ಶಿಡ್ಲಘಟ್ಟ : ಸರ್ಕಾರಿ ನೌಕರರ ಸಂಘದ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಸ್ಥಾನಗಳಿಗೆ ನಿಗಧಿಯಾಗಿರುವ ಚುನಾವಣೆಯಲ್ಲಿ 30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿಗೆ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಕೆ.ಎನ್ ಸುಬ್ಬಾರೆಡ್ಡಿ ಅವರು ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. 22 ಇಲಾಖಾ ಮತಕ್ಷೇತ್ರಗಳ 30 ಸ್ಥಾನಗಳಿಗೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಆ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಬೈರಾರೆಡ್ಡಿ ಘೋಷಿಸಿದ್ದಾರೆ.
ಮೀನುಗಾರಿಕೆ ಇಲಾಖೆ, ಪಿಎಂ ಪೋಷಣ್ ಅಭಿಯಾನ್ ಮತಕ್ಷೇತ್ರದಿಂದ ಕೆ.ಎನ್.ಸುಬ್ಬಾರೆಡ್ಡಿ, ಕೃಷಿ ಇಲಾಖೆಯಿಂದ ರವಿ.ಪಿ.ಆರ್, ಪಶುಪಾಲನಾ ಇಲಾಖೆಯಿಂದ ಡಾ.ಶ್ರೀನಾಥರೆಡ್ಡಿ, ಕಂದಾಯ ಇಲಾಖೆಯಿಂದ ಚಂದ್ರಶೇಖರ್.ಎಸ್ ಮತ್ತು ಶಶಿಧರ್, ಬಿ.ಸಿ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಿ.ಪದ್ಮಾವತಮ್ಮ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಿಂದ ಟಿಪ್ಪುಸುಲ್ತಾನ್, ಪ್ರೌಢಶಿಕ್ಷಣ ಇಲಾಖೆಯಿಂದ ಬೈರಾರೆಡ್ಡಿ,ವಿ, ಹರೀಶ್‌ಬಾಬು,ಸಿ.ಕೆ, ಸಾರ್ವಾಜನಿಕ ಶಿಕ್ಷಣ ಇಲಾಖೆಯ ಕಚೇರಿ ಮತಕ್ಷೇತ್ರದಿಂದ ಮಧುಸೂಧನ್,ಆರ್, ಪಪೂ/ಪದವಿ ಕಾಲೇಜು ಕಡೆಯಿಂದ ಸಿ.ವೆಂಕಟಶಿವಾರೆಡ್ಡಿ, ಸಮಾಜಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಜಗದೀಶ್, ಎಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಣ್ಯ ಇಲಾಖೆಯಿಂದ ಎಸ್.ಎನ್.ಜಯಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಟಿ.ಟಿ.ನರಸಿಂಹಪ್ಪ, ಎಂ.ಎಸ್.ದೇವರಾಜು, ಲಲಿತಮ್ಮ, ರಹಮತ್ ಉಲ್ಲಾ, ಡಿ.ಎಸ್,ಅಕ್ಕಲರೆಡ್ಡಿ.ಎಸ್.ಎಂ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಮಂಜುಳಾ.ಪಿ, ತಿಮ್ಮರಾಜು.ಕೆ, ಖಜಾನೆ ಇಲಾಖೆಯಿಂದ ಕಿರಣ್‌ಕುಮಾರ್,ಜೆ.ಎ, ಭೂದಾಖಲೆಗಳ ಕಚೇರಿ, ಭೂಮಾಪನ, ಕಂದಾಯ ವ್ಯವಸ್ಥೆಯಿಂದ ವಸಂತಕುಮಾರ್,ಜಿ.ಡಿ, ನ್ಯಾಯಾಂಗ ಇಲಾಖೆಯಿಂದ ರಘುನಂದನ್.ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಿಂದ ಕಾತ್ಯಾಯಿನಿ,ಎಂ.ಕೆ, ಅಶ್ವತ್ಥಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿದ್ಯಾ ಎ.ವಸ್ತ್ರದ, ಆಹಾರ ಮತ್ತು ನಾಗರೀಕ ಸರಬರಾಜು, ಕಾರ್ಮಿಕ ಇಲಾಖೆ, ಎಪಿಎಂಸಿಯಿಂದ ವಿಜಯಲಕ್ಷ್ಮಿ, ಅಬಕಾರಿ ಇಲಾಖೆಯಿಂದ ನಿತಿನ್.ಎ, ನಗರಾಭಿವೃದ್ಧಿ, ಪೌರಾಡಳಿತ, ಕೈಗಾರಿಕಾ ತರಬೇತಿ ಸಂಸ್ಥೆ ಕಡೆಯಿಂದ ಮಂಜುನಾಥ್ ಎಂ. ಸಹಕಾರ/ ಸಂಘ ಲೆಕ್ಕ ಪರಿಶೋಧನೆ ಸಾಂಖ್ಯಿಕ ಇಲಾಖೆಯಿಂದ ಎಂ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
3 ಸ್ಥಾನಗಳಿಗೆ ಇನ್ನೂ 8 ಮಂದಿ ಮಂದಿ ಅಂತಿಮ ಕಣದಲ್ಲಿದ್ದು ಅಕ್ಟೋಬರ್ 28 ರಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನದ ನಂತರ ಮತ ಎಣಿಕೆ ಮತ್ತು ಫಲಿತಾಂಶ ಘೋಷೆಯಾಗಲಿದೆ.
ಚುನಾವಣೆ ಕಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮತಕ್ಷೇತ್ರದಿಂದ 3 ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದು ಶಿಕ್ಷಕ ಅಶ್ವತ್ಥಕುಮಾರ, ಎಸ್.ಎಂ. ಕೆಂಪೇಗೌಡ.ಎಂ. ಗೋವಿಂದ.ವಿ, ನರದಿಂಹರೆಡ್ಡಿ, ಮುಜಾಫೀರ್. ಎಸ್. ಮೋಹನ್, ಎಚ್.ಸಿ. ಮಂಜುನಾಥ, ಎಂ. ಮೇಲೂರು ಸುರೇಶ್ ಬಾಬು ಚುನಾವಣೆಯನ್ನ ಎದುರಿಸಲಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್.ಸುಬ್ಬಾರೆಡ್ಡಿ ಪತ್ರಿಕೆಯೊಂದಿಗೆ ಮಾತನಾಡಿ ನನ್ನ ಅವಧಿಯಲ್ಲಿ ಸರ್ಕಾರಿ ನೌಕರರ ಎಲ್ಲಾ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂಧಿಸಿ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. 30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು, ಎಲ್ಲಾ ನೌಕರರಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ. ಈ ಹಿಂದಿನಂತೆ ನನ್ನ ಅವಧಿಯಲ್ಲಿ ತಾಲ್ಲೂಕಿನ ನೌಕರರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.