ಗೌರಿಬಿದನೂರು ನಗರದ ಪ್ರಮುಖ ರಸ್ತೆಗೆ ಕೆಂಪೇಗೌಡರ ಹೆಸರು ನಾಮಕರಣ.
ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳಿಂದ ನಾಮ ಫಲಕ ಉದ್ಘಾಟನೆ.
ಗೌರಿಬಿದನೂರು: ನಾಡಪ್ರಭು ಕೆಂಪೇಗೌಡರ ಆಡಳಿತದಲ್ಲಿ ನಾಡು ಅತ್ಯಂತ ಸುಭೀಕ್ಷವಾಗಿತ್ತು,ಅವರು ಕ್ರಿಯಾಶೀಲ ಪ್ರಭುಗಳಾಗಿದ್ದರು,ಪ್ರಜೆಗಳನ್ನು ತಮ್ಮ ಮಕ್ಕಳಂತೆ ಭಾವಿಸುತ್ತಿದ್ದರು.ರಾಜ್ಯದ ಅಭಿವೃದ್ದಿಗಾಗಿ ಬೆಂಗಳೂರು ನಗರವನ್ನು ನಿರ್ಮಿಸಿದರೆ,ರೈತರಿಗಾಗಿ ನಾಡಿನಲ್ಲಿ ಸಾವಿರಾರು ಕೆರೆಗಳನ್ನು ನಿರ್ಮಿಸಿ ಒಕ್ಕಲುತನಕ್ಕೆ ಅನುಕೂಲಮಾಡಿದರು,ಅವರ ದೂರದೃಷ್ಟಿಯ ಫಲವಾಗಿ ನಮ್ಮ ಎದುರು ಬೆಂಗಳೂರು ಮಹಾನಗರ ನಿಂತಿದೆ,ಇಂತಹ ಮಹಾಪುರುಷರ ಹೆಸರನ್ನು ಗೌರಿಬಿದನೂರು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾ ಸ್ವಾಮೀಜಿಗಳು ತಿಳಿಸಿದರು.
ನಗರದ ಬೈಪಾಸ್ ವೃತದಲ್ಲಿ ನಾಡಪ್ರಭು ಪ್ರಭು ಕೆಂಪೇಗೌಡ ನಾಮ ಫಲಕವನ್ನು ಉದ್ಘಾಟನೆ ನೆರೆವೇರಿಸಿ ನಂತರ ನಡೆದ ಸಾರ್ವಜನಿಕರ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ಮಾತನಾಡುತ್ತಾ, ಸುಮಾರು ಐದುನೂರು ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿ,ಸಮಾಜದ ಎಲ್ಲಾ ಜನಾಂಗದವರಿಗೆ, ವ್ಯಾಪಾರಸ್ಥರಿಗೆ ಹಾಗೂ ಕುಲ ಕಸುಬು ಮಾಡುವವರಿಗೆ ಪ್ರತ್ಯೇಕವಾಗಿ ಪೇಟೆಗಳಾದ ಬಳೇಪೇಟೆ,ಅರಳೆಪೇಟೆ,ಅಕ್ಕಿಪೇಟೆ,ನರ್ಗತ್ ಪೇಟೆ,ರಾಗಿಪೇಟೆ,ಕುಂಬಾರ ಪೇಟೆ ಮುಂತಾದ ಪೇಟೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಬೆಂಗಳೂರು ನಗರವನ್ನು ಅಂದಿನ ಕಾಲದಲ್ಲಿಯೇ ಪ್ರಮುಖ ವ್ಯಾಪಾರ ಕೇಂದ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು.ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಆರ್ಥಿಕ ರಾಜಧಾನಿಯಾಗಿ ಬೆಳೆದು ನಿಂತಿದೆ, ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಬೆಂಗಳೂರಿನ ಪಾಲು ಶೇಕಡಾ ಅರವತ್ತು ಪರ್ಸೆಂಟ್ ಇದೆ,ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ತೆರಿಗೆ ಹಣದಿಂದಲೇ ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ,ರಾಜ್ಯದ ಪ್ರತಿಯೊಂದು ಗ್ರಾಮದಿಂದ ಕನಿಷ್ಠ ಎಂದರೂ ಹತ್ತಿಪ್ಪತ್ತು ಜನರು ಬೆಂಗಳೂರಿನಲ್ಲಿ ನೆಲೆಸಿರುವುದನ್ನು ನಾವು ನೋಡಬಹುದು,ಇಂತಹ ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡುತ್ತಿರುವುದು ಈ ಭಾಗದ ಜನರು ಕೆಂಪೇಗೌಡರಿಗೆ ಸಲ್ಲಿಸುತ್ತಿರುವ ಗೌರವ ಎಂದು ನಾನು ಭಾವಿಸುತ್ತೇನೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿಯಿಂದ ಬೈಪಾಸ್ ವೃತ್ತದವರೆಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಸಿಂಗರಿಸಿ ಟ್ರಾಕ್ಟರ್ ಗಳಲ್ಲಿ ತರಲಾಗಿತ್ತು ಸುಮಂಗಳಿಯರು ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ,ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಜೇಡರಹಳ್ಳಿ ಕೃಷ್ಣಪ್ಪ,ತಹಶಿಲ್ದಾರ್ ಮಹೇಶ್ ಎಸ್ ಪತ್ರಿ,ನಗರಸಭೆ ಆಯುಕ್ತೆ ಗೀತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿಕೆ ಹೊನ್ನಯ್ಯ,ಸರ್ಕಲ್ ಇನ್ಸ್ಪೆಕ್ಟರ್ ಕೆಪಿ.ಸತ್ಯನಾರಾಯಣ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೋನಪ್ಪ ರೆಡ್ಡಿ, ಯುಲುವಳ್ಳಿ ರಮೇಶ್ ರವರ ಸುಪುತ್ರ ಯುಲುವಳ್ಳಿ ಜನಾರ್ದನ್,ಕೆ ಎಚ್ ಪಿ ಫೌಂಡೇಶನ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಗೌಡರು, ತಾಲ್ಲೂಕು ರೆಡ್ಡಿ ಜನಸಂಘದ ಅಧ್ಯಕ್ಷ ಅಶ್ವತ್ಥ ರೆಡ್ಡಿ, ಗುತ್ತಿಗೆದಾರರಾದ ತುಮಕೂರು ಎಂ ಎನ್ ರಮೇಶ್ ,ಭೀಮನಹಳ್ಳಿ ಮಂಜುನಾಥ ರೆಡ್ಡಿ, ಎಂ ಪಿ ಎಂ ಸಿ ಮಾಜಿ ಅಧ್ಯಕ್ಷ ಬೊಮ್ಮಣ್ಣ, ಹಿರಿಯ ಮುಖಂಡ ಆರ್ ಆರ್ ರೆಡ್ಡಿ, ಸಮಾಜ ಸೇವಕ ವೆಂಕಟರೆಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷೆ ಜ್ಞಾನೇಶ್ವರಿ ಅರುಣ್, ಪುರಸಭೆ ಮಾಜಿ ಅಧ್ಯಕ್ಷ ಎಂ ನರಸಿಂಹಮೂರ್ತಿ, ಪ್ರಭಾ ನಾರಾಯಣ ಗೌಡ, ನಾರಾಯಣ ಗೌಡ, ನಾಡಪ್ರಭು ಕೆಂಪೇಗೌಡರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜನಾರ್ದನ ಮೂರ್ತಿ ಪದಾಧಿಕಾರಿಗಳಾದ ಪ್ರಭಾಕರ್ ರೆಡ್ಡಿ, ಮಲ್ಲಿಕಾರ್ಜುನ್ , ವಿಡಾಲ್ ಅಶ್ವತ್ಥರೆಡ್ಡಿ ,ಜಾಲಿ ರಾಮಕೃಷ್ಣ, ರಾಮಚಂದ್ರ ರೆಡ್ಡಿ, ಶ್ರೀನಿವಾಸ ಗೌಡ, ಮುನಿಸ್ವಾಮಿ ಗೌಡ ನಿರ್ಮಿತಿಕೇಂದ್ರ ಇಂಜಿನಿಯರ್, ಕುಡುಮಲಕುಂಟೆ ರವಿಕಿರಣ್, ಅರವಿಂದ್ ಕೆ ಆರ್, ಪ್ರಕಾಶ್, ನಾಗಭೂಷಣ್ ರೆಡ್ಡಿ, ಸೂರ್ಯ ಪ್ರಕಾಶ್, ಲಕ್ಷ್ಮೀ ನರಸಮ್ಮ, ಸುಕನ್ಯ ಟಿ ಎಲ್ , ಮಂಜುನಾಥ ರೆಡ್ಡಿ, ಗಂಗರೆಡ್ಡಿ, ಅನೀಲ್, ಗಿರೀಶ್ ರೆಡ್ಡಿ, ಪರಮೇಶ್ವರ್ ರೆಡ್ಡಿ, ಮನೋಹರ್, ಡಾ.ಮಾರುತಿ ರೆಡ್ಡಿ ಪಶುಸಂಗೋಪನೆ ಇಲಾಖೆ, ಸಿ ಎ ನಾರಾಯಣ ರೆಡ್ಡಿ, ಎಚ್ ಎನ್ ರಾಮಕೃಷ್ಣ, ಲಕ್ಷ್ಮೀ ನಾರಾಯಣ, ನಾಗೇಶ್, ಶಿವಶಂಕರಯ್ಯ, ಮುಖಂಡರಾದ ಜಿ ಟಿ ಶಿವಕುಮಾರ್, ಪ್ರಭು, ಸಿದ್ದರಾಮಯ್ಯ, ಬಾಲಕೃಷ್ಣ, ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು
ಹಾಗೂ ಇನ್ನಿತರರು ಉಪಸ್ಥಿತರಿದ್ದರು.