ಎ. ಆರ್. ಎಂ. ಪಿಯು ಕಾಲೇಜಿನ ಶ್ರೇಯೋಸ್ತು ಕಾರ್ಯಕ್ರಮ. ಸಮಾಜಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಅಹಿಂಸಾ ನಟ ಚೇತನ್ ಕರೆ.
ಶಿಡ್ಲಘಟ್ಟ :- ಪ್ರತಿಯೊಬ್ಬ ವಿದ್ಯಾರ್ಥಿ ಮುಂದಿನ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಜೀವನದಲ್ಲಿ ಆಯ್ಕೆಗಳು ನಮ್ಮದೇ ಆಗಿರುತ್ತದೆ. ಆದರೆ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ ವಿದ್ಯಾರ್ಥಿ ಜೀವನವೂ ನಿಮ್ಮ ಜೀವನದ ಅತ್ಯಮೂಲ್ಯ ಭಾಗವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಹಂಡಿಗನಾಳ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಎ.ಆರ್.ಎಂ.ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ 2024ನೇ ಸಾಲಿನ ಶ್ರೇಯೊಸ್ತು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಸಹ ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು. ನಿಮ್ಮ ಭವಿಷ್ಯವನ್ನು ನೀವು ಉತ್ತಮವಾಗಿ ರೂಪಿಸಿಕೊಳ್ಳುವುದರ ಜೊತೆಗೆ ಸ್ವರ್ಧಾತ್ಮಕ ಯುಗದಲ್ಲಿ ತಾವು ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ನಟ ಹಾಗೂ ಹೋರಾಟಗಾರ ಅಹಿಂಸಾ ಚೇತನ್ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಹೋರಾಟದ ಸಂಘಟನಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಸಮಾಜಕ್ಕೆ ಪ್ರತಿಯೊಬ್ಬರು ನಮ್ಮದೇ ಆದ ಕೊಡುಗೆ ಕೊಡಬೇಕು. ಎಲ್ಲರೂ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವಂತವವರು ಆಗಬೇಕು ಎಂದರು. ಆಳುವ ವರ್ಗವೇ ಆಳುತ್ತಿರುವುದು ಅನ್ಯಾಯ ಇತಿಹಾಸ ಹಾಗೂ ಸಂವಿಧಾನವನ್ನು ಎಲ್ಲರೂ ಓದಬೇಕು ವಿದ್ಯಾರ್ಥಿಗಳು ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಸಮಾಜದ ಆಗು – ಹೋಗುಗಳ ಬಗ್ಗೆ ಅರಿವು ಇರಬೇಕು ಸಮಾಜದ ಸಮಸ್ಯೆಗಳ ಕುರಿತು ಜಾಗೃತರಾಗಬೇಕು ಸಮ – ಸಮಾಜವನ್ನು ಪ್ರತಿಯೊಬ್ಬರು ನಿರ್ಮಿಸಬೇಕು. ಉತ್ತಮ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಅಸಮಾನತೆಯನ್ನು ಹೋಗಲಾಡಿಸಬೇಕು ವಿಷಕಾರಿ ಪುರುಷತ್ವದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೇವರ ಮಳ್ಳೂರು ಮಹೇಶ್ ತಂಡ ಜಾನಪದ ಹಾಡುಗಳ ಗಾಯನ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿ ಗುರಪ್ಪ, ಶಾರದಾ ಶಾಲಾ ವಿದ್ಯಾ ಸಂಸ್ಥೆ ಅಧ್ಯಕ್ಷರು ಮುನಿರತ್ನಂ, ಪ್ರಾಂಶುಪಾಲರಾದ ಕೆ. ಮೂರ್ತಿ ಸಾಮ್ರಾಟ್, ಕಾರ್ಯದರ್ಶಿ ಶ್ರೀಕಾಂತ್ ಎ.ಎಂ, ಉಚ್ಚ ನ್ಯಾಯಲಯದ ವಕೀಲರಾದ ಹರಿರಾಮ್, ಡಾಲ್ಪಿನ್ಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ನಾಗರಾಜ್, ಗುತ್ತಿಗೆದಾರರು ಟಿ.ಕೆ.ನಟರಾಜ್,ಸೇರಿದಂತೆ ಇತರರು ಹಾಜರಿದ್ದರು.