ಮಳ್ಳೂರಾಂಭ ದೇವಿ ಬ್ರಹ್ಮ ರಥೋತ್ಸವ ಪ್ರಯುಕ್ತ ಶ್ರೀ ಬಾಲಾಜಿ ಸೇವಾ ಟ್ರಸ್ಟಿನಿಂದ ಕಬ್ಬಡಿ ಪಂದ್ಯಾವಳಿ ಆಯೋಜನೆ.
ಶಿಡ್ಲಘಟ್ಟ : ಅನೇಕ ಊರ ಜಾತ್ರೆ, ಪರಿಷೆಗಳು ತನ್ನ ಮೂಲ ಆಶಯಗಳನ್ನು ಮರೆತು ನಡೆಯುತ್ತಿರುವ ಕಾಲದಲ್ಲಿ ದೇವರಮಳ್ಳೂರು ಗ್ರಾಮದಲ್ಲಿನ ಊರ ಜಾತ್ರೆ ತನ್ನ ನೆಲದ ಸೊಗಡನ್ನು ಉಳಿಸಿಕೊಂಡಿರುವುದು ಈ ಗ್ರಾಮಸ್ಥರ ಹೆಗ್ಗಳಿಕೆ ಎಂದು ಶ್ರೀಬಾಲಾಜಿ ಸೇವಾ ಟ್ರಸ್ಟ್‌ನ ಅಧ್ಯಕ್ಷ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಗ್ರಾಮ ದೇವತೆ ಮಳ್ಳೂರಾಂಭ ದೇವಿ ಬ್ರಹ್ಮರಥೋತ್ಸವ ಅಂಗವಾಗಿ ಗ್ರಾಮದಲ್ಲಿ ಶ್ರೀಬಾಲಾಜಿ ಸೇವಾ ಟ್ರಸ್ಟ್‌ನಿಂದ ಟ್ರಸ್ಟ್‌ನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಪ್ರಾಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಬ್ರಹ್ಮರಥೋತ್ಸವ ಅಂದ್ರೆ ವಾರದ ಕಾಲ ಪೂಜೆ ಪುನಸ್ಕಾರ ಉತ್ಸವಗಳು ಮಾತ್ರ ನಡೆಯುತ್ತವೆ. ಆದರೆ ದೇವರಮಳ್ಳೂರಲ್ಲಿ ಗ್ರಾಮೀಣ ಭಾಗದ ಸೊಗಡಿನ ಕಬಡ್ಡಿ ಪಂದ್ಯಾವಳಿ, ರಂಗೋಲೆ ಸ್ಪರ್ಧೆ, ಕೋಲಾಟದಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಇದು ಗ್ರಾಮಸ್ಥರ ಒಗ್ಗಟ್ಟನ್ನು ಹಾಗೂ ನಮ್ಮ ಹಿರಿಯರ ಕಾಲದಿಂದ ಬಂದ ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ನಿಮಗಿರುವ ಕಾಳಜಿಯ ಪ್ರತೀಕ, ಇದು ಗ್ರಾಮದಲ್ಲಿ ಸಾಮರಸ್ಯಗೂ ಅಭಿವೃದ್ದಿಗೂ ಪೂರಕವಾಗಿದ್ದು ನಿಮ್ಮೆಲ್ಲ ಕಾರ್ಯಕ್ರಮಗಳಿಗೂ ನಮ್ಮ ಟ್ರಸ್ಟ್ ಹಾಗೂ ನನ್ನ ವಯುಕ್ತಿಕ ನೆರವು ಇರಲಿದೆ ಎಂದು ಹೇಳಿದರು.
ಈ ಜಗತ್ತಿನಲ್ಲಿ ಜಾತಿ ಧರ್ಮ ಮತ ಭಾಷೆಯ ತಾರತಮ್ಯ ಇಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕಲೆ, ಸಂಗೀತ, ಸಿನಿಮಾ, ಕ್ರೀಡೆಗಷ್ಟೆ ಇದೆ. ಕ್ರೀಡೆಯನ್ನು ಕ್ರೀಡೆಯನ್ನಾಗಿಯೆ ನೋಡಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯಿಂದ ಆಟ ಆಡಿ ಎಂದು ಕೀಡಾಪಟುಗಳಿಗೆ ಶುಭ ಹಾರೈಸಿದರು.
ಪ್ರಥಮ ಬಹುಮಾನ ಪಡೆದ ತಂಡಕ್ಕೆ ೩೦ ಸಾವಿರ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ೨೦ ಸಾವಿರ, ತೃತೀಯ ಸ್ಥಾನಕ್ಕೆ ೧೦ ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ೫ ಸಾವಿರ ರೂ.ನಗದು ಮತ್ತು ಟ್ರೋಪಿ ನೀಡುವುದಾಗಿ ಘೋಷಿಸಿದರು.
ಕಬಡ್ಡಿ ಪಂದ್ಯಾವಳಿಯ ಆಯೋಜನೆಗೆ ಸಹಕರಿಸಿದ ಶ್ರೀಬಾಲಾಜಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಗ್ರಾಮದ ನಿವೃತ್ತ ಹಿರಿಯ ಕಬಡ್ಡಿ ಆಟಗಾರ ಕೆ.ನಾರಾಯಣಸ್ವಾಮಿ ಸೇರಿದಂತೆ ಹಲವು ಕಬಡ್ಡಿ ಆಟಗಾರರನ್ನು, ರಾಜ್ಯ ಪ್ರಶಸ್ತಿ ವಿಜೇತ ಯುವ ಕವಿ ಗ್ರಾಮದ ಚನ್ನಕೃಷ್ಣ ಅವರನ್ನು ಗೌರವಿಸಲಾಯಿತು.
ದೇವರಮಳ್ಳೂರು ಗ್ರಾಮದ ತಂಡ ಸೇರಿದಂತೆ ರಾಜ್ಯದ ನಾನಾ ಕಡೆಯಿಂದ 22 ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಭಾಗವಹಿಸಿದ್ದವು.
ಮುಖಂಡರಾದ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ದೊಗರನಾಯಕನಹಳ್ಳಿ ಆಂಜನೇಯಗೌಡ, ಕನ್ನಪ್ಪನಹಳ್ಳಿ ಲಕ್ಷ್ಮಿನಾರಾಯಣ್, ಸೋಮಶೇಖರ್, ಸೊಣ್ಣೇನಹಳ್ಳಿ ಮುನಿರಾಜು, ರೆಡ್ಡಿಸ್ವಾಮಿ, ಮಳ್ಳೂರಾಂಭ ದೇವಾಲಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ವಕೀಲ ಮುನಿರಾಜಗೌಡ, ಸುಬ್ರಮಣ್ಯಪ್ಪ, ಸಮಿತಿಯ ನಿರ್ದೇಶಕರು, ಗಾಮಸ್ಥರು, ಕ್ರೀಡಾಭಿಮಾನಿಗಳು ಹಾಜರಿದ್ದರು.