ತಪ್ಪು ಮಾಡಿದರೆ ಸಹಿಸಲ್ಲ. ಯಾವ ಮುಲಾಜಿಗೂ ಡೋಂಟ್ ಕೇರ್.!
ಶಿಡ್ಲಘಟ್ಟ : ಹೇ ಯಾವನ್ರೀ ಅವನು, ರಸ್ತೆಯಲ್ಲೆ ವಾಹನ ಅಡ್ಡಲಾಗಿ ನಿಲ್ಲಿಸಿರೋದು, ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ, ಒದ್ದು ಒಳಗಡೆ ಹಾಕ್ತೇನೆ. ಪ್ರತಿಯೊಬ್ಬರು ಕಾನೂನು ಪಾಲಿಸಬೇಕು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಬೈಕ್ ವೀಲ್ಹಿಂಗ್ ಮಾಡುವುದು, ಮಾಡಿದರೆ ಬೆಂಡ್ ಎತ್ತಿ ಬ್ರೇಕ್ ಹಾಕುತ್ತೇನೆಂದು ಪುಂಡ ಪೋಕರಿಗಳಿಗೆ, ಸಮಾಜಗಾತುಕ ವ್ಯಕ್ತಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡುವ ಖಡಕ್ ಪೊಲೀಸ್ ಅಧಿಕಾರಿ ಸೂಪರ್ ಕಾಪ್ ಸರ್ಕಲ್ ಇನ್ಸ್ ಪೆಕ್ಟರ್ ಎಂ.ಶ್ರೀನಿವಾಸ್ ಎಂದರೆ ಪುಂಡ – ಪೋಕರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ತಪ್ಪು ಮಾಡಿದರೆ ಸಹಿಸುವುದಿಲ್ಲ. ಯಾವ ಮುಲಾಜಿಗೂ ಕೇರ್ ಮಾಡುವುದಿಲ್ಲ. ಸರ್ ನಾವು ಬಡವರು, ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಬಳಿ ಕಛೇರಿಯ ಮೆಟ್ಟಿಲು ಹತ್ತಿಕೊಂಡು ಹೋಗುವ ನೊಂದ ಜನರ ಕಷ್ಟ ಕೇಳದೆ ವಾಪಸ್ ಕಳುಹಿಸಿರುವ ಉದಾಹರಣೆಯಿಲ್ಲ. ಇವರದ್ದು ಗಟ್ಟಿ ಧ್ವನಿ, ನೇರ ಮಾತು ವರುಟಾಗಿ ಕಾಣಿಸಿದರು. ಮನಸ್ಸು ಹಾಲಿನಷ್ಟೆ ಸ್ವಚ್ಚ, ಹೃದಯ ಹೂವಿನಷ್ಟೇ ಮೃದುವಾದದ್ದು.
ಹೌದು ರೈತರ ಮಗನಾಗಿ ಹುಟ್ಟಿ ಜನರ ಕಷ್ಟ ಅರಿತಿರುವ ಇವರು ಬಡವರು, ಜನ ಸಾಮಾನ್ಯರು ಎಂದರೆ ಅಷ್ಟೇ ಕಾಳಜಿ ಹೊಂದಿದ್ದಾರೆ. ಈಗಿನ ಕಾಲದಲ್ಲಿ ನೇರ, ನಿಷ್ಟೂರವಾಗಿ ಮಾತನಾಡುವವರು ಸಿಗುವುದಂತೂ ಅಪರೂಪ ಅಂತಹದ್ದೆ ವ್ಯಕ್ತಿತ್ವ ಇವರದ್ದು, ಬಡವರು, ದೀನ- ದಲಿತರು, ಹಿಂದುಳಿದವರು, ಶೋಷಿತರು, ಅನ್ಯಾಯಕ್ಕೊಳಗಾದ ಜನರ ಕಷ್ಟ ಆಲಿಸಿ ಕಾನೂನು ಮೂಲಕ ನ್ಯಾಯ ಕೊಡಿಸಲು ಸಹಾಯ ಮಾಡುವ ಹೃದಯ ಇವರದ್ದಾಗಿದೆ.
ಇವರು ಕರ್ತವ್ಯ ನಿರ್ವಹಿಸುವ ವ್ಯಾಪ್ತಿಯಲ್ಲಿ ಜನರು ನೆಮ್ಮದಿಯಾಗಿ ಜೀವನ ನಡೆಸಬೇಕು ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದು, ರೌಡಿ, ಪುಂಡ ಪೋಕರಿಗಳು ಬಾಲ ಚಿಚ್ಚುವುದಕ್ಕೆ ಬಿಡುವುದಿಲ್ಲ. ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು, ಸಂವಿಧಾನವನ್ನ ನಾವೆಲ್ಲರೂ ಪೂಜಿಸಬೇಕು. ಕಾನೂನಿನ ಮುಂದೆ ತಗ್ಗಿ – ಬಗ್ಗಿ ನಡೆಯಬೇಕು, ಯಾವುದೇ ಅಪರಾಧ ಚಟುವಟಿಕೆಗಳು ನಡೆಯಬಾರದು. ಯುವಕರು, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬಾರದು. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವ ಅವ್ಯಾಸ ಮಾಡಬಾರದು. ಹೀಗೆ ಸಾಮಾಜಿಕ ಕಳಕಳಿಯಿಂದ ಅಪರಾಧಗಳು ತಡೆಗಟ್ಟುವ ನಿಟ್ಟಿನಲ್ಲಿ ಯುವ ಸಮೂಹ, ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಿದರು.
ಅಯ್ಯೋ ಸರ್ಕಲ್ ಇನ್ಸ್ ಪೆಕ್ಟರ್ ತಂಬಾ ಖರಾಬ್, ಬೈದು ಬಿಡ್ತಾರಪ್ಪ ಅಂತೆಲ್ಲಾ ಮಾತನಾಡುವವರ ನಡುವೆ ನ್ಯಾಯವಾಗಿದ್ದರೆ ಯಾವ ಮುಲಾಜಿಗೂ ಮಣಿಯುವುದಿಲ್ಲವೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜನ ಜನಿತವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ನಮ್ಮ ನಿಜವಾದ ದೇವರು, ಸಂವಿಧಾನವೇ ನಮಗೆಲ್ಲಾ, ಹಿಂದೆ ರಾಜಪ್ರಭುತ್ವ ಇತ್ತು. ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜಾಪ್ರಭುತ್ವ. ಕಾನೂನುಗಳು, ಐಪಿಸಿ, ಸಿ.ಆರ್.ಪಿ ಸೆಕ್ಷನ್ ಗಳೇ ಅನ್ವಯವಾಗುತ್ತವೆ. ಹಿಂದೆ ಊರುಗಳಲ್ಲಿ ಜಮೀನ್ದಾರರು, ದೊಡ್ಡ ಶ್ರೀಮಂತರಿಗೆ ಎದುರು ಬರುವಂತಿರಲಿಲ್ಲ ಸಂವಿಧಾನ ಬಂದಮೇಲೆ ಎಲ್ಲಾ ಬದಲಾಗಿದೆ. ನಮಗೆ ಸಂವಿಧಾನವೇ ಶ್ರೇಷ್ಟವಾದದ್ದು ಹೀಗೆ ಹಲವು ಬಾರಿ ಮನದಾನದಾಳದ ಮಾತುಗಳು ವ್ಯಕ್ತಪಡಿಸಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರು ಹೇಳಿ ಕೇಳಿ ಬೆಂಗಳೂರಿನ ಆರ್.ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯಾಗಿದ್ದಾರೆ. ಆರ್.ಸಿ. ಕಾಲೇಜು ವಿದ್ಯಾರ್ಥಿಗಳ ದೈರ್ಯ, ಸ್ವಭಾವ ಹೀಗೆ ಎನ್ನುತ್ತಾರೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವವರು.!
ಪೊಲೀಸರು ಇಲ್ಲದ ಸಮಾಜವನ್ನ ಊಹಿಸಲು ಸಾಧ್ಯವೇ ಇಲ್ಲ. ಸಾಮಾಜದ ಸ್ವಾಸ್ತ್ಯ, ನಾಗರೀಕರ ರಕ್ಷಣೆ, ಕಾನೂನು ಸುವ್ಯವಸ್ಥೆ ನಾಗರೀಕರ ಆಸ್ತಿ- ಪಾಸ್ತಿ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಮತ್ತಷ್ಟು ಸೇವೆ ಮಾಡಲಿ, ಬಡವರು, ಶೋಷಿತರು, ದೀನ – ದಲಿತರು, ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರ ಸೇವೆ ಮುಂದುವರೆಯಲಿ… ಖಡಕ್ ಪೊಲೀಸ್ ಅಧಿಕಾರಿಗೆ ನಮ್ಮದೊಂದು ಸಲಾಂ.
ವಿಶೇಷ ವರದಿ: ಕೋಟಹಳ್ಳಿ ಅನಿಲ್ ಕುಮಾರ್. ಕೆ.ಎ