ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಎನ್. ಸುಬ್ಬಾರೆಡ್ಡಿ ಅಧಿಕೃತ ಘೋಷಣೆ.
ಶಿಡ್ಲಘಟ್ಟ : ಗುರುಭವನ, ನೌಕರರ ಭವನಕ್ಕೆ ಶೀಘ್ರದಲ್ಲೆ ಗುದ್ದಲಿ ಪೂಜೆ ಮಾಡುವುದಕ್ಕೆ ಶಾಸಕರು ಅಶ್ವಾಸನೆ ಕೊಟ್ಟಿದ್ದಾರೆ. ಸಕಾರಾತ್ಮಕವಾಗಿ ಸ್ಪಂಧಿಸಿದ್ದು, ಶೀಘ್ರವಾಗಿ ಅನುಷ್ಟಾನವಾಗುವುದಕ್ಕೆ ನಾವು ಮತ್ತೊಮ್ಮೆ ಶಾಸಕರನ್ನು ಬೇಟಿ ಮಾಡಿ ಒತ್ತಾಯ ಮಾಡುತ್ತೇವೆ. ತಾಲ್ಲೂಕಿನ ಎನ್.ಪಿ.ಎಸ್. ಹಾಗೂ ಓ.ಪಿ.ಎಸ್ ಎಲ್ಲಾ ನೌಕರರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡುತ್ತೇನೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಎನ್ ಸುಬ್ಬಾರೆಡ್ಡಿ ಹೇಳಿದರು.
ನಗರದ ತಾಲ್ಲೂಕು ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿ ಬೈರಾರೆಡ್ಡಿ ಅವರು ಅಧಿಕೃತವಾಗಿ ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ವಿತರಿಸಿದ ಬಳಿಕ ಮಾತನಾಡಿದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಮತ್ತು ಯೋಜನಾ ಶಾಖೆಗಳ 33 ನಿರ್ದೇಶಕ ಸ್ಥಾನಗಳ ಪೈಕಿ 30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. 3 ಸ್ಥಾನಗಳಿಗೆ ಕಾರಣಂತರಗಳಿಂದ ಚುನಾವಣೆ ಹೋಗುವ ಅನಿವಾರ್ಯತೆ ಎದುರಾಯಿತು. ಎಲ್ಲಾ ಸ್ಥಾನಗಳಿಗೂ ಆಯ್ಕೆಯಾಗಿದ್ದಾರೆ. ಪ್ರತ್ಯೇಕವಾಗಿ ಪರೋಕ್ಷಾವಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂಧನೆಗಳು ಸಲ್ಲಿಸುತ್ತೇನೆ ಎಂದರು.
2024-2029ನೇ ಸಾಲಿನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಎನ್ ಸುಬ್ಬಾರೆಡ್ಡಿ, ಖಜಾಂಚಿ – ಜಿ.ಡಿ ವಸಂತ್ ಕುಮಾರ್, ರಾಜ್ಯ ಪರಿಷತ್ ಸದಸ್ಯ ಟಿ.ಟಿ. ನರಸಿಂಹಪ್ಪ, ಕಾರ್ಯದರ್ಶಿ ಎಂ.ಕೆಂಪೇಗೌಡ, ಗೌರವಾಧ್ಯಕ್ಷರಾಗಿ ಎಸ್.ಎಂ. ಅಕ್ಕಲರೆಡ್ಡಿ ಅವರು ಅಧಿಕೃತವಾಗಿ ಘೋಷಣೆಯಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಹೂವು ಮಾಲೆಗಳು ಹಾಕಿ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳ, ಸಿಡಿಪಿಓ ವಿದ್ಯಾವಸ್ತ್ರಾದ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದಾಧಿಕಾರಿ ಡಾ.ಮನೋಹರ್, ಸಂಘದ ಮಾಜಿ ಗೌರವಾಧ್ಯಕ್ಷ ಸಿ.ಎಂ.ಮುನಿರಾಜು ಚುನಾವಣಾಧಿಕಾರಿ ಬೈರಾರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ವೆಂಕಟರೆಡ್ಡಿ ನೂತನ ನಿರ್ದೇಶಕರಾದ ಟಿಪ್ಪು ಸುಲ್ತಾನ್, ಮೇಲೂರು ಎಂ.ಮಂಜುನಾಥ್, ಎನ್.ಪಿ.ಎಸ್. ನೌಕರರ ಸಂಘದ ಕಾರ್ಯದರ್ಶಿ ನರಸಿಂಹರಾಜು, ಸೇರಿದಂತೆ ಸಂಘದ ನೂತನ ನಿರ್ದೇಶಕರು ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್