ಮಾರುತಿ, ಭಾರತ್, ಚಂದನ್, ನದಿಗಡ್ಡೆ ಪರಮೇಶ್, ಅನೀಲ್ ಕುಮಾರ್, ಮಂಜುನಾಥ್ ರಾವ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಪಾರ್ವತಮ್ಮ, ಅರುಣಮ್ಮ, ಅನೀತ , ರೂಪಾ, ಮುಂತಾದವರು
ಉಪಸ್ಥಿತರಿದ್ದರು,