ಬಿಜಿಎಸ್ ಶಾಲೆಯಲ್ಲಿ ‘ ಮಗುವಿನ ಉತ್ತಮ ಬೆಳವಣಿಗೆಯಲ್ಲಿ ಪೋಷಕರ ಜವಬ್ದಾರಿ’ ವಿಶೇಷ ಕಾರ್ಯಕ್ರಮ.
‘ಸಂವಿಧಾನ ಶಕ್ತಿ ನ್ಯೂಸ್’ ಶಿಡ್ಲಘಟ್ಟ : ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು ಕಲಿಸಬೇಕು. ಜೀವನ ಪರ್ಯಂತ ಖುಷಿಯಾಗಿ ಬದುಕುವ ವಾತಾವರಣ ಕಟ್ಟಿಕೊಡುವ ಜವಬ್ದಾರಿ ಪೋಷಕರ ಮೇಲಿದೆ. ಮಕ್ಕಳೊಂದಿಗೆ ಹೆಚ್ಚು ಸಮಯಕೊಡಿ ಮೃದುವಾಗಿ ಮಾತನಾಡಿ ಮಕ್ಕಳ ಭಾವನೆಗಳಿಗೆ ಸ್ಪಂಧಿಸಬೇಕು ಎಂದು ಆದಿಚುಂಚನಗಿರಿ ಮಠದ ಅಂಗ ಸಂಸ್ಥೆಯ ಚಿಕ್ಕಬಳ್ಳಾಪುರದ ಸಂಯುಕ್ತ ಶಾಲೆಯ ಸಲಹೆಗಾರರಾದ ಶ್ರೀಮತಿ. ಕಲಾವತಿ ಅವರು ಹೇಳಿದರು.
ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ” ಮಗುವಿನ ಉತ್ತಮ ಬರಳವಣಿಗೆಯಲ್ಲಿ ಪೋಷಕರ ಜವಬ್ದಾರಿ” ಎಂಬ ವಿಶೇಷ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪೋಷಕರಿಗೆ ಉಪನ್ಯಾಸ ನೀಡಿದರು.
ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಮೊಬೈಲ್ ವಿಷವಿದ್ದಂತೆ ಅದರಿಂದ ಮಕ್ಕಳ ಅಲೋಚನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕುಟುಂಬದ ಜೊತೆಗೆ ಸಮಯ ಕಳೆಯಿರಿ, ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ, ಈ ಭೂಮಿಗೆ ಬಂದಿರುವ ಪ್ರತಿಯೊಬ್ಬ ಮಗುವಿನಲ್ಲೂ ವಿಭಿನ್ನವಾದ ಗುಣಗಳುವಿರುತ್ತದೆ. ಉತ್ತಮ ಕೆಲಸಗಳಿಗೆ ಪ್ರೋತ್ಸಾಹಿಸಿ ಮಕ್ಕಳು ಪೋಷಕರನ್ನ ಅನುಕರಣೆ ಮಾಡುತ್ತಾರೆ. ಮಕ್ಕಳ ಜೊತೆ ನೀವು ಮಕ್ಕಳಾದಾಗ ಮಕ್ಕಳ ಭಾವನೆಗಳು ಅರ್ಥವಾಗುತ್ತವೆ. ಮಕ್ಕಳ ಮೇಲೆ ಪ್ರೀತಿ ಇರಲಿ, ಆದರೆ ವ್ಯಾಮೋಹ ಬೇಡ. ಮಗುವಿನ ಉತ್ತಮ ಬೆಳೆಸುವ ಜವಬ್ದಾರಿ ಪೋಷಕರ ಜವಬ್ದಾರಿ ಮೇಲಿದೆ ಎಂದರು.
ಬಿಜಿಸ್ ಶಾಲೆಯ ಪ್ರಾಂಶುಪಾಲರಾದ ಮಹದೇವ್ ಮಾತನಾಡಿ ಮಕ್ಕಳ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ಪೋಷಕರಿಗೆ ಆಸೆ ಆಕಾಂಕ್ಷೆಗಳು ಇರುತ್ತವೆ. ಆದರೆ ಮಕ್ಕಳ ಮೇಲಿರುವ ದೃಷ್ಟಿ ಪರಿವರ್ತನೆ ಮಾಡಿಕೊಂಡಾಗ ದೇಶದ ಆಸ್ತಿಯನ್ನಾಗಿ ಮಕ್ಕಳನ್ನು ಮಾಡಬಹುದು. ಮಕ್ಕಳು ದೇವ ಲೋಕದ ಸುಂದರ ಪುಷ್ಪಗಳು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಪೋಷಕರಾಗಿ ತಮ್ಮ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಅಲೋಚನೆಯಿಂದ ಸಂಸ್ಕಾರದಿಂದ ಬೆಳೆಸುವ ಜವಬ್ದಾರಿ ಪೋಷಕರ ಮೇಲಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಜೆ.ಎಸ್ ವೆಂಕಟಸ್ವಾಮಿ, ಶಾಲೆಯ ಶಿಕ್ಷಕರಾದ ಅಂಬಿಕ ಸಿ.ಎನ್ , ಶಿಲ್ಪ ಟಿ, ಲಕ್ಷ್ಮೀ, ನಾಗರತ್ನ, ಶಬಾನಾ, ಗೌತಮಿ, ಸೇರಿದಂತೆ ಪೋಷಕರು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ