Monday, December 23, 2024
Homeಜಿಲ್ಲೆಸ್ವಚ್ಚತೆ, ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಕಂದಾಯ ಭವನ. ತಲೆ ಕೆಡಿಸಿಕೊಳ್ಳದ ತಾಲ್ಲೂಕು ಆಡಳಿತ.!   

ಸ್ವಚ್ಚತೆ, ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಕಂದಾಯ ಭವನ. ತಲೆ ಕೆಡಿಸಿಕೊಳ್ಳದ ತಾಲ್ಲೂಕು ಆಡಳಿತ.!   

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ  ಕಟ್ಟಡದ ಮೇಲೆ ಬೆಳೆದಿರುವ ಗಿಡ-ಗಂಟಿಗಳು, ನಿರ್ವಹಣೆ ಮಾಡದೇ ಅಧಿಕಾರಿಗಳ ನಿರ್ಲಕ್ಷ್ಯ.!

ಶಿಡ್ಲಘಟ್ಟ  :  ತಾಲ್ಲೂಕು ಆಡಳಿತ ಸೌಧದ ಪಕ್ಕದಲ್ಲೇ ಇರುವ ಕಂದಾಯ ಭವನ ಕಟ್ಟಡದ ಕೊಠಡಿಗಳಲ್ಲಿ ಸರ್ಕಾರಿ ನೌಕರರ ಭವನ, ಹಾಗೂ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಯೋಜನಾ ಪ್ರಾಧಿಕಾರದ ಕಛೇರಿಗಳಿದ್ದು, ಇದೇ ಕಂದಾಯ ಭವನ ಕಟ್ಟಡದಲ್ಲಿ ಅಧಿಕಾರಿಗಳು ಪ್ರತಿನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಕಟ್ಟಡ ಆಸ್ತಿ-ಪಾಸ್ತಿಯನ್ನು ಸಂರಕ್ಷಣೆ ಮಾಡಬೇಕಿರುವ ಅಧಿಕಾರಿಗಳು    ಮೈ ಮರೆತಂತಾಗಿದೆ.  ಸರ್ಕಾರಿ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳು ಕಂದಾಯ ಭವನ ಕಟ್ಟಡದ ಆವರಣದಲ್ಲೆ ಕಾಗದ ಪತ್ರಗಳ ಕಸದ ರಾಶಿಯನ್ನು ಹಾಕಿಕೊಂಡಿದ್ದಾರೆ. ಇನ್ನು  ಕಟ್ಟಡದ ಮೇಲೆ ಗಿಡ-ಗಂಟಿಗಳು ಬೆಳೆದು ಕಟ್ಟಡ ಹಾನಿಯಾಗುತ್ತಿದ್ದರೂ ಸಹಾ ಕಂಡು ಕಾಣದಂತೆ ಜಾಣ ಕುರುಡರಾಗಿದ್ದಾರೆ.

ಹೌದು ಶಿಡ್ಲಘಟ್ಟದ ಕಂದಾಯ ಭವನದ ಕಟ್ಟಡಕ್ಕೆ ನೂರು ವರ್ಷಗಳ ಇತಿಹಾಸವಿದೆ. ಇದು 1917ರ ಸ್ವಾತಂತ್ರ್ಯ ಪೂರ್ವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಕಟ್ಟಡವಾಗಿದೆ. ನೂರು ವರ್ಷಗಳ ಇತಿಹಾಸವಿರುವ ಕಟ್ಟಡ ತಾಲ್ಲೂಕಿನಲ್ಲಿ ಇರುವುದು ಖುಷಿಯ ವಿಚಾರವಾಗಿದೆ. 2017 ನೇ ಸಾಲಿನಲ್ಲಿ ಅಂದಿನ ತಹಶೀಲ್ದಾರ್  ಈ ಕಟ್ಟಡಕ್ಕೆ ಸುಣ್ಣ-ಬಣ್ಣ ಹಾಕಿಸಿ ನವೀಕರಣಗೊಳಿಸಿ ಶತಮಾನೋತ್ಸವ ಆಚರಣೆ ಮಾಡಿದ್ದರು. ಇತಿಹಾಸದ ಕಟ್ಟಡವೊಂದು ನಮ್ಮ ತಾಲ್ಲೂಕಿನಲ್ಲಿದೆ ಅದನ್ನು ನಿರ್ವಹಣೆ ಮಾಡಿಕೊಂಡು ಸ್ವಚ್ಚವಾಗಿಟ್ಟುಕೊಳ್ಳಬೇಕು. ಆದರೆ ಕಟ್ಟಡದ ಮೇಲೆ ಪ್ರಸ್ತುತ ಗಿಡ-ಗಂಟಿಗಳು ಬೆಳೆದು ಕಟ್ಟಡ ಹಾನಿಯಾಗುತ್ತಿದ್ದರೂ ಸಹ  ಕಟ್ಟಡದಲ್ಲಿ ಕುಳಿತು ಕೆಲಸ ಮಾಡುವ  ಅಧಿಕಾರಿಗಳಾಗಲೀ, ಅಥವಾ ತಾಲ್ಲೂಕು ಆಡಳಿತವಾಗಲೀ, ಕಟ್ಟಡದ ಮೇಲೆ ಬೆಳೆದಿರುವ ಗಿಡ ಗಂಟಿಗಳು ತೆಗೆಸುವಲ್ಲಿ, ಆವರಣದಲ್ಲೆ ಹಾಕಿಕೊಂಡಿರುವ ಕಾಗದ ಪತ್ರಗಳ ಕಸದ ರಾಶಿಯನ್ನು ಸ್ವಚ್ಚತೆ ಮಾಡುವಲ್ಲಿ ಸಂಪೂರ್ಣವಾಗಿ  ನಿರ್ಲಕ್ಷ್ಯವಹಿಸಿರುವುದು ಕಂಡುಬಂದಿದೆ.

ಪ್ರತಿನಿತ್ಯ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಂದಾಯ ಭವನಕ್ಕೆ ಬರುತ್ತಾರೆ.ಇದೇ ಕಟ್ಟಡದಲ್ಲಿ ಸರ್ಕಾರಿ ನೌಕರರ ಭವನ, ನಗರ ಯೋಜನಾ ಪ್ರಾಧಿಕಾರ ಕಛೇರಿ, ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಕೊಠಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾವು ಕೆಲಸ ಮಾಡುವ ಕಟ್ಟಡ ಮತ್ತು ಆವರಣ  ಸ್ವಚ್ಚತೆ ಮಾಡಿಕೊಳ್ಳುವಲ್ಲಿ ಬೇಜವಬ್ದಾರಿ ತೋರಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಂದಾಯ ಭವನದ ಕಟ್ಟಡದ ಸ್ಥಿತಿಯನ್ನು ಕಂಡು ಪ್ರಜ್ಞಾವಂತ ಜನರು, ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಟ್ಟಡದಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಕಟ್ಟಡದ ಸುರಕ್ಷತೆ, ಸ್ವಚ್ಚತೆ ಕಾಪಾಡಿಕೊಳ್ಳುವುದಕ್ಕೆ ಅಧಿಕಾರಿಗಳ ಕೈಯಲ್ಲಿ ಆಗುವುದಿಲ್ಲವೆಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಅಥವಾ ತಾಲ್ಲೂಕು ಆಡಳಿತ, ಇತಿಹಾಸದ ಕಂದಾಯ ಭವನದ ಕಟ್ಟಡದ ಕಡೆ ಗಮನಹರಿಸಿ ಕಟ್ಟಡದ ಗೋಡೆಗಳ ಮೇಲೆ ಬೆಳೆದು ನಿಂತಿರುವ ಗಿಡ-ಗಂಟಿಗಳು ತೆಗೆದು ಕಟ್ಟಡದ ಸುರಕ್ಷತೆ, ಸ್ವಚ್ಚತೆ ಮಾಡುತ್ತದೆಯೋ ಇಲ್ಲವೋ ಕಾದುನೋಡಬೇಕಿದೆ.

ವಿಶೇಷ  ವರದಿ: ಕೋಟಹಳ್ಳಿ ಅನಿಲ್ ಕುಮಾರ್ 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!