ಶಿಡ್ಲಘಟ್ಟ : ತಾಲೂಕಿನ ಹೆಸರಾಂತ ದೇವಾಲಯಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ದೇವಾಲಯ ಹಾಗೂ ದೇವರುಗಳ ನಾಡು ಖ್ಯಾತಿಯ ಚೋಳರ ಕಾಲದ ನಿರ್ಮಾಣದ ಶ್ರೀಮಳ್ಳೂರಾಂಭ ದೇವಿಯ ಜಯಂತೋತ್ಸವ ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಮುಂಜಾನೆಯಿಂದಲೇ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಕುಂಕುಮ ಅರ್ಚನೆ, ಉಯ್ಯಾಲ ಉತ್ಸವ ಸೇರಿದಂತೆ ಮದ್ಯಾಹ್ನ ಮಹಾ ಮಂಗಳಾರತಿ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
ರಾತ್ರಿ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಉತ್ಸವವನ್ನು ದೇವರ ಮಳ್ಳೂರಿನ ಭಕ್ತ ಮಹಾ ಜನರು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡರು. ಸುತ್ತ ಮುತ್ತ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವ ಮೂಲಕ ತಾಯಿಯ ಕೃಪೆಗೆ ಪಾತ್ರರಾದರು.
ಶ್ರೀ ಶ್ರೀಮಳ್ಳೂರಾಂಭ ದೇವಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮುನಿರಾಜು ಗೌಡ, ವಕೀಲರಾದ ಸುಬ್ರಮಣ್ಯಪ್ಪ, ಸೋಮಶೇಖರ್, ಹರೀಶ್ ಗೌಡ,ಎಲ್.ಮುನಿರಾಜು, ವೇಣುಗೋಪಾಲ್, ಮೋಹನ್, ಮುರಳಿ, ರಾಕೇಶ್, ಸೇರಿದಂತೆ ಊರಿನ ಗ್ರಾಮಸ್ಥರು ಮೆರಣಿಗೆಯಲ್ಲಿ ಭಾಗವಹಿಸಿದರು.