ರಕ್ಷಾ ರಾಮಯ್ಯ ಗೆಲುವಿಗೆ ದೇವರಿಗೆ ವಿಶೇಷ ಪೂಜೆ
ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಚಿಕ್ಕಬಳ್ಳಾಪುರದ ಕಾಂಗ್ರೇಸ್ ಅಭ್ಯರ್ಥಿಯಾಗಿ ರಕ್ಷಾ ರಾಮಯ್ಯ ಮತ್ತು ಕೋಲಾರ ಲೋಕಸಭಾ ಅಭ್ಯರ್ಥಿಯಾಗಿ ಕೆ ವಿ ಗೌತಮ್ ಅವರಿಗೆ ನಿನ್ನೆಯಷ್ಟೆ ಕೆಪಿಸಿಸಿ ಕಛೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಬಿ ಫಾರಂ ನೀಡಿದ್ದು, ಇಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರ ತವರರೂರು ಪೆರೇಸಂದ್ರ ಗ್ರಾಮದಲ್ಲಿರುವ ಸಪ್ಪಲಮ್ಮ ದೇವಿಯ ದೇವಾಲಯದಲ್ಲಿ ಮುಖಂಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಅತೀ ಹೆಚ್ಚು ಮತಗಳಿಂದ ಜಯಗಳಿಸಬೇಕು ಆ ಮೂಲಕ ಸಂಸತ್ ನಲ್ಲಿ ಜನ ಪರವಾಗಿ ಎತ್ತಿಹಿಡಿಯಬೇಕು ಎಂದು ರಕ್ಷಾ ರಾಮಯ್ಯ ಅವರ ಅಭಿಮಾನಿಗಳು ಕಾಂಗ್ರೇಸ್ ಪಕ್ಷದ ಸ್ಥಳೀಯ ಮುಖಂಡರು, ಯುವಕರು ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಪಿ.ಶ್ರೀನಿವಾಸ್, ಪಿ.ಎಸ್.ಮಂಜುನಾಥ್, ಸಿಎಲ್ ಗೋಪಾಲ್, ನಾರಾಯಣಸ್ವಾಮಿ, ಮೂರ್ತಿ, ಬಾಬು, ಮಧು, ಶ್ರೀಧರ್, ಮಂಜುನಾಥ್, ಕುಮಾರ್, ಶ್ರೀಧರ್, ನವೀನ್, ಭಾಷಾ, ಕೌಶೀರ್ ಸೇರಿದಂತೆ ಇತರರು ಹಾಜರಿದ್ದರು.