ಗೌರಿಬಿದನೂರು: ತಾಲ್ಲೂಕಿನ ಆರ್ ಅಶೋಕ್ ಕುಮಾರ್ ರವರ ಪಾಮ್ ಹೌಸ್ ನಲ್ಲಿ ನಾಡದೋರೆ ರಾಜವೀರ ಮದಕರಿ ನಾಯಕ ಯುವ ಬ್ರಿಗೇಡ್ ಬೆಂಗಳೂರು ವತಿಯಿಂದ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮದಕರಿ ಕಪ್ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಪೋಸ್ಟರ್ ಗಳನ್ನು ಗೌರಿಬಿದನೂರು ತಾಲ್ಲೂಕಿನ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾದ ಆರ್ ಅಶೋಕ್ ಕುಮಾರ್ ರವರು ಬಿಡುಗಡೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿದ ಕಡುಶತ್ರುಗಳಿಂದಲೂ ಸೈ ಎನಿಸಿಕೊಂಡ ಕನ್ನಡ ನಾಡಿನ ಹೆಮ್ಮೆಯ ಪುತ್ರ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ದಿನಾಂಕ 5-10-2024ನೇ ಶನಿವಾರ ಮತ್ತು 6-10-2024ನೇ ಭಾನುವಾರದಂದು ಸ್ಥಳ ರಾಜೀವ್ ಗಾಂಧಿ ಸ್ಪೋಟ್ಸ್ ಕ್ಲಬ್ ಇಂಡೋರ್ ಸ್ಟೇಡಿಯಂ ಚಾಮರಾಜಪೇಟೆ ಬೆಂಗಳೂರಿನಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪಟುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರಥಮ ಬಹುಮಾನ 1 ಲಕ್ಷ ದ್ವೀತಿಯ ಬಹುಮಾನ 50 ಸಾವಿರ ತೃತೀಯ ಬಹುಮಾನ 25 ಸಾವಿರ ಚತುರ್ಥಿ ಬಹುಮಾನ 15ಸಾವಿರ ಮೇಲಿನ ಎಲ್ಲಾ ಬಹುಮಾನಗಳ ಜೋತೆ ಆಕರ್ಷಕ ಟ್ರೋಫಿ ಕೂಡ ನೀಡಲಾಗುತ್ತದೆ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸರ್ವೋತ್ತಮ ಆಟಗಾರರಿಗೆ ಬೈಸಿಕಲ್ ಬಹುಮಾನವಿರುತ್ತದೆ ಎಂದು ಆಯೋಜಕರು ತಿಳಿಸಿದರು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನವೀನ್ ಮದಕರಿ 8553765624, ದಯಾನಂದ ನಾಯಕ 9743335157, ಭಾರತ್ ನಾಯಕ 9986683111, ಮಣೆ ನಾಯಕ 8660970419, ನವೀನ್ ನಾಯಕ 9632147591, ಅಜಯ್ ಸಿಂಹ 9686448097.
ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ನರಸಿಂಹಮೂರ್ತಿ, ಶ್ರೀ ವೆಂಕಟೇಶ್ವರ ಐಟಿಐ ಕಾಲೇಜು ಅಧ್ಯಕ್ಷ ಜೆ ಲೋಕೇಶ್, ರಾಮಾಂಜಿ ನಾಯಕ, ಕೋಡಿರ್ಲಾಪ್ಪ, ಸುಲೇಮಾನ್, ನಂದನ್, ರಾಮಚಂದ್ರ ನಾಯಕ, ಪ್ರಶಾಂತ್ ನಾಯಕ, ಹಾಲಗಾನಹಳ್ಳಿ ನವೀನ್ ನಾಯಕ, ಮೇಳ್ಳಾ ಶಿವಪ್ಪ,ದೊಡ್ಡಮಲ್ಲೆಕೆರೆ ಗಂಗಾಧರ ನಾಯಕ, ರಾಮಚಂದ್ರಪುರ ರಘು, ರಮೇಶ್ ಮುಂತಾದವರು ಉಪಸ್ಥಿತರಿದ್ದರು,