ಚಿಕ್ಕಬಳ್ಳಾಪುರ : ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಕುಶಾಲ್ ಚೌಕ್ಸೆ ಐಪಿಎಸ್. ಅವರು ಇಂದು ಬೆಳಗ್ಗೆ 10:30 ಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ. ಆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕವಾಗಿ ಜನ ಸಾಮಾನ್ಯರು, ನಾಗರೀಕರ ಸಮಸ್ಯೆಗಳಿಗೆ ಸ್ಪಂಧಿಸಿ ಕರ್ತವ್ಯವೇ ದೇವರು ಎಂದು ನಂಬಿ ದಕ್ಷತೆಯಿಂದ ಸೇವೆ ಸಲ್ಲಿಸಿ ಜನಪ್ರಿಯತೆ ಗಳಿಸಿರುವ ಕುಶಾಲ್ ಚೌಕ್ಸೆ ಅವರು ಈ ಹಿಂದೆ ಚಿಂತಾಮಣಿಯಲ್ಲಿ ಎಎಸ್ಪಿಯಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಹೆಸರು ಖ್ಯಾತಿಗಳಿಸಿದ್ದರು.
ಅಪರಾಧ ಚಟುವಟಿಕೆಗಳು ತಡೆಗಟ್ಟುವ ನಿಟ್ಟಿನಲ್ಲಿ ಮಟ್ಕಾ ,ಜೂಜಾಟ, ಗ್ಯಾಸ್ ರಿಫೀಲಿಂಗ್, ಬೈಕ್ ವೀಲ್ಹೀಂಗ್, ವಾಹನ ಸವಾರರಿಗೆ, ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಮೂಲಕ ಎಚ್ಚರಿಸುತ್ತಿದ್ದರು. ಜೊತೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ತಮ್ಮ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಉತ್ತಮ ಅಧಿಕಾರಿ ಯೆಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇಂದಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಇಲಾಖೆಯ ಅಧೀಕ್ಷಕರಾಗಿ ಸೇವೆ ಸಲ್ಲಿಸಲಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಾಗರೀಕರು, ಜನ ಸಾಮಾನ್ಯರು, ನೊಂದ ಬಡ ಜನರಿಗೆ ನ್ಯಾಯ ಕೊಡಿಸುವ ಕೆಲಸ ಆಗಲಿ ಜೊತೆಗೆ ಮತ್ತಷ್ಟು ಉತ್ತಮ, ಹೆಸರು, ಕೀರ್ತಿ ಗಳಿಸಲೆಂದು ” ಸಂವಿಧಾನ ಶಕ್ತಿ ಪತ್ರಿಕೆ” ವತಿಯಿಂದ ನಾವೂ ಸಹಾ ಆಶಿಸುತ್ತೇವೆ.