78ನೇ ಸ್ವಾತಂತ್ರ್ಯ ದಿನಚರಣೆ ಅದ್ದೂರಿಯಾಗಿ ಅಚರಣೆ.
ಗೌರಿಬಿದನೂರು; ಈ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಅನೇಕ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ,ಅವರು ಎಂದೆಂದಿಗೂ ಅಮರರು ಅವರ ಸ್ಮರಣೆ ನಮ್ಮಲ್ಲರ ಅಧ್ಯ ಕರ್ತವ್ಯವಾಗಿದೆ ಎಂದು ಶಾಸಕ ಕೆ,ಎಚ್,ಪುಟ್ಟಸ್ವಾಮಿಗೌಡ ತಿಳಿಸಿದರು.
ನಗರದ ಹೊರವಲಯದಲ್ಲಿರುವ ನೇತಾಜೀ ಕ್ರೀಡಾಂಗಣದಲ್ಲಿ ತಾಲ್ಲೂಕು ಅಡಳಿತವತಿಯಿಂದ ಅಯೋಜನೆ ಮಾಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜರೋಹಣೆ ಮಾಡಿ ಮಾತನಾಡಿದ ಅವರು ಈ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ ಅನೇಕ ವೀರ ಯೋಧರ ಪ್ರಾಣ ತ್ಯಾಗದಿಂದ ಬಂದಿದ್ದು ಸುಭಾಷ್ ಚಂದ್ರ ಭೋಸ್,ಚಂದ್ರಶೇಖರ್ ಅಜಾದ್, ಹೀಗೆ ಅನೇಕ ಹೋರಾಟಗಾರರು ತಮ್ಮ ಪ್ರಾಣ ತೆತ್ತು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ,ಈ ನಿಟ್ಟಿನಲ್ಲಿ ನಾವು ನಮ್ಮ ದೇಶದ ಅಭಿವೃದ್ದಿಗೆ ಕೈಜೋಡಿಸಬೇಕು, ಪ್ರತಿಯೊಬ್ಬರು ಒಗ್ಗಟ್ಟು ಪ್ರದರ್ಶನ ಮಾಡಬೇಕು,
ಕೇವಲ 78 ವರ್ಷಗಳಲ್ಲಿ ಈ ದೇಶ ಸಾಕಷ್ಟು ಅಭಿವೃದ್ದಿ ಯಾಗಿದೆ ಶೈಕ್ಷಣಿಕ ಕೈಗಾರಿಕೆ,ಐಟಿ ಬಿಟಿ, ಕೃಷಿ,ಭದ್ರತೆಯಲ್ಲಿ ಮೂಂಚಿಣಿಯಲ್ಲಿದೆ, ಚಂದ್ರಯಾನ ಮಾಡಿದ ನಾಲ್ಕನೇ ದೇಶ ನಮ್ಮದಾಗಿದೆ, ಎಂದರು.
ಪೋಷಕರಿಗೆ ಕಿವಿ ಮಾತು; ಮಕ್ಕಳು ಈ ದೇಶದ ಅಸ್ತಿ ಅಗಿದ್ದಾರೆ,ಅವರ ಪೋಷಣೆ ಪ್ರತಿಯೊಬ್ಬರ ಪೋಷಕರ ಕರ್ತವ್ಯವಾಗಿದೆ,ಅವರನ್ನು ದುಃಚಟಗಳಿಂದ ದೂರವಿಡಿ,ಮೋಬೈಲ್ ಗೀಳು,ಮಾದಕ ವಸ್ತುಗಳ ಸೇವನೆ,ಇನ್ನೀತರೆ ಕೆಟ್ಟ ಚಟಗಳಿಗೆ ಮೊರೆ ಹೋಗದಂತೆ ಜಾಗೃತಿ ವಹಿಸಿ ಸದಾ ಅವರ ಶೈಕ್ಷಣಿಕವಾಗಿ ಮುಂದುವರಿಯಲು ಸಹಕಾರ ನೀಡಿ ಶಿಕ್ಷಣದಿಂದ ಮಾತ್ರ ನಿಮ್ಮ ಮಕ್ಕಳು ಏಳಿಗೆ ಅಗಲು ಸಾಧ್ಯ ಎಂದರು.
ತಾಲ್ಲೂಕು ಅಭಿವೃದ್ದಿ ಹೆಚ್ಚು ಒತ್ತು;-ನನ್ನ ಅವಧಿಯಲ್ಲಿ ತಾಲ್ಲೂಕು ಅಭಿವೃದ್ದಿ ಹೆಚ್ಚು ಒತ್ತು ನೀಡಿಲಿದ್ದನೇ,ಶೈಕ್ಷಣಿಕ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಮಹಿಳೆಯರ ಸಬಲೀಕರಣ,ರಸ್ತೆ ಅಭಿವೃದ್ದಿ ಕುಡಿಯುವ ನೀರಿಗೆ ಅಧ್ಯತೆ,ವಸತಿ ಹೀನರಿಗೆ ನಿವೇಶನ ನೀಡುವುದು ನನ್ನ ಪ್ರಮುಖ ಕರ್ತವ್ಯ ಎಂದರು.
ತಹಸೀಲ್ದಾರ್ ಮಹೇಶ ಪತ್ರಿ ಮಾತನಾಡಿ ನಮ್ಮ ದೇಶಕ್ಕೆ ವ್ಯಾಪಾರಕ್ಕೆ ಬಂದ ಅಂಗ್ಲರು ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಅರಿತು ನಮ್ಮಲ್ಲಿ ಒಳ ಜಗಳವಿಟ್ಟು ನಮ್ಮ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಅಂದಿನಿಂದ ಸುಮಾರು ಇನ್ನೂರು ವರ್ಷಗಳು ನಮ್ಮನ್ನ ಗುಲಾಮರನ್ನಾಗಿ ನೋಡಿದರು,ಅಗ ನಮ್ಮಲ್ಲಿನ ದೇಶಭಕ್ತರು ಅವರನ್ನು ಹಿಮ್ಮಟ್ಟಿಸುವುದು ಮನಗಂಡರು ಕಿತ್ತರೂ ರಾಣಿ ಚೆನ್ನಮ್ಮ , ತಾತ್ಯಾಟೋಪಿ ಇನ್ನು ಅನೇಕ ಹೋರಾಟಗಾರರು ಅಂದಿನ ಕಾಲದಲ್ಲಿ ಅಂಗ್ಲರನ್ನು ವಿರೋಧ ಮಾಡಿದರು,ನಂತರ ಅನೇಕ ಹೋರಾಟಗಾರರು ಮೂಂಚೂಣಿಯಲ್ಲಿ ಬಂದರು ಪ್ಲಾಸಿ ಕದನ ಬಕ್ಸಾರ್ ಕದನದಲ್ಲಿ ಸ್ವಲ್ಪ ಹಿನ್ನಡೆ ಕಂಡು ಹೋರಾಟ ಮುಂದುವರಿಸಿ ಅಂಗ್ಲರನ್ನು ೧೯೪೭ರಲ್ಲಿ ಈ ದೇಶದಿಂದ ಹೊರಹಾಕಿದರು. ಎಂದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ, ಪೋಲಿಸರಿಂದ ಕವಾಯಿತು,ಪ್ರೇಕ್ಷಕರ ಗಮನ ಸೆಳೆಯಿತ್ತು,ಗಣ್ಯರಿಗೆ ಸನ್ಮಾನ ಅಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಡಿ,ಎಂ.ಗೀತಾ, ಇಓ ಹೊನ್ನಯ್ಯ,ಬಿಇಓ ಶ್ರೀನಿವಾಸಮೂರ್ತಿ,ವೃತ್ತ ನೀರಿಕ್ಷಕ ಕೆಪಿ,ಸತ್ಯನಾರಾಯಣ್,ಸಮಾಜಕಲ್ಯಾಣ ಅಧಿಕಾರಿ ಚೆನ್ನಪ್ಪ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ, ಆರೋಗ್ಯ ಇಲಾಖೆ ಅಧಿಕಾರಿ ಚಂದ್ರ ಮೋಹನ್ ರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿಮಹೇಂದ್ರ, ಕಸಾಪ ಅಧ್ಯಕ್ಷ ನಂಜುಂಡಪ್ಪ, ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್,ಪರೀದ್,ಶಭಾನ ಅಸ್ಲಂ,ಶಿಕ್ಷಕ ಬಾಲಪ್ಪ,ಕನ್ನಡ ಪರಹೋರಾಟಗಾರ ಜಿಎಲ್,ಆಶ್ವಥ್ತನಾರಾಯಣ್, ಮರಳೂರು ಗೋಪಾಲ್ , ಬಾಲಕೃಷ್ಣ , ಮುಂತಾದವರು ಹಾಜರಿದ್ದರು.