Tuesday, December 24, 2024
Homeರಾಜಕೀಯಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜನ ಪರ ಯೋಜನೆಗಳು ಮನೆ ಮನೆಗೆ ತಿಳಿಸಬೇಕು: ಶಾಸಕ ಬಿ.ಎನ್...

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜನ ಪರ ಯೋಜನೆಗಳು ಮನೆ ಮನೆಗೆ ತಿಳಿಸಬೇಕು: ಶಾಸಕ ಬಿ.ಎನ್ ರವಿಕುಮಾರ್ 

ಜೆಡಿಎಸ್ ಮತ್ತು ಬಿಜೆಪಿ ಸಹಭಾಗಿತ್ವದಲ್ಲಿ ಜಂಟಿ ಸುದ್ದಿಗೋಷ್ಟಿ, ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವಿಗೆ ಒಗ್ಗಟಿನ ಮಂತ್ರ.     

ಶಿಡ್ಲಘಟ್ಟ: ದೇಶದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಸೇವೆ ಕೆಲಸ ಪ್ರತಿಯೊಬ್ಬರು‌ ಮೆಚ್ಚುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ  ಅವರ ಸೇವೆಯನ್ನು ಕೊಂಡಾಡುತ್ತಿದ್ದಾರೆ ಮನೆಮನೆ ಹೋಗಿ ಮೋದಿಯವರ ಯೋಜನೆಗಳು ಆಡಳಿತದ ಬಗ್ಗೆ ಜನರಿಗೆ ತಿಳಿಸುವ ಮೂಲಕ  ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್  – ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು ಜೊತೆಗೆ ಲೋಕಸಭೆ ಚುನಾವಣೆಯ ನಂತರವೂ ಎನ್.ಡಿ.ಎ ಮೈತ್ರಿ ಕೂಡ ಮುಂದುವರೆಯಲಿದೆ ಎಂದು ಶಿಡ್ಲಘಟ್ಟ ವಿಧಾನ ಸಬಾ ಕ್ಷೇತ್ರದ ಜೆಡಿಎಸ್  ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.

ನಗರದ ಮಯೂರ ವೃತ್ತದ ಬಳಿಯಿರುವ ಸೀಕಲ್ ರಾಮಚಂದ್ರಗೌಡರ ಬಿಜೆಪಿಯ ಸೇವಾ ಸೌಧ ಕಛೇರಿಯ ಆವರಣದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ – ಬಿಜೆಪಿಯ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು  ರವರ ಪ್ರಚಾರ ಕಾರ್ಯಕ್ರಮಗಳ ಕುರಿತು  ಎರಡೂ ಪಕ್ಷಗಳ ಮುಖಂಡರ ಸಹಬಾಗಿತ್ವದಲ್ಲಿ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಎನ್ ರವಿಕುಮಾರ್ ಮತ್ತು ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡ ಅವರ ನೇತೃತ್ವದಲ್ಲಿ ಇಂದು ಜಂಟಿ ಸುದ್ದಿಗೋಷ್ಟಿ ನಡೆಯಿತು.

 ಈ ವೇಳೆಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರಿ ಮೋದಿಯವರ ಕೊಡೆಗೆ ಅಪಾರವಾದದ್ದು, ಮಾಜಿ ಪ್ರಧಾನಿ ದೇವೇಗೌಡರು‌ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ‌ನೇತೃತ್ವದಲ್ಲಿ 2024 ರ ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಕೋಲಾರ, ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ದೇವೇಗೌಡರು ಜೆಡಿಎಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿ ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿಕೊಂಡ ಬರಲು ಶ್ರಮಿಸುತ್ತಿದ್ದೇವೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಗ್ಗಟ್ಟಿನಿಂದ ಇದೇ ಏಪ್ರಿಲ್ 14 ರಂದು ಚಿಲಕಲನೇರ್ಪು, ದಿಬ್ಬೂರಹಳ್ಳಿ 15 ರಂದು,  ಶಿಡ್ಲಘಟ್ಟ ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಭೆಯನ್ನು ನಡೆಸಲಾಗುತ್ತಿದೆ ಅಭ್ಯರ್ಥಿ ಮಲ್ಲೇಶ್ ಬಾಬು ಭಾಗಿಯಾಗಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಪ್ರಬಲ ಮುಖಂಡರಾದ ಸೀಕಲ್ ರಾಮಚಂದ್ರಗೌಡ 2024 ರಲ್ಲಿ ‌ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಬೇಕು.  ಜನ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಮೋದಿ ಅವರು ಆಡಳಿತ ಜನ ಪರ ಯೋಜನೆಗಳು ಜಾರಿಗೆ ತಂದಿದ್ದಾರೆ ಹೊರೆತು  ಯಾವುದೇ  ಗ್ಯಾರಂಟಿಗಳು ಕೊಟ್ಟಿಲ್ಲ.  ಪ್ರಣಾಳಿಕೆ ಕೊಟ್ಟು ಹಗಲಿರುಳು ದೇಶದ ಅಭಿವೃದ್ದಿಗಾಗಿ ಸೇವೆ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿಚಕುಮಾರ್ ಕಾಂಗ್ರೆಸ್ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳು ಕೊಟ್ಟು ಎಲ್ಲಾ ವರ್ಗದ ಜನರನ್ನ ಬೇರೆ ಮಾಡಿರುವುದಲ್ಲದೆ  ಈಗ ಭಾರತವನ್ನು ಬೇರೆ ಮಾಡಲು ಮುಂದಾಗಿದ್ದಾರೆ. ದೇಶವನ್ನು ಹೊಡೆಯಲು ಸಹಾ ಡಿಕೆ ಶಿವಕುಮಾರ್ ಹಿಂದೆ ಹೋಗುವುದಿಲ್ಲ. ಕಾಂಗ್ರೆಸ್ ಸರ್ಕಾರ ನಂಬಿಕೆ ದ್ರೋಹ ಮಾಡಿದೆ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಹೇಳುವುದು ಒಂದು ಮಾಡಿರೋದು ಮತ್ತೊಂದು. ಕೋವೀಡ್ ಸಮಯದಲ್ಲಿ ಮೋದಿ ಅಕ್ಕಿ ಕೊಟ್ಟರು ಆದರೆ ಮೋದಿ ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲಾ ಆದರೆ ಕಾಂಗ್ರೆಸ್ ಮಕ್ಮಲ್ ಟೋಪಿ ಹಾಕಿ ಕೇಂದ್ರ ಕೊಡುತ್ತಿರುವ ಐದು ಕೆಜಿ ಅಕ್ಕಿ ಕೊಟ್ಟು ರಾಜ್ಯ ಸರ್ಕಾರದ ಖಾತೆಗೆ ಹಾಕಿಕೊಳ್ಳುತ್ತಿದೆ. ಅವರು ಒಂದು ಕೆಜಿ ಅಕ್ಕಿಯೂ ಸಹಾ ಕೊಟ್ಟಿಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.

ಈ ಸಂದರ್ಭದಲ್ಲಿ  ಮಾಜಿ ಶಾಸಕ ಎಂ. ರಾಜಣ್ಣ,  ಬಂಕ್ ಮುನಿಯಪ್ಪ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ  ಸೀಕಲ್ ಆನಂದ್ ಗೌಡ, ತಾದೂರು ರಘು,  ರಾಘವೇಂದ್ರ, ಹಿರಿಯ ವಕೀಲರಾದ ಪಾಪಿರೆಡ್ಡಿ, ಹುಜಗೂರು ರಾಮಣ್ಣ, ಕಂಬದಹಳ್ಳಿ ಸುರೇಂದ್ರಗೌಡ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

“ ದೇಶ ಉಳಿಯಬೇಕೆಂದರೆ ನರೇಂದ್ರಮೋದಿ ಇರಬೇಕು. ದೇಶ ಉಳಿದರೆ ನಮಗೆ ಮತ್ತು ನಮ್ಮ‌ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗಲಿದೆ. ಮೋದಿ ಅವರಿಗೆ ಕಟುಂಬವಿಲ್ಲ. ದೇಶಕ್ಕಾಗಿ ದುಡಿಯುತ್ತಿದ್ದಾರೆ.  ಅವರ ಮೆಚ್ಚಿ ಸಾಕಷ್ಟು ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ.   ಕುಮಾರಸ್ವಾಮಿ ಅವರು ಸಿಎಂ‌ ಆಗಿದ್ದಾಗ ಸಾಲ ಮನ್ನಾ ಘೋಷಣೆ ಮಾಡಿದ್ದರು.  ಆದರೆ ಜನ ಬೆಂಬಲ‌ ಕೊಡಲಿಲ್ಲ. ಆದರೆ ಮೈತ್ರಿ ಸರ್ಕಾರ ಮಾಡಿಕೊಂಡು ರೈತರ ಸಾಲ ಮನ್ನಾ ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿಯವರ ಆಡಳಿತ,  ಸೇವೆಗೆ ದೇವೇಗೌಡರು ಸಹಾ ಎನ್.ಡಿ.ಎ ಮೈತ್ರಿಗೆ ಒಪ್ಪಿಕೊಂಡು ದೇಶ ಉಳಿವಿಗಾಗಿ ಬಿಜೆಪಿ ಗೆ ಬೆಂಬಲ‌ ಕೊಟ್ಟಿದ್ದಾರೆ. ಸ್ಥಳೀಯವಾಗಿ ಬಿಜೆಪಿ ಜೆಡಿಎಸ್ ಮುಖಂಡರು ಕಾರ್ಯಕರ್ತರು ಎಲ್ಲರೂ ಸೇರಿ‌ ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿಕೊಂಡು ಬರಬೇಕಿದೆ ದೇಶದ ಜನತೆ ಕಾಂಗ್ರೆಸ್‌ಗೆ ತಕ್ಕ ಬುದ್ದಿ ಪಾಠ ಕಲಿಸಲಿದ್ದಾರೆ. –  ಸೀಕಲ್ ರಾಮಚಂದ್ರ ಗೌಡ, ಬಿಜೆಪಿ ಮುಖಂಡರು, ಶಿಡ್ಲಘಟ್ಟ 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!