ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನಡೆಯುವ ಕಾರ್ಯಕ್ರಮ.
ಶಿಡ್ಲಘಟ್ಟ : ಗಿಡ ಮರಗಳು ಬೆಳೆಸುವ ಮೂಲಕ ಪರಿಸರವನ್ನ ಸಂರಕ್ಷಣೆ ಮಾಡಬೇಕು ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ ಮರಗಳಿಂದ ನಾವು ಉಸಿರಾಡಲು ಆಕ್ಸಿಜನ್ ಬೇಕು ಪ್ರಕೃತಿಯಿಂದ ನಮಗೆ ಉತ್ತಮ ಗಾಳಿ ಆಕ್ಸಿಜನ್ ಸಿಗಬೇಕು ಎಂದರೆ ನಾವೆಲ್ಲರೂ ಗಿಡ – ಮರಗಳು ಬೆಳೆಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಷಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಪ್ರಶಾಂತ್ ಸಿ.ಎಸ್ ಅವರು ಕರೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕಿನ ಮಳ್ಳೂರು ವಲಯದ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಗಿಡ ನೆಡಸುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗಿಡಗಳು ಬೆಳೆಸಿ, ಮರಗಳನ್ನು ಕಡಿಯದಂತೆ ಸಂರಕ್ಷಣೆ ಮಾಡಬೇಕು ಗಿಡ- ಮರಗಳಿಂದ ಜೀವ ಸಂಕುಲ ಉಳಿಯುತ್ತದೆ. ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ ಅದೆಷ್ಟು ಕಷ್ಟ ಅನುಭವಿಸಿದರು ಎಂದು ನಾವೆಲ್ಲರೂ ನೋಡಿದ್ದೇವೆ. ಶಾಲೆಯ ಪ್ರತಿಯೊಬ್ಬ ಮಗುವು ನಿಮ್ಮ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಣೆ ಮಾಡಿಕೊಂಡು ಪರಿಸರದ ಬಗ್ಗೆ ಕಾಳಜಿ ಬೆಳಸಿಕೊಳ್ಳಬೇಕು ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಿಗುವ ಸೌಲಭ್ಯಗಳು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳುವಂತೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಸುಧಾಕರ್ ಮಾತನಾಡಿ ಗಿಡ ನೆಡುವುದು ಎಷ್ಟು ಮುಖ್ಯವೋ ಅದನ್ನು ಪೋಷಣೆ ಮಾಡಿ ಸಂರಕ್ಷಣೆ ಮಾಡೋದು ಸಹ ಅಷ್ಟೇ ಮುಖ್ಯ, ಗಿಡಗಳನ್ನು ನೆಡುವುದು ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗಬಾರದು ಮುಂದಿನ ಪೀಳಿಗೆಗೆ ಪರಸರವನ್ನು ಸಂರಕ್ಷಣೆ ಮಾಡಬೇಕು ಎಂದು ಅಭಿಪ್ರಾಯ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಪ್ರಸಾದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಗೌಡ ಅರಣ್ಯ ವಲಯ ಅಧಿಕಾರಿ ಜೈ ಚಂದ್ರ , ಅಪ್ಪೇಗೌಡನಹಳ್ಳಿ ತ್ಯಾಗರಾಜು, ಅರಣ್ಯ ಇಲಾಖೆ ಸಿಬ್ಬಂದಿ, ಶಾಲೆಯ ಸಿಬ್ಬಂದಿ, ವಲಯದ ಮೇಲ್ವಿಚಾರಕ ಧನಂಜಯ್, ಒಕ್ಕೂಟದ ಉಪಾಧ್ಯಕ್ಷರಾದ ದೇವರಾಜ್, ಸೇವಾ ಪ್ರತಿನಿಧಿಗಳಾದ ಅನಿತಾ, ಮುನಿರತ್ನ, ಸ್ವ ಸಹಾಯ ಪ್ರಗತಿ ಬಂದು ಸಂಘದ ಸದಸ್ಯರು, ಶಾಲೆಯ ಮಕ್ಕಳು ಹಾಜರಿದ್ದರು.