Tuesday, December 24, 2024
Homeಜಿಲ್ಲೆಕನ್ನಡ ಲೇಖಕಿ ಡಾ. ಕಮಲ ಹಂಪನಾ ನಿಧನ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರದ್ದಾಂಜಲಿ‌.

ಕನ್ನಡ ಲೇಖಕಿ ಡಾ. ಕಮಲ ಹಂಪನಾ ನಿಧನ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರದ್ದಾಂಜಲಿ‌.

ಶಿಡ್ಲಘಟ್ಟ : ಕನ್ನಡ ಲೇಖಕಿ ನಾಡೋಜ ಡಾ. ಕಮಲ ಹಂಪನಾ ಅವರು ಶನಿವಾರದಂದು ವಿಧಿವಶರಾಗಿದ್ದು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪಟೇಲ್ ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.


ಕನ್ನಡ ಪ್ರಾಧ್ಯಾಪಕಿಯಾಗಿದ್ದ ಕನ್ನಡಕ್ಕೆ ಅಪಾರ ಸೇವೆ ಸಲ್ಲಿಸಿರುವ ಹಿರಿಯ ಲೇಖಕಿ ಡಾ. ಕಮಲ ಹಂಪನಾ ಅವರು ನಿಧನವಾಗಿರುವ ಹಿನ್ನೆಲೆ ಗೌರವಾರ್ಥವಾಗಿ ಎರಡು ನಿಮಿಷಗಳ ಮೌನ ಆಚರಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಮಾಜಿ ಅದ್ಯಕ್ಷ ರೂಪಸಿ ರಮೇಶ್ ,ಕೃನಾ ಶ್ರೀನಿವಾಸಮೂರ್ತಿ ಶಿಕ್ಷಕ ವೆಂಕಟಸ್ವಾಮಿ ಅವರು ಕಮಲ ಹಂಪನಾ ರವರ ಸಾಹಿತ್ಯ ಸೇವೆಯ ಕುರಿತು ಮಾತನಾಡಿದರು

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪಟೇಲ್ ನಾರಾಯಣಸ್ವಾಮಿ, ವಿಸ್ಡಂ ನಾಗರಾಜ್, ಟಿಟಿ ನರಸಿಂಹಪ್ಪ, ಶಿವಕುಮಾರ್, ಹರೀಶ್, ಅಮರನಾಥ್,ಸಂಜೀವ್ ರೆಡ್ಡಿ , ರಾಮಾಂಜಿನೇಯ, ಶಿಕ್ಷಕ ಕೆಂಪಣ್ಣ, ಮಹಮ್ಮದ್ ಬೇಗ್, ಸೇರಿದಂತೆ ಗರುಡಾದ್ರಿ ಮಂಜುನಾಥ್ ಇತರರು ಹಾಜರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!