ಗೌರಿಬಿದನೂರು: ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ .ಗೌರಿಬಿದನೂರು ಸಾರಿಗೆ ಬಸ್ ಡಿಪೋಗಾಗಿ ಹೊಸ ಬಸ್ ಗಳನ್ನು ಮಂಜೂರು ಮಾಡಿಸಿರುವುದಾಗಿ ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರು ತಿಳಿಸಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಗೌರಿಬಿದನೂರು ತಿರುಪತಿ ಮಾರ್ಗಕ್ಕಾಗಿ ಮಂಜೂರಾಗಿರುವ ಹೊಸ ಬಸ್ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನ ಸಾರಿಗೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ನಾನು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ತಾಲೂಕಿನ ಸಾರಿಗೆ ಸಮಸ್ಯೆಗಳ ಕುರಿತು ಚರ್ಚಿಸಿದ ಪರಿಣಾಮ ಸಾರಿಗೆ ಸಚಿವರು ನಮ್ಮ ತಾಲೂಕಿಗೆ ಅಗತ್ಯವಿರುವ ಹೊಸ ಬಸ್ಸುಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗಿಯ ನಿಯಂತ್ರಣಾಧಿಕಾರಿ ವರ್ಗಾವಣೆಯಾಗಿ ಬಂದಿರುವ ಬಸವರಾಜು ಅವರು ಪ್ರಯಾಣಿಕರ ಸ್ನೇಹಮಯಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದ ಅವರು ಸಾರಿಗೆ ವ್ಯವಸ್ಥೆಯ ಕುರಿತು ದೂರುಗಳು ಇದ್ದರೆ ನೇರವಾಗಿ ತಿಳಿಸಿದರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಭಾಗದ ನಿಯಂತ್ರಣ ಅಧಿಕಾರಿ ಬಸವರಾಜು, ಡಿಪೋ ವ್ಯವಸ್ಥಾಪಕರಾದ ರವಿ ಶಂಕರ್,ಪುರಸಭೆ ಮಾಜಿ ಅಧ್ಯಕ್ಷ ಎಂ ನರಸಿಂಹಮೂರ್ತಿ, ಅಬ್ಬು ಬೇಕರ್, ನಗರಸಭೆ ಸದಸ್ಯರಾದ ರಾಜ್ ಕುಮಾರ್ , ಲಕ್ಷ್ಮೀ ನಾರಾಯಣಪ್ಪ, ಸುಬ್ರಹ್ಮಣ್ಯ, ಜಯರಾಂ , ಅಬ್ದುಲ್ಲಾ , ಕಲೀಲ್, ಲಕ್ಷ್ಮಿ ಮಂಜುಳಾ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.