Monday, December 23, 2024
Homeರಾಜಕೀಯನರೇಂದ್ರ ಮೋದಿ ಭಯದಿಂದ ಕಾಂಗ್ರೇಸ್ ಗ್ಯಾರಂಟಿಗಳು ಘೋಷಣೆ ಮಾಡುತ್ತಿದೆ: ಶಾಸಕ‌ ಬಿ.ಎನ್ ರವಿಕುಮಾರ್

ನರೇಂದ್ರ ಮೋದಿ ಭಯದಿಂದ ಕಾಂಗ್ರೇಸ್ ಗ್ಯಾರಂಟಿಗಳು ಘೋಷಣೆ ಮಾಡುತ್ತಿದೆ: ಶಾಸಕ‌ ಬಿ.ಎನ್ ರವಿಕುಮಾರ್

ಜೆಡಿಎಸ್ ಎಲ್ಲಿದೆ ಎನ್ನುವ ಸಿದ್ದರಾಮಯ್ಯಗೆ ಜೂನ್ 4 ಕ್ಕೆ ಉತ್ತರ ಸಿಗಲಿದೆ ಎಂದ ಶಾಸಕ.

ಶಿಡ್ಲಘಟ್ಟ : ದೇಶದ 98 ಕೋಟಿ ಜನ ಚುನಾವಣೆಯಲ್ಲಿ ಮತದಾನದ ಮಾಡುವುದಕ್ಕೆ ಡಾ ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಮತದಾನದ ಹಕ್ಕು‌‌ ಕಲ್ಪಿಸಿದ್ದು ಅಂತಹ‌ ವ್ಯಕ್ತಿಯನ್ನ 1952 ರಲ್ಲಿ ಸೋಲಿಸಿದ್ದೆ ಕಾಂಗ್ರೇಸ್ ಪಕ್ಷದ ಇತಿಹಾಸ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸ್ವಾಭಿಮಾನ ಮುಖಂಡರು ಜೂನ್ 4 ರಂದು ಜೆಡಿಎಸ್ ಪಕ್ಷ ಎಲ್ಲಿದೆ ಎಂದು ತೋರಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಬಿ.ಎನ್ ರವಿಕುಮಾರ್ ಗುಡುಗಿದರು.

ನಗರದ ಅಂಜನಾದ್ರಿ‌ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿ ಬುಧವಾರದಂದು ಭಾರತೀಯ ಜನತಾ ಪಾರ್ಟಿ‌ ಹಾಗೂ ಜಿಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮನ್ವಯ ಸಭೆಯನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು 2013 ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರಮೇಶ್ವರ್ ಅವರನ್ನ ಸೋಲಿಸಿದ್ದೆ ಸಿದ್ದರಾಮಯ್ಯನ ಸಾಧನೆಯಾಗಿದೆ ಜೊತೆಗೆ 2019 ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಕೆ ಹೆಚ್ ಮುನಿಯಪ್ಪ ಅವರನ್ನ ಸೋಲಿಸಿದ್ದೆ ಸಾಧನೆಯಾಗಿದೆ. ದೇಶದಲ್ಲಿ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ ಗ್ಯಾರಂಟಿಗಳು ಘೋಷಣೆ ಮಾಡುತ್ತಿರುವುದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗುತ್ತರೆಂಬ ಭಯದಿಂದ ಗ್ಯಾರಂಟಿಗಳು ಘೋಷಣೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಜನರಿಗೆ ಹಲವು ಯೋಜನೆಗಳು ನೀಡಿದ್ದಾರೆ. ದೇಶದ 130 ಕೋಟಿ ಜನರಿಗೆ ಆಯುಷ್ಮಾನ್ ಕಾರ್ಡ್, ಸುಮಾರು 115 ಕೋಟಿ ಜನರಿಗೆ ಕೇಂದ್ರದಿಂದ ಅಕ್ಕಿ ವಿತರಣೆ ಮಾಡುತ್ತಿದ್ದಾರೆ ಎಂದರು.

ಇನ್ನು ಕಾಂಗ್ರೇಸ್ ಸರ್ಕಾರ ಅಕ್ಕಿ ಕೊಡುವುದಕ್ಕೆ ಆಗದೇ 170 ರೂಪಾಯಿ ಹಗಲಲ್ಲಿ ಕೊಟ್ಟು. ಅದೇ ಕುಟುಂಬಗಳಿಂದ ರಾತ್ರಿ ವಾಪಸ್ ಕಿತ್ತುಕೊಳ್ಳುತ್ತಿದೆ. ಅರ್ಥ ನಾವೆಲ್ಲಾ ಮಾಡಿಕೊಳ್ಳಬೇಕಾಗಿದೆ. ಎನ್.ಡಿ.ಎ ಮೈತ್ರಿಕೂಟ ಬಿಜೆಪಿ – ಜೆಡಿಎಸ್ ಪಕ್ಷದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಕುಟುಂಬಕ್ಕೆ ಉತ್ತಮ ಇತಿಹಾಸವಿದೆ.ಅವರು ಸಹ. ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಸೋತಿರುವವರ ಪರಿಸ್ಥಿತಿ ಆ ಕಷ್ಟ ನನಗೂ ಗೊತ್ತಿದೆ. ಈ ಬಾರಿ ಅವರನ್ನ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.

ಕ್ಷೇತ್ರದ ಬಿಜೆಪಿ ಪ್ರಬಲ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ ನಾನು ದೇವೇಗೌಡರನ್ನ ಬೇಟಿ ಮಾಡಿ ಮಾತುಕತೆ ಮಾಡಿದ ಸಂದರ್ಭದಲ್ಲಿ ಸಂಸದರಾದ ಎಸ್. ಮುನಿಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿದರು. ಮಲ್ಲೇಶ್ ಬಾಬು ಅವರೊಂದಿಗೆ ನಾವೆಲ್ಲಾ ನಿಂತು ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುವ ಕೆಲಸ‌ಮಾಡುತ್ತೇವೆಂದು ತಿಳಿಸಿದರು. ಕಾಂಗ್ರೇಸ್ ನ್ನು ದೇಶದಿಂದ ನಿರ್ಮೂಲನೆ ಮಾಡಲು ತೀರ್ಮಾನ ಮಾಡಿದ್ದು,  ನರೇಂದ್ರ ಮೋದಿ ಅವರ ಪರಿಣಾಮದಿಂದ ಕಾಂಗ್ರೇಸ್  ಕೇವಲ 40 ಸ್ಥಾನಗಳಿಗೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೇಸ್ ದೂಳಿ ಪಟವಾಗುವುದಂತೂ ಗ್ಯಾರಂಟಿ. ಈ ‌ಕ್ಷೇತ್ರದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಿದೆ ಕೈಗಾರಿಕೆಗಳು ಬರಬೇಕು. ಏರ್ ಪೋರ್ಟ್ ಅಭಿವೃದ್ದಿ ಇನ್ನಿತರೆ  ಕೆಲಸಕಾರ್ಯಗಳು ಮಲ್ಲೇಶ್ ಬಾಬು ಅವರನ್ನ  ಗೆಲ್ಲಿಸುವ ಮೂಲಕ ಕೆಲಸ ಮಾಡಿಸಬೇಕು ಜೊತೆಗೆ  ಮಣ್ಣಿನ ಮಗ ಕುಮಾರಣ್ಣ ಅವರ ಕೈ ಬಲಪಡಿಸುವುದರಿಂದ  ರೈತರಿಗೆ ಅನುಕೂಲವಾಗುತ್ತದೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯರು, ಸಂಸದ ಎಸ್. ಮುನಿಸ್ಚಾಮಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ಮುಖಂಡರಾದ ಲಕ್ಷ್ಮೀನಾರಾಯಣರೆಡ್ಡಿ, ಮೇಲೂರು ಉಮೇಶ್, ತಾದೂರು ರಘು, ಧನಂಜಯ್ ರೆಡ್ಡಿ, ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಎಸ್.ಎ ನಾರಾಯಣಸ್ವಾಮಿ, ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!