Monday, December 23, 2024
Homeಜಿಲ್ಲೆಕನಕದಾಸರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ: ಶಾಸಕ ಬಿ.ಎನ್ ರವಿಕುಮಾರ್ ಅಭಿಮತ.

ಕನಕದಾಸರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ: ಶಾಸಕ ಬಿ.ಎನ್ ರವಿಕುಮಾರ್ ಅಭಿಮತ.

ರಾಷ್ಟ್ರೀಯ ನಾಡಹಬ್ಬಗಳ ಆಚರಣಾ  ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಕನಕದಾಸರ ಜಯಂತಿ  ಆಚರಣೆ. 

ಶಿಡ್ಲಘಟ್ಟ : ನಾಡಿಗಾಗಿ ಹೋರಾಟ ಮಾಡಿ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರನ್ನ ನಾವೆಲ್ಲರೂ ಸ್ಮರಿಸಬೇಕು. ಕನಕದಾಸರು, ವಾಲ್ಮೀಕಿ, ಮಹಾತ್ಮ ಗಾಂಧೀಜಿ, ಸಂಗೊಳ್ಳಿ ರಾಯಣ್ಣ , ಕೆಂಪೇಗೌಡರು ಅನೇಕ ಮಹನೀಯರು ಅವರ ಕಾಲಘಟ್ಟದಲ್ಲಿ ಸಮಾಜಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಅವರು ನೀಡಿರುವ ಉತ್ತಮ ಸಂದೇಶ, ಶಾಶ್ವತ ಕೆಲಸಗಳಿಂದ ಮಹನೀಯರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.

ರಾಷ್ಟ್ರೀಯ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವೇದಿಕೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರಗಳು ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಜನರಿಗೆ ಉತ್ತಮ ಸಂದೇಶವನ್ನು ನೀಡುವಂತಹ ಕೆಲಸ ಮಾಡುತ್ತದೆ. ಮಹನೀಯರು ಯಾವುದೇ ಒಂದು ಸಮುದಾಯಕ್ಕಾಗಿ ಕೆಲಸ ಮಾಡಿದವರಲ್ಲ ಎಲ್ಲಾ ಸಮುದಾಯಗಳ ಪರವಾಗಿ ಕೆಲಸ ಮಾಡಿರುವ ನಿಟ್ಟಿನಲ್ಲಿ ಅವರನ್ನ ನಾವೆಲ್ಲರೂ ಸ್ಮರಿಸುತ್ತಿದ್ದೇವೆ ಎಂದರು.

ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ಸಮಾಜದಲ್ಲಿ ಯಾರು ಮೇಲೂ, ಯಾರು ಕೀಳೂ ಅಲ್ಲ, ಪ್ರತಿಯೊಬ್ಬರೂ ಸಮಾಜದಲ್ಲಿ ಸಮಾನತೆಯಿಂದ ಬದುಕಿದಾಗ ಸಮಾಜ ಉತ್ತಮವಾಗಿ ಏಳಿಗೆ ಆಗುತ್ತದೆ. ಸಮಾಜದಿಂದ ಏನೆಲ್ಲ ನಾವು ಪಡೆದಿದ್ದೇವೆ. ಇಂದಿನ ಪರಿಸ್ಥಿತಿಗೆ ಏನು ಅಗತ್ಯವಿದೆಯೋ ಸಮಾಜಕ್ಕೆ ಕಿಂಚಿತ್ತಾದರೂ ನಮ್ಮದೇ ಆದ ರೀತಿಯಲ್ಲಿ ನಮ್ಮ ಸ್ಥಾನವನ್ನು ಬಲಪಡಿಸಿಕೊಂಡು ಆಸ್ಥಾನದಿಂದ ಸಮಾಜಕ್ಕೆ ಒಂದಷ್ಟು ಸಹಾಯ, ಕೊಡುಗೆಯನ್ನು ನೀಡಬೇಕಾಗುತ್ತದೆ.

ಕನಕದಾಸರು ಅವರ ಜೀವನದಲ್ಲಿ ಅಸಮಾನತೆಯನ್ನು ಅನುಭವಿಸಿದ್ದಾರೆ. ಅವರಿಗೆ ಆದ ಅವಮಾನಗಳು ರಾಗಿ ಮತ್ತು ಹಕ್ಕಿಗೆ ಹೋಲಿಸಿ ಕಾವ್ಯವನ್ನು ರಚನೆ ಮಾಡುತ್ತಾರೆ. ಹೇಗೆ ಅವರನ್ನು ನಿಂದನೆ ಮಾಡುತ್ತಿದ್ದರೊ ಅದನ್ನು ರಾಗಿಗೆ ಹೋಲಿಸುತ್ತಿದ್ದರು. ರಾಗಿ ಬಡವರ, ದಲಿತರ ಆಹಾರ ಅದನ್ನ ಕೀಳಾಗಿ ಕಾಣಬಾರದು. ಅಕ್ಕಿ ಬ್ರಾಹ್ಮಣರು ಅಥವಾ ಮೇಲ್ವರ್ಗದ ಆಹಾರವಾಗಿತ್ತು. ಸಮಾಜದಲ್ಲಿ ಸಮಾನತೆಯಿಂದ ಬದುಕುಬೇಕೆಂಬ ಮೈಲುಗಲ್ಲಿದೆ. ಅದನ್ನ ನಾವೆಲ್ಲರೂ ಪಾಲನೆ ಮಾಡಬೇಕು. ಹುಟ್ಟುತ್ತಲೇ ನಾವು ಯಾರೂ ಕೂಡ ಯಾವುದೇ ಧರ್ಮ, ಒಂದು ಜಾತಿಯಲ್ಲೆ ಹುಟ್ಟಬೇಕು ಎಂದು ಅರ್ಜಿಯನ್ನು ಸಲ್ಲಿಸಿಕೊಂಡು ಹುಟ್ಟುವುದಿಲ್ಲ. ಮಾನವತವಾದ ಅಣ್ಣ- ತಮ್ಮಂದಿರ ರೀತಿಯಲ್ಲಿ ಬದುಕಬೇಕು ಆಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಅರ್ಥಗರ್ಭಿತ ಪದಗಳಿಂದ ನುಡಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಪೌರಾಯುಕ್ತ ಮಂಜುನಾಥ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ ಮಂಜುನಾಥ್, ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾದೂರು ರಘು, ಬಂಕ್ ಮುನಿಯಪ್ಪ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು. 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!