ಶಿಡ್ಲಘಟ್ಟ : ಸರ್ಕಾರದ ಯೋಜನೆಗಳ ಕುರಿತು ಜನರಿಗೆ ವಾಟ್ಸಾಪ್, ಪೇಸ್ ಬುಕ್, ಸಾಮಾಜಿಕ ಜಾಲತಾಣಗಳ ಮುಖಾಂತರ ಹಾಗೂ ಜಾಹಿರಾತು ಮೂಲಕ ಮಾಹಿತಿ ತಿಳಿಸಬೇಕು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ಸೂಚನೆ ನೀಡಿದರು.
ಸೋಮವಾರದಂದು ನಗರದ ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 36 ಹೊಲಿಗೆಯಂತ್ರಗಳನ್ನು ಹಾಗೂ 2023-24ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ದ್ವಿಚಕ್ರ ವಾಹನಗಳನ್ನು ವಿಕಲ ಚೇತನರಿಗೆ ಅರ್ಹ ಫಲಾನುಭವಿಗಳಾದ 20 ಮಂದಿ ಅಂಗವಿಕಲರಿಗೆ ವಿಶೇಷ ದ್ವಿಚಕ್ರ ವಾಹನವನ್ನ ವಿತರಿಸುವ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು. ಸರ್ಕಾರ ಆಯಾ ನಿಗಮಗಳ ಮೂಲಕ ಯೋಜನೆಗಳು ನೀಡುತ್ತಿದ್ದು, ವಿಶೇಷ ಚೇತನರಿಗೆ ನೀಡಿರುವ ವಿಶೇಷ ವಾಹನಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇ.ಓ ಹೇಮಾವತಿ ಅವರು ಮಾತನಾಡಿ ಸರ್ಕಾರದಿಂದ ಹೊಲಿಗೆ ಯಂತ್ರ, ಹಾಗೂ ಅಂಗವಿಕಲರಿಗೆ ವಿಶೇಷ ವಾಹನಗಳನ್ನು ನೀಡುತ್ತಿರುವುದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನೀಡಿದೆ. ಉಚಿತವಾಗಿ ಬಂದಿಯೆಂದು ದುರುಪಯೋಗವಾಗಬಾರದು ಯೋಜನೆಗಳ ಫಲಾನುಭವಿಗಳಾಗಿ ಸೌಲತ್ತು ಪಡೆದುಕೊಂಡಿರುವುದು ಖುಷಿಯ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಎನ್ ಎಂ, ಸಿಡಿಪಿಓ ವಿದ್ಯಾ ವಸ್ತ್ರದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಂಕ್ ಮುನಿಯಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಶಾಸಕರ ಆಪ್ತರಾದ ತಾದೂರು ರಘು, ಮುಖಂಡರಾದ ಸುರೇಶ್, ಎಸ್ ಎಂ ರಮೇಶ್,ಪ್ರಭಾಕರ್, ನಿಜಾಮುದ್ದೀನ್, ಗಜೇಂದ್ರ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.