ಶಿಡ್ಲಘಟ್ಟ: ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ ನಾರಾಯಣಗೌಡರ ಬಣದ ತಾಲ್ಲೂಕು ನೂತನ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಯುವ ಹೋರಾಟಗಾರ ಮುನಿರಾಜು( ಕುಟ್ಟಿ) ಅವರನ್ನ ನೇಮಕ ಮಾಡಿ ಆದೇಶ ಪತ್ರವನ್ನ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಸಂಘದ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಸೂಚನೆಯಂತೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಅವರು ಮುನಿರಾಜು ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಹಲವು ವರ್ಷಗಳಿಂದ ಮುನಿರಾಜು ಅವರು ಸಂಘಟನೆಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಸಂಘಟನೆಯ ಆನೇಕ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ನಾಡು,ನುಡಿ, ಜಲ, ಭಾಷೆ ವಿಚಾರವಾಗಿ ಸಂಘಟನೆಯ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು ಅವರ ಸೇವೆಯನ್ನು ಗುರ್ತಿಸಿ ಸಂಘಟನೆಯ ತತ್ವ ಸಿದ್ಧಾಂತ ಹಾಗೂ ನೀತಿ-ನಿಯಮಗಳನ್ನು ಪಾಲಿಸಿಕೊಂಡು “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ” ಎಂಬ ವೇದಿಕೆಯ ಘೋಷ ವಾಕ್ಯವನ್ನು ಸಕಾರಗೊಳಿಸುವುದರ ಜೊತೆಗೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯಬೇಕು ಜೊತೆಗೆ ಪ್ರಾಮಾಣಿಕ ಸೇವೆ ಸಲ್ಲಿಸುವ ಉದ್ದೇಶದಿಂದ ನೂತನ ಅದ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಾಡು-ನುಡಿ ನೆಲ ಜಲ, ಭಾಷೆ ಸೇರಿದಂತೆ ಕರ್ನಾಟಕದ ಉನ್ನತೀಕರಣದ ಹೋರಾಟದ ಮನೋ ಭೋಮಿಕೆಯನ್ನು ಹೊಂದಿರುವ ಮುನಿರಾಜು (ಕುಟ್ಟಿ) ನಮ್ಮ ವೇದಿಕೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕಳೆದ 15 ವರ್ಷಗಳಿಂದ ಪ್ರಮಾಣಿಕವಾಗಿ ದುಡಿಯುತ್ತಾ ಬಂದಿದ್ದು, ಇದೀಗ ತಾಲ್ಲೂಕಿನಾದ್ಯಂತ ಸಂಘಟನೆಯನ್ನು ಬಲಪಡಿಸಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಮುನಿರಾಜು ಅವರಿಗೆ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಅವರು ನೇಮಕ ಪತ್ರವನ್ನು ನೀಡಿ ಜವಬ್ದಾರಿಯನ್ನ ವಹಿಸಿದ್ದಾರೆ.